More

    RRR ಚಿತ್ರ ಪ್ರದರ್ಶನ ಮಾಡಿದ್ರೆ ಥಿಯೇಟರ್​ ಸುಡುತ್ತೇನೆ ಎಂದಿದ್ದ ಸಂಸದ ಪ್ರಶಸ್ತಿ ಗೆದ್ದಾಗ ಶುಭಾಶಯ ಕೋರಿದ್ರು..!

    ನವದೆಹಲಿ: ಥಿಯೇಟರ್‌ಗಳು ಆರ್‌.ಆರ್‌.ಆರ್ ಚಿತ್ರವನ್ನು ಪ್ರದರ್ಶಿಸಿದರೆ ಹಿಂಸಾಚಾರ ನಡೆಸುವುದಾಗಿ ನಿರ್ದೇಶಕ ರಾಜಮೌಳಿಗೆ ಬೆದರಿಕೆ ಹಾಕಿದ್ದ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕರೀಂನಗರದ ಸಂಸದ ಬಂಡಿ ಸಂಜಯ್ ಕುಮಾರ್ ಇದೀಗ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಪಡೆದುಕೊಂಡ ಆರ್​.ಆರ್​.ಆರ್​ ತಂಡವನ್ನು ಅಭಿನಂದಿಸಿದ್ದಾರೆ.

    RRR ಚಿತ್ರದ ಹಾಡು ನಾಟು ನಾಟು ಅತ್ಯುತ್ತಮ ಒರಿಜಿನಲ್​ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ಕೆಲವೇ ಗಂಟೆಗಳ ನಂತರ , ಸಂಸದರು “ಅತ್ಯುತ್ತಮ ಒರಿಜಿನಲ್​ ಗೀತೆ #NaatuNaatu ಗೆ @goldenglobes ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ @mmkeeravaani ಗಾರು ಮತ್ತು ಇಡೀ @RRRMovie ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆಯಿಂದ ಭಾರತ ವಿಶ್ವ ಮಟ್ಟದಲ್ಲಿ ಹೆಮ್ಮೆಪಡುವಂತೆ ಮಾಡಿದೆ’ ಟ್ವೀಟ್ ಮಾಡಿದ್ದಾರೆ.

    ನಿರ್ದೇಶಕ ರಾಜಮೌಳಿ ಐತಿಹಾಸಿಕ ಸತ್ಯಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಆರ್‌.ಆರ್‌.ಆರ್ ತೋರಿಸುವ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದರು.”ರಾಜಮೌಳಿ, ಸೆನ್ಸೇಷನ್​ ಮಾಡಲು ಕೊಮರಂ ಭೀಮನ ತಲೆಯ ಮೇಲೆ ಸ್ಕಲ್​ ಕ್ಯಾಪ್ ಹಾಕಿದರೆ, ನಾವು ಸುಮ್ಮನಿರುತ್ತೇವೆಯೇ? ಎಂದಿಗೂ ಇಲ್ಲ” ಎಂದು ಅವರು ನವೆಂಬರ್ 2020 ರಲ್ಲಿ ಹೇಳಿದ್ದರು.

    ಜೂನಿಯರ್ ಎನ್‌ಟಿಆರ್ ಪಾತ್ರದ ಕೋಮರಂ ಭೀಮ್ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ತೊಟ್ಟಿರುವ ದೃಶ್ಯವನ್ನು ತೆಗೆದುಹಾಕುವಂತೆ ಅವರು ನಿರ್ಮಾಪಕರನ್ನು ಒತ್ತಾಯಿಸಿದ್ದರು.

    “ಕೋಮರಂ ಭೀಮ್ ಅವರನ್ನು ಹಾಳು ಮಾಡಿ, ಆದಿವಾಸಿಗಳ ಹಕ್ಕುಗಳನ್ನು ಹಾಳು ಮಾಡಿ, ಆದಿವಾಸಿಗಳ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಮಾಡಲು ಹೊರಟರೆ ಲಾಠಿ ಪ್ರಹಾರ ಮಾಡುತ್ತೇವೆ. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಪ್ರತಿ ಥಿಯೇಟರ್‌ಗೆ ಬೆಂಕಿ ಹಚ್ಚುತ್ತೇವೆ” ಎಂದು ಸಂಸದರು ಈ ಹಿಂದೆ ಹೇಳಿದ್ದರು.

    ಆದರೂ, ರಾಜಮೌಳಿ ಸಿನಿಮಾ ಘೋಷಿಸಿದಾಗ, ‘ಈ ಚಿತ್ರ ಇಬ್ಬರು ಅಪ್ರತಿಮ ಬುಡಕಟ್ಟು ನಾಯಕರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರನ್ನು ಆಧರಿಸಿದೆಯಾದರೂ, ಇದು ಬಯೋಪಿಕ್ ಅಲ್ಲ’ ಎಂದು ಸ್ಪಷ್ಟಪಡಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts