More

    ದಿಲೀಪ್​ ಕುಮಾರ್​ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಮುಂಬೈ: ಬುಧವಾರ ಬೆಳಿಗ್ಗೆ ನಿಧನರಾದ ಬಾಲಿವುಡ್​ನ ಜನಪ್ರಿಯ ನಟ ದಿಲೀಪ್​ ಕುಮಾರ್​ ಅವರ ನಿಧನಕ್ಕೆ ಸಂತಾಪ ಹರಿದು ಬರುತ್ತಿದೆ. ಬಾಲಿವುಡ್​ನ ನಟ-ನಟಿಯರಷ್ಟೇ ಅಲ್ಲ, ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ‘ದಿಲೀಪ್​ ಕುಮಾರ್​ ಒಬ್ಬ ಲೆಜೆಂಡ್​ ಆಗಿ ಸದಾ ನೆನಪಿನಲ್ಲಿರುತ್ತಾರೆ. ಅದ್ಭುತ ಪ್ರತಿಭಾವಂತರಾಗಿದ್ದ ಅವರು, ತಮ್ಮ ಅಭಿನಯದಿಂದ ಹಲವರು ತಲೆಮಾರಿನ ಜನರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಅವರ ನಿಧನದಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ಭಾರೀ ನಷ್ಟವಾಗಿದೆ. ಅವರ ಇನ್ನಿಲ್ಲ ಎಂಬ ವಿಷಯವನ್ನು ಸಹಿಸಿಕೊಳ್ಳಲು ಅವರ ಕುಟುಂಬದವರು, ಸ್ನೇಹಿತರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

    ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ರಾಹುಲ್​ ಗಾಂಧಿ ಸೇರಿದಂತೆ ಹಲವರು ದಿಲೀಪ್​ ಕುಮಾರ್​ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ದಿಲೀಪ್​ ಕುಮಾರ್​ ನಿಧನ … ಶೋಕದಲ್ಲಿ ಬಾಲಿವುಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts