More

    ಶಿವಮೊಗ್ಗದಲ್ಲಿ ಮತದಾನ ಶಾಂತಿಯುತ

    ಶಿವಮೊಗ್ಗ: ಲೋಕಸಭಾ ಚುನಾವಣೆ ಮಂಗಳವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಸೊರಬ ಹಾಗೂ ಸಾಗರ ತಾಲೂಕಿನ ತಲಾ ಒಂದು ಕಡೆ ಇವಿಎಂನಲ್ಲಿ ಲೋಪ ಉಂಟಾಗಿ ಮತದಾನ ಪ್ರಕ್ರಿಯೆ ಕೊಂಚ ವಿಳಂಬವಾಯಿತು. ಮತಗಟ್ಟೆ ಹೊರಗಡೆ ಹಲವೆಡೆ ಕಾರ್ಯಕರ್ತರ ನಡುವೆ ಸಣ್ಣ ಪುಟ್ಟ ವಾಗ್ವಾದಗಳೂ ನಡೆದವು. ಇದರ ಹೊರತಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

    ಪ್ರತಿ ಚುನಾವಣೆಯಲ್ಲಿ ಬೆಳಗ್ಗಿನ ಒಂದೆರಡು ತಾಸು ನೀರಸ ಮತದಾನ ನಡೆದ ನಿದರ್ಶನಗಳುಂಟು. ಆದರೆ ಈ ಬಾರಿ ಬೆಳಗ್ಗೆಯಿಂದಲೇ ಮತದಾರರು ಹುರುಪಿನಿಂದ ಹಕ್ಕು ಚಲಾಯಿಸಿದರು. ಸತತವಾಗಿ ಮತದಾನ ಏರಿಕೆಯಾಯಿತು. ಬೆಳಗ್ಗೆ 11ರ ಬಳಿಕ ಬಿಸಿಲಿನ ಬೇಗೆ ಹೆಚ್ಚುವುದರಿಂದ ಮತದಾನ ಕಡಿಮೆಯಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಗ್ರಾಮೀಣ ಭಾಗದ ಮತದಾರರು ಬಿರು ಬಿಸಿಲನ್ನೂ ಲೆಕ್ಕಿಸದೇ ಹಕ್ಕು ಚಲಾಯಿಸಿದರು.
    ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದ ಹಳ್ಳಿಗಳಲ್ಲಿ ಮತದಾನದ ಖದರ್ ಜೋರಾಗಿತ್ತು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಬೇಕೆಂಬ ಕಾರಣದಿಂದ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿದ ಪರಿಣಾಮ ಎಂಬಂತೆ ಶಿವಮೊಗ್ಗ ನಗರದಲ್ಲೂ ಮತಗಟ್ಟೆಗಳತ್ತ ಮತದಾರರು ಬೆಳಗ್ಗೆಯೇ ತೆರಳಿದರು.
    ಓಟಿ ರಸ್ತೆಯ ಕೃಷಿ ಇಲಾಖೆ ಮತಗಟ್ಟೆ, ಜಿಪಂ ಆವರಣದ ಅರಮನೆ ಮಾದರಿ ಮತಗಟ್ಟೆ, ಹರಕೆರೆ, ನ್ಯೂಮಂಡ್ಲಿ, ರವೀಂದ್ರ ನಗರ ಸರ್ಕಾರಿ ಶಾಲೆ ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆಯೇ ಮತ ಚಲಾಯಿಸಿದರು. ಮಧ್ಯಾಹ್ನ 1ರ ವೇಳೆಗೆ ಜಿಲ್ಲೆಯಲ್ಲಿ ಶೇ.45 ಮತದಾನವಾಗಿತ್ತು. ಮಧ್ಯಾಹ್ನ 3ಕ್ಕೆ ಈ ಪ್ರಮಾಣ ಶೇ.58ಕ್ಕೆ ಏರಿಕೆಯಾಗಿತ್ತು.
    ಶಿವಮೊಗ್ಗ ಜಿಪಂನ ಅರಮನೆ ಮಾದರಿ ಮತಗಟ್ಟೆಯಲ್ಲಿ ಮತ ಚಲಾಯಿಸಿದವರು ಬಳಿಕ ಕಿರೀಟ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಮಿಸಿದರು. ಜಿಲ್ಲೆಯ ಎಲ್ಲ ಮತಗಟ್ಟೆಗಳ ಪೈಕಿ ಈ ಬೂತ್ ಅತ್ಯಂತ ಆಕರ್ಷಣೀಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts