More

    ಬಾಲ್ಯವಿವಾಹ ತಡೆದ ಪೊಲೀಸರು

    ಕೋಲಾರ: ಹದಿನೇಳು ವರ್ಷದ ಬಾಲಕಿಯ ಮದುವೆಗೆ ಸಿದ್ಧತೆ ನಡೆದಿರುವ ಮಾಹಿತಿ ತಿಳಿದ ಪೊಲೀಸರು ಶನಿವಾರ ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಸಿ ಕೋಲಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಂಡಕ್ಕೆ ಒಪ್ಪಿಸಿದ್ದಾರೆ.

    ತಾಲೂಕಿನ ಸುಗಟೂರು ಹೋಬಳಿಯ ಗ್ರಾಮವೊಂದರಲ್ಲಿ ಬಾಲಕಿಗೆ ಮದುವೆ ಮಾಡಲು ಪಾಲಕರು ಸಿದ್ಧತೆ ನಡೆಸಿದ್ದರು. ಮಹಿಳಾ ಠಾಣೆ ಪೊಲೀಸರು ತಾಲೂಕಿನ ಕಲ್ಯಾಣ ಮಂಟಪವೊಂದರದಲ್ಲಿ ಶನಿವಾರ ಆರತತೆ ಇಟ್ಟುಕೊಂಡಿದ್ದರು. ಭಾನುವಾರ ಮದುವೆ ನಡೆಸಲು ಸಿದ್ಧತೆ ನಡೆದಿತ್ತು. ಇದು ಬಾಲ್ಯವಿವಾಹ ಎಂದು ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ನಿರ್ದೇಶನದಂತೆ ಮಹಿಳಾ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಶಂಕರಾಚಾರ್​ ಕ್ರಮ ಕೈಗೊಂಡಿದ್ದಾರೆ.
    ಸಬ್​ಇನ್​ಸ್ಪೆಕ್ಟರ್​ ಎಂ.ಸರಸ್ವತಮ್ಮ, ಸಿಬ್ಬಂದಿ ಎಂ.ಭಾರತಿ, ಚಾಲಕ ಸುಭಾಷ್​ ಒಳಗೊಂಡು ತಂಡ ರಚಿಸಿ ಸಿಡಿಪಿಒ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಬಾಲ್ಯವಿವಾಹ ಮಾಡದಂತೆ ಪಾಲಕರಿಗೆ ಅರಿವು ಮೂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts