More

    ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ಬೇಡಿಕೆ

    ಮೂಡಿಗೆರೆ: ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇರುವುದರಿಂದ ಅಭ್ಯರ್ಥಿಗಳ ಪ್ರಚಾರದ ಕಾವು ಜೋರಾಗಿದೆ. ಮನೆ ಮನೆಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಇತ್ತ ಗ್ರಾಮಸ್ಥರೂ ಮನೆಗೆ ಬರುವ ಅಭ್ಯರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದೇವೆ. ಪಂಪ್​ಸೆಟ್ ಕೆಟ್ಟುಹೋಗಿದೆ, ವಿದ್ಯುತ್ ಸರಿಯಿಲ್ಲ ಎಂಬ ಕಾರಣ ನೀಡಿ ವಾರಗಟ್ಟಲೆ ನೀರು ಬಿಡುತ್ತಿಲ್ಲ. ಗ್ರಾಪಂನಲ್ಲಿ ನೀರಿನ ಟ್ಯಾಂಕರ್ ಇದ್ದರೂ ಗ್ರಾಮಸ್ಥರಿಗೆ ನೀರು ಪೂರೈಸುತ್ತಿಲ್ಲ. ಸಭೆ, ಸಮಾರಂಭಗಳಿಗೆ ಬಾಡಿಗೆ ಪಡೆದು ನೀರು ಪೂರೈಕೆ ಮಾಡುತ್ತಿದ್ದೀರಿ ಎಂದು ಮತದಾರರು ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಚರಂಡಿಯಿಲ್ಲ, ರಸ್ತೆ ಡಾಂಬರೀಕರಣವಾಗಿಲ್ಲ. ಸ್ಮಶಾನ ಜಾಗ ಒತ್ತುವರಿ, ವಿದ್ಯುತ್ ಸಮಸ್ಯೆ, ಲಾಕ್​ಡೌನ್ ಸಮಯದಲ್ಲಿ ಉಪವಾಸವಿದ್ದರೂ ಕೇಳುವವರೇ ಇರಲಿಲ್ಲ. ಈಗ ಮತ ಕೇಳಲು ಮಾತ್ರ ಬರುತ್ತೀರಾ? ಎಂದು ಅಭ್ಯರ್ಥಿಗಳು ಮತ್ತವರ ಹಿಂಬಾಲಕರನ್ನು ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಚಾರಕ್ಕೆ ತೆರಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಪಾಲಿಸಬೇಕು. 5 ಮಂದಿಗಿಂತ ಹೆಚ್ಚು ಜನ ಮತಯಾಚನೆಗೆ ತೆರಳಬಾರದು. ಚುನಾವಣೆ ಪಕ್ಷ ರಹಿತವಾಗಿರಬೇಕು. ಪಕ್ಷಗಳ ಮುಖಂಡರನ್ನು ಅಭ್ಯರ್ಥಿಗಳು ಹತ್ತಿರಕ್ಕೆ ಸೇರಿಸಿಕೊಳ್ಳಬಾರದು ಎಂದು ಚುನಾವಣೆ ಆಯೋಗ ನೀತಿ ಸಂಹಿತೆಯ ಮಾರ್ಗಸೂಚಿಯಲ್ಲಿ ತಿಳಿಸಿದ್ದರೂ ಅಭ್ಯರ್ಥಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರನ್ನು ಕರೆದೊಯ್ದು ಮತ ಕೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts