More

    ಗಡಿಯಲ್ಲಿ ಡ್ರೋನ್ ಕಣ್ಗಾವಲು, ಹೆಜಮಾಡಿಯಲ್ಲಿ ಪೊಲೀಸರಿಂದ ಬಿಗಿ ಭದ್ರತೆ

    ಪಡುಬಿದ್ರಿ: ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ಸೀಲ್‌ಡೌನ್ ಮುಂದುವರಿದಿದ್ದು, ಪೊಲೀಸರು ಡ್ರೋನ್ ಕ್ಯಾಮರಾ ಬಳಸಿ ಪಡುಬಿದ್ರಿ ಮತ್ತು ಕಾಪು ಪರಿಸರದಲ್ಲಿ ತಪಾಸಣೆ ಆರಂಭಿಸಿದ್ದಾರೆ.

    ಹೆಜಮಾಡಿಯಲ್ಲಿ ಪೊಲೀಸರ ಡ್ರೋನ್ ಕ್ಯಾಮರಾ ವಿದ್ಯುತ್ ತಂತಿಗೆ ಅಪ್ಪಳಿಸಿ ನೆಲಕ್ಕುರುಳಿ ಹಾನಿಯಾಗಿದೆ. ತಕ್ಷಣ ಬದಲಿ ಕ್ಯಾಮರಾ ಬಳಸಿ ತಪಾಸಣೆ ಮುಂದುವರಿಸಲಾಯಿತು. ಜಿಲ್ಲೆಯ ವಿವಿಧೆಡೆ ಡ್ರೋನ್ ಕ್ಯಾಮರಾ ಮೂಲಕ ತಪಾಸಣೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ಕಾಪುವಿನ ಛಾಯಾಗ್ರಾಹಕರೊಬ್ಬರನ್ನು ಗೊತ್ತುಪಡಿಸಿದ್ದು, ಗುರುವಾರ ತಪಾಸಣೆ ಕಾರ್ಯ ಆರಂಭಗೊಂಡಿದೆ.

    ಅಂಗಡಿ ಬಂದ್: ಕೆಲವೊಂದು ಸೇವೆಗಳಿಗೆ ಲಾಕ್‌ಡೌನ್ ವಿರಹಿತಗೊಳಿಸಿ ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿ ಮರೆತು ಪಡುಬಿದ್ರಿ, ಕಾಪು ಪರಿಸರದಲ್ಲಿ ಶುಕ್ರವಾರ ತೆರೆದಿದ್ದ ಮಳಿಗೆಗಳನ್ನು ಪೊಲೀಸರು ಮುಚ್ಚಿಸಿದರು. ಹಾರ್ಡ್‌ವೇರ್, ಸಿಮೆಂಟ್, ಇಲೆಕ್ಟ್ರಿಕಲ್, ಪೇಂಟ್, ಫ್ಯಾನ್ಸಿ ಮಳಿಗೆಗಳನ್ನು ಕೆಲವರು ತೆರೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts