More

    ಸೌರಶಕ್ತಿ ಚಾಲಿತ ಪಂಪ್​ಸೆಟ್ ಉತ್ತೇಜನಕ್ಕೆ ನೀತಿ

    ಬೆಂಗಳೂರು: ಸೌರಶಕ್ತಿ ಚಾಲಿತ ಕೃಷಿ ಪಂಪ್​ಸೆಟ್​ಗಳನ್ನು ಉತ್ತೇಜಿಸುವ ನೀತಿ ರೂಪಿಸುವುದು, ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25 ಮೀಸಲಾತಿ ಸೇರಿ ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯಪಾಲ ವಿ.ಆರ್.ವಾಲಾ ತೆರೆದಿಟ್ಟರು.

    ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ 20 ಪುಟಗಳ ಭಾಷಣ ಮಾಡಿದ ಅವರು, ಸ್ವತಂತ್ರವಾದ ಮತ್ತು ಗ್ರಿಡ್ ಸಂಪರ್ಕ ಹೊಂದಿದ ಸೌರಶಕ್ತಿ ಚಾಲಿತ ಕೃಷಿ ಪಂಪ್​ಸೆಟ್​ಗಳನ್ನು ಉತ್ತೇಜಿಸಲು ಸರ್ಕಾರ ಹೊಸ ನೀತಿಯೊಂದನ್ನು ರೂಪಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.

    ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬಾಧಿತರಾದ 6.38 ಲಕ್ಷ ರೈತರಿಗೆ 1,126 ಕೋಟಿ ರೂ. ಅನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಿದೆ. ಮನೆ ಮಂಜೂರಿಗೆ ಮಾಡಿದ ಹಣಕಾಸು ನೆರವು ದೇಶದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸರ್ಕಾರ ಈವರೆಗೆ 1.24 ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ 827 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಪ್ರತಿ ವರ್ಷ 4 ಸಾವಿರ ರೂ. ಧನಸಹಾಯ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು. ಕೊಪ್ಪಳ, ಬೀದರ್, ಗದಗದಲ್ಲಿ ಅಲ್ಟ್ರಾ ಮೆಗಾ ಪವರ್ ಪಾರ್ಕ್ ಸ್ಥಾಪಿಸುವ ಯೋಜನೆ ಪ್ರಗತಿಯಲ್ಲಿದೆ. ದೇಶದಲ್ಲೇ ಆರ್ಥಿಕ ಸಂಪನ್ಮೂಲಗಳ ವೃದ್ಧಿಗಾಗಿ ಆರ್ಥಿಕ ಕ್ರೋಢೀಕರಣದ ಮಾರ್ಗನಕ್ಷೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ನಿಗದಿಪಡಿಸಲಾದ ಆರ್ಥಿಕ ಮತ್ತು ಸಾಲ ಕ್ರೋಢೀಕರಣದ ಗುರಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸದನದಲ್ಲಿ ರಚನಾತ್ಮಕ ಚರ್ಚೆಯಾಗಲಿ ಎಂದು ಉಭಯ ಸದನಗಳ ಸದಸ್ಯರಿಗೆ ರಾಜ್ಯಪಾಲರು ಸಲಹೆ ನೀಡಿದರು.

    ಭಾಷಣದ ಮುಖ್ಯಾಂಶಗಳು

    ನೆರೆ ಹಾನಿಗೊಳಗಾದ ಕುಟುಂಬಗಳು ಗೃಹೋಪಯೋಗಿ ವಸ್ತು ಖರೀದಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ ಮತ್ತು ರಾಷ್ಟ್ರ ವಿಪತ್ತು ಪರಿಹಾರ ನಿಧಿಯಿಂದ 3,800 ರೂ.ಗಳಿಗೆ ಹೆಚ್ಚುವರಿಯಾಗಿ 6,200 ರೂ. ಸೇರಿಸಿ ಈವರೆಗೆ 2.07 ಲಕ್ಷ ಕುಟುಂಬಗಳಿಗೆ -ಠಿ;207 ಕೋಟಿ ಅನುದಾನ ಬಿಡುಗಡೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2019-20ನೇ ಸಾಲಿನಲ್ಲಿ -ಠಿ;1,500 ಕೋಟಿ ಹಂಚಿಕೆ ಮಾಡಲಾಗಿದೆ. 2019ರ ಡಿಸೆಂಬರ್ ಅಂತ್ಯಕ್ಕೆ 936 ಕೋಟಿ ರೂ. ವೆಚ್ಚ ಭರಿಸಲಾಗಿದೆ. 1 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ. ಎಸ್​ಡಿಆರ್​ಎಫ್ ಹಾಗೂ ಎನ್​ಡಿಆರ್​ಎಫ್ ಮಾನದಂಡ ಹೊರತುಪಡಿಸಿ ಪ್ರತಿ ಕುಟುಂಬಗಳಿಗೆ 10 ಸಾವಿರ ರೂ. ಹೆಚ್ಚುವರಿಯಾಗಿ ಸಹಾಯಧನ ನೀಡಲಾಗಿದೆ. ಈವರೆಗೂ 6.38 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1226 ಕೋಟಿ ರೂ. ನೀಡಿಕೆ. = 2019ರ ಡಿಸೆಂಬರ್ ಅಂತ್ಯದವರೆಗೆ 9 ಲಕ್ಷ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಪೋ›ತ್ಸಾಹ ಧನ ಸಂದಾಯಕ್ಕೆ -ಠಿ;691 ಕೋಟಿ ಬಿಡುಗಡೆ. ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ 450 ಕೋಟಿ ರೂ. ವೆಚ್ಚದಲ್ಲಿ ವಿಜಯನಗರ ಕಾಲುವೆ ಆಧುನೀಕರಣ ಹಾಗೂ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಲಪ್ರಭಾ ಕಾಲುವೆ ಯೋಜನೆ ಆಧುನೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ. 475 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೇಮಾವತಿ ನಾಲೆಯ 70 ಕಿ.ಮೀ. ಆಧುನೀಕರಣ ಹಾಗೂ 500 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನಾಲೆಯ 166 ಕಿ.ಮೀ. ಆಧುನೀಕರಣ ಕಾಮಗಾರಿ, 4050 ಕೋಟಿ ರೂ. ವೆಚ್ಚದಲ್ಲಿ ಇತರ 21 ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ. ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಈವರೆಗೆ 3.30 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಿಕೆ. 2019ರ ನ.1ರಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 4 ಸಾವಿರ ರೂ.ಗೆ ಹೆಚ್ಚಳ. ಚಿಕ್ಕಮಗಳೂರು, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಸ್ತಾವನೆಗೆ ಅನುಮೋದನೆ ಜತೆಗೆ ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ ಕಾರ್ಯಾರಂಭ. ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದ ಗೌರವಧನವನ್ನು ಮಾಸಿಕ 8ರಿಂದ 10 ಸಾವಿರ ರೂ., ಸಹಾಯಕರ ಗೌರವಧನವನ್ನು 4 ಸಾವಿರದಿಂದ 5,250 ರೂ.ಗಳಿಗೆ ಹೆಚ್ಚಳ. ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಹಾಗೂ ಹೆಚ್ಚುವರಿ 10 ಸಾವಿರ ಸ್ವಸಹಾಯ ಗುಂಪು ಹೊಸದಾಗಿ ರಚಿಸುವ ಗುರಿ ನಿಗದಿ. ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಒಗ್ಗೂಡಿಸುವ ಮೂಲಕ 1-12ನೇ ತರಗತಿಯವರೆಗೆ 276 ಪಬ್ಲಿಕ್ ಶಾಲೆ ಆರಂಭ. ಶಾಲಾ ಮಕ್ಕಳು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಲು ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ವಾಟರ್ ಬೆಲ್ (ನೀರು ಸೇವನೆಯ ಘಂಟೆ) ಎಂಬ ಹೊಸ ಪರಿಕಲ್ಪನೆಯ ಪರಿಚಯ. 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ 1.7 ಲಕ್ಷ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ರಾಯಚೂರು ವಿವಿ ಸ್ಥಾಪನೆಗೆ ಅನುಮೋದನೆ.

    ಪ್ರಸ್ತಾಪವಾಗದ ಸಿಎಎ, ಎನ್​ಆರ್​ಸಿ!

    ವಿಧಾನಮಂಡಲ ಜಂಟಿ ಅಧಿವೇಶನ ಯಾವುದೇ ಪ್ರತಿಭಟನೆ, ವಾದ-ವಿವಾದ ವಿಲ್ಲದೆ ಶಾಂತವಾಗಿ ಮುಕ್ತಾಯಗೊಂಡಿತು. ರಾಜ್ಯಪಾಲ ವಾಲಾ, ಸಿಎಎ, ಎನ್​ಆರ್​ಸಿ ಪ್ರಸ್ತಾಪಿಸಿದರೆ ಭಾಷಣಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್-ಜೆಡಿಎಸ್ ಸದಸ್ಯರು ತಯಾರಿದ್ದರು. ರಾಜ್ಯಪಾಲರು ಈ ವಿಷಯಗಳನ್ನು ಪ್ರಸ್ತಾಪಿಸಲೇ ಇಲ್ಲ. ಬದಲಾಗಿ ರಾಜ್ಯದ ಅಭಿವೃದ್ಧಿಯನ್ನೇ ಕೇಂದ್ರೀಕರಿಸಿ ಸಿದ್ಧಪಡಿಸಲಾದ ಭಾಷಣ ಓದಿದರು.

    ಸಿಎಎ ಪ್ರಸ್ತಾಪಕ್ಕೆ ಕತ್ತರಿ: ಕಲಾಪವನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ರಾಜ್ಯಪಾಲರ ಭಾಷಣದಲ್ಲಿ ಸಿಎಎ ಪ್ರಸ್ತಾಪವನ್ನು ಕೊನೇ ಘಳಿಗೆಯಲ್ಲಿ ಕೈ ಬಿಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿಎಎ ವಿರುದ್ದ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾರಣ, ಭಾಷಣದಲ್ಲಿ ಸಿಎಎ ವಿಷಯ ಪ್ರಸ್ತಾಪ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಅದಕ್ಕೆ ಸಮ್ಮತಿಸಿದರು ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts