More

    ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ

    ವಿಜಯಪುರ: ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಯೋರ್ವ ಇದೀಗ ಬಿಜೆಪಿ ಟಿಕೆಟ್‌ಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದಾರೆ.

    ನಾಗಠಾಣ ಎಸ್‌ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಮಹೀಂದ್ರಕುಮಾರ ನಾಯಿಕ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನ ಡಿಜಿಪಿ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಐ ನಾಯಕ ರಾಜಕೀಯ ಸೇರಬೇಕೆಂಬ ಉದ್ದೇಶದೊಂದಿಗೆ ಅದರಲ್ಲೂ ಬಿಜೆಪಿಯ ತತ್ವ ಸಿದ್ದಾಂತವನ್ನು ಮೆಚ್ಚಿ ಕರ್ತವ್ಯಕ್ಕೆ ಇತಿಶ್ರೀ ಹಾಡಿದ್ದಾರೆ.

    ಇದನ್ನೂ ಓದಿ: ಕೆಪಿಸಿಸಿ ಕಚೇರಿ ಮುಂಭಾಗ ಹೈಡ್ರಾಮ; ಟಿಕೆಟ್‌ಗೆ ಒತ್ತಾಯಿಸಿ ತರೀಕೆರೆ ಕಾರ್ಯಕರ್ತರಿಂದ ಧರಣಿ, ವಿಷ ಸೇವನೆಗೆ ಯತ್ನ

    ಕಳೆದ 2023, ಮಾ.31 ರಂದೇ ರಾಜೀನಾಮೆ ಅಂಗೀಕಾರಗೊಂಡಿದ್ದು, ಸುದೀರ್ಘ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆಯ ಬೆಂಗಳೂರಿನ ಕಟ್ಟಡದ ಪಾವಟಿಗೆಗೆ ಭಾವನಾತ್ಮಕವಾಗಿ ಹಣೆಬಡಿದು ನಮಸ್ಕರಿಸಿ ಹೊರ ಬಂದಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕಿಳಿದಿದ್ದು ಟಿಕೆಟ್ ಸಿಗುವ ಭರವಸೆಯೊಂದಿಗೆ ತಮ್ಮದೇ ಬೆಂಬಲಿಗರ ಪಡೆ ಕಟ್ಟಿಕೊಂಡು ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಯಾರು ಈ ನಾಯಿಕ?

    ಮೂಲತಃ ವಿಜಯಪುರದ ಐನಾಪುರ ತಾಂಡಾದ ನಿವಾಸಿಯಾಗಿರುವ ಮಹೀಂದ್ರಕುಮಾರ ನಾಯಿಕ 2005ರಲ್ಲಿಯೇ ಬಿಜೆಪಿಯಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ತಾಲೂಕು ಪಂಚಾಯಿತಿ ವಿರೋಧ ಪಕ್ಷದ ಸದಸ್ಯರೂ ಆಗಿದ್ದರು. 2010ರಲ್ಲಿ ಪಿಎಸ್‌ಐ ಆಗಿ ನೇಮಕಗೊಂಡರು. ಮೈಸೂರಿನಲ್ಲಿ ತರಬೇತಿ ಪಡೆದು ವಿಜಯಪುರ ಸೇರಿದಂತೆ ಬಳ್ಳಾರಿ, ಧಾರವಾಡ, ಬಾಗಲಕೋಟೆ ಮತ್ತಿತರ ಕಡೆ ಸೇವೆ ಸಲ್ಲಿಸಿ ಸಿಪಿಐ ಆಗಿ ಬಡ್ತಿ ಹೊಂದಿದ್ದ ಇವರು ಇತ್ತೀಚೆಗಷ್ಟೇ ಸಿಪಿಐ ಆಗಿ ಬಡ್ತಿ ಹೊಂದಿದ್ದರು. ಬೆಂಗಳೂರಿನ ಡಿಜಿಪಿ ಕಚೇರಿಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು.

    ಇದನ್ನೂ ಓದಿ: ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಪರವಿದೆ; ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ; ಡಿಕೆಶಿ

    ರಾಜಕೀಯಕ್ಕೆ ಎಂಟ್ರಿ

    ಬಾಗಲಕೋಟೆಯಲ್ಲಿ ಪಿಎಸ್‌ಐ ಆಗಿದ್ದಾಗಲೇ ಮಹೀಂದ್ರ ನಾಯಕ ರಾಜೀನಾಮೆ ಸಲ್ಲಿಸಿದ್ದರು. ಆದರೆ, ರಾಜೀನಾಮೆ ಅಂಗೀಕಾರ ಸಲೀಸಲಾಗದ ಹಿನ್ನೆಲೆ ಈವರೆಗೂ ಬಹಿರಂಗವಾಗಿ ಪಕ್ಷ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ, ಕ್ಷೇತ್ರದಲ್ಲಿ ಇವರ ಅಭಿಮಾನಿ ಬಳಗ ಸಕ್ರಿಯವಾಗಿತ್ತು. ಬೆಂಬಲಿಗರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಹೀಂದ್ರ ನಾಯಕರ ಹೆಸರಿನಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇದೀಗ ಅಂದರೆ ಮಾ. 31 ರಂದು ರಾಜೀನಾಮೆ ಅಂಗೀಕಾರಗೊಳ್ಳೊತ್ತಿದ್ದಂತೆ ಆ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆಯಷ್ಟೆ.

    ಸಮಾಜ ಸೇವೆ ಮಾಡಬೇಕೆಂಬ ಮಹದಾಸೆಯಿಂದ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದೇನೆ. ಖಾಕಿ ತೊಟ್ಟು ಸಮಾಜ ಸೇವೆ ಮಾಡಲು ಸಾಕಷ್ಟು ಇತಿಮಿತಿಗಳಿದ್ದವು. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಟಿಕೆಟ್‌ಗಾಗಿ ಈಗಾಗಲೇ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಏಕೆಂದರೆ ಈ ಮೊದಲು ನಾನು ಬಿಜೆಪಿಯಿಂದಲೇ ತಾಪಂ ಸದಸ್ಯನಾಗಿದ್ದೆ. ಹೀಗಾಗಿ ಈ ಬಾರಿ ಟಿಕೆಟ್ ಸಿಗುವ ಭರವಸೆ ಇದೆ.
    | ಮಹೀಂದ್ರಕುಮಾರ ನಾಯಿಕ

    ಇದನ್ನೂ ಓದಿ: ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts