More

    ‘ಪಠಾಣ್​’ ವಿವಾದ: ರಾಜಕಾರಣಿಗಳು ನಟಿಯರ ಬಟ್ಟೆಗಳ ಬಗ್ಗೆ ಯೋಚಿಸುವುದನ್ನು ಬಿಡಲಿ ಎಂದ ಸ್ವರಾ

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಸಾಕಷ್ಟು ಕಾರಣವಾಗಿದೆ. ಈ ವಿವಾದಕ್ಕೆ ವಿರೋಧ ವ್ಯಕ್ತಪಡಿಸುವುದರ ಜತಗೆ, ಚಿತ್ರತಂಡದವರಿಗೆ ಹಲವು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಈಗ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಇದನ್ನೂ ಓದಿ: ಎಲ್ಲ ಸ್ಟಾರ್​ಗಳನ್ನು ಹಿಂದಿಕ್ಕಿ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾದ ವಿಜಯ್​ …

    ‘ಮಿಸಸ್​ ಫಲಾನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸ್ವರಾ ಅವರನ್ನು ಇತ್ತೀಚೆಗೆ ಈ ವಿವಾದದ ಕುರಿತು ಕೇಳಿದಾಗ, ‘ನಾವು ಹೇಗೆ ನಮ್ಮ ಕೆಲಸದ ಬಗ್ಗೆ ಗಮನಹರಿಸುತ್ತೇವೋ, ಅದೇ ರೀತಿ ರಾಜಕಾರಣಿಗಳು ಸಹ ನಟಿಯರ ಬಟ್ಟೆ ಬಗ್ಗೆ ಯೋಚಿಸುವುದನ್ನು ಬಿಟ್ಟು, ತಮ್ಮ ಕೆಲಸದ ಬಗ್ಗೆ ಫೋಕಸ್​ ಮಾಡಲಿ’ ಎಂದು ಹೇಳಿದ್ದಾರೆ.

    ಇದಕ್ಕೂ ಮೊದಲು ನಟ ಪ್ರಕಾಶ್​ ರೈ ಈ ವಿವಾದದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ‘ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ’ ಎಂದು ಹೇಳಿದ್ದರು.

    ಇನ್ನು, ಹಿರಿಯ ನಟಿ ಆಶಾ ಪರೇಖ್​, ‘ಏನೇ ಆದರೂ ಅದೊಂದು ಚಿತ್ರ ಅಷ್ಟೇ. ಅದರ ಉದ್ದೇಶ ಮನರಂಜನೆ ಅಷ್ಟೇ. ಒಬ್ಬ ನಟಿ ಕೇಸರಿ ಬಣ್ಣದ ಬಿಕಿನಿ ತೊಟ್ಟರು ಎಂಬ ಕಾರಣಕ್ಕೆ ಬ್ಯಾನ್​ ಮಾಡುವುದಕ್ಕೆ ಆಗುತ್ತದಾ? ಅದು ಸರಿಯಲ್ಲ. ಮೊದಲೇ ಚಿತ್ರಗಳು ಒಳ್ಳೆಯ ಪ್ರದರ್ಶನ ಕಾಣದೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರದೆ ಚಿತ್ರರಂಗ ಕ್ರಮೇಣ ಸಾಯುತ್ತಿದೆ. ಹೀಗಿರುವಾಗ ಬಾಯ್ಕಾಟ್​ ಮತ್ತು ಬ್ಯಾನ್​ ಎಂಬ ಪದಗಳೆಲ್ಲ ಬೇಕಾ? ಸಿನಿಮಾಗಳು ಹೀಗೇ ಸೋಲುತ್ತಿದ್ದರೆ, ಮುಂದೆ ಸಿನಿಮಾಗಳನ್ನು ಮಾಡುವುದು ಹೇಗೆ? ಇದೇ ಮುಂದುವರೆದರೆ ಚಿತ್ರರಂಗ ಅಂತ್ಯವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: RRR​ ಐತಿಹಾಸಿಕ ಸಾಧನೆ: ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಗೋಲ್ಡನ್​ ಗ್ಲೋಬ್ಸ್​-2023 ಗೌರವ

    ಇದೆಲ್ಲದರ ಮಧ್ಯೆ, ‘ಪಠಾಣ್​’ ಚಿತ್ರವು ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್​ ಬಿಡುಗಡೆಯಾಗಿ ಸಾಕಷ್ಟು ವೈರಲ್​ ಆಗಿದೆ.

    RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್​ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts