More

    ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ; ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು

    ಕೊಪ್ಪಳ: ಚುನಾವಣೆ ನೀತಿ ಸಂಹಿತಿ ಜಾರಿ ಇರುವುದರಿಂದ ರಾಜಕೀಯ ಪಕ್ಷಗಳು ಸಭೆ, ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಭೆ, ಸಮಾರಂಭ, ಕಾರ್ಯಕ್ರಮ, ವಾಹನ ಬಳಕೆಗೆ ಅನುಮತಿ ನೀಡಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ. ಆಯಾ ಕಚೇರಿಯಲ್ಲಿ ಅಥವಾ ಸುವಿಧಾ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಜಿಲ್ಲಾ ಮಟ್ಟದ ಕಾರ್ಯಕ್ರಮ ಅಥವಾ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆಯಬೇಕು. ಪತ್ರಿಕೆ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಕಡ್ಡಾಯವಾಗಿ ಒಪ್ಪಿಗೆ ಪಡೆಯಬೇಕು. ಚುನಾವಣಾ ಆಯೋಗ ವಿಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚುನಾವಣಾ ಕರಪತ್ರ ಮತ್ತು ಪೋಸ್ಟರ್‌ಗಳು ಮುದ್ರಕರ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸ ಒಳಗೊಂಡಿರಬೇಕು. ಪ್ರಕಾಶಕರ ವಿಳಾಸ, ಘೋಷಣೆ ಮತ್ತು ಇಬ್ಬರು ಪರಿಚಿತ ವ್ಯಕ್ತಿಗಳ ದೃಢೀಕರಣವಿರಬೇಕು. ಪೋಸ್ಟರ್ ಮತ್ತು ಕರಪತ್ರಗಳಲ್ಲಿ ಕಾನೂನು ಬಾಹಿರ ವಿಷಯ, ಜಾತಿ, ಧರ್ಮ ನಿಂದನೆಯ ವಿಷಯ ಮತ್ತು ಕ್ಷುಲ್ಲಕ ಭಾಷೆ ಬಳಸಬಾರದು. ಈ ನಿಯಮ ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಎಡಿಸಿ ಸಾವಿತ್ರಿ ಕಡಿ ಮಾತನಾಡಿ, ನೋಂದಾಯಿತ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳ ಉಮೇದುವಾರರು ಜಾಹೀರಾತು ಪ್ರಕಟವಾಗುವ 3 ದಿನಗಳ ಮುಂಚೆಯೇ ಅನುಮತಿ ಪಡೆಯಬೇಕು. ಮತದಾನಕ್ಕಿಂತ ಮೊದಲು 48 ಗಂಟೆ ಅವಧಿಯಲ್ಲಿ ಮಾತ್ರ ಮುದ್ರಣ ಮಾಧ್ಯಮಕ್ಕೆ ವಿಷಯದ ಪೂರ್ವ ಪ್ರಮಾಣೀಕರಣ ಅವಶ್ಯಕತೆಯಿದೆ. ನಿಯಮ ಉಲ್ಲಂಘಿಸಿದರೆ ಆರು ತಿಂಗಳ ಸಜೆ ಮತ್ತು 2000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
    ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಹಿರಾತು, ಕರಪತ್ರ, ಪೋಸ್ಟರ್, ಬ್ಯಾನರ್ ಅಳವಡಿಕೆ ಬಗ್ಗೆ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts