More

    ಆತ್ಮಹತ್ಯೆಗೆ ತಯಾರಾಗಿದ್ದವನ ಪ್ರಾಣ ರಕ್ಷಿಸಿದ ಪೊಲೀಸರು!

    ನವದೆಹಲಿ: ಫ್ಲೈಓವರ್​​ನ ರೈಲಿಂಗ್​ ಮೇಲೆ ನಿಂತು ಆತ್ಮಹತ್ಯೆಗೆ ತಯಾರಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ. ಭಾನುವಾರ ಸಂಜೆ ನವದೆಹಲಿಯ ಆಂಡ್ರೂಸ್​ ಗಂಜ್​ ಫ್ಲೈಓವರ್​​ ಬಳಿ ಪಾಟ್ರೋಲಿಂಗ್​ ಡ್ಯೂಟಿಯಲ್ಲಿದ್ದ ಪೊಲೀಸರ ಚಾಕಚಕ್ಯತೆಯ ಕಾರ್ಯಾಚರಣೆಯಿಂದಾಗಿ ದುರ್ಘಟನೆ ಸಂಭವಿಸುವುದು ತಪ್ಪಿದೆ.

    ಸೆಪ್ಟೆಂಬರ್ 12 ರಂದು ಸಂಜೆ 6 ಗಂಟೆಗೆ, ಕೋತ್ಲಾ ಮುಬಾರಕ್​ಪುರ್​ ಪೊಲೀಸರಿಗೆ ಮಧ್ಯವಯಸ್ಕ ಪುರುಷನೊಬ್ಬ ಫ್ಲೈಓವರ್​ ಮೇಲೆ ಹತ್ತಿ, ಜಿಗಿದು ಸಾಯುವುದಾಗಿ ಕೂಗಿಕೊಳ್ಳುತ್ತಿದ್ದ ಸುಳಿವು ಬಂತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್​ ತಂಡದ ಕೆಲವು ಸದಸ್ಯರು ಫ್ಲೈಓವರ್ ಕೆಳಗಡೆ ನೆಟ್​ ಹಿಡಿದು ನಿಂತರೆ, ಮತ್ತೆ ಕೆಲವರು ಅವನನ್ನು ತಡೆಯಲು ಫ್ಲೈಓವರ್​ ಮೇಲಕ್ಕೆ ಹೋದರು. ತನಗೆ ಜೀವನದಲ್ಲಿ ಬೇಸರವಾಗಿದೆ ಎಂದು ಹೇಳುತ್ತಿದ್ದ ಆ ವ್ಯಕ್ತಿಯ ಮನವೊಲಿಸುತ್ತಲೇ ಪೊಲೀಸ್ ಪೇದೆಯೊಬ್ಬರು ಆತನನ್ನು ಬಿಗಿಯಾಗಿ ಹಿಡಿದುಕೊಂಡು ಕೆಳಗಿಳಿಸಿಕೊಂಡರು ಎನ್ನಲಾಗಿದೆ.

    ಇದನ್ನೂ ಓದಿ: 2 ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಖೋಖೋ ಆಟಗಾರ್ತಿ, ಮಸಣದ ಪಾಲು

    ಪೊಲೀಸರಿಂದ ರಕ್ಷಿಸಲ್ಪಟ್ಟ 42 ವರ್ಷ ವಯಸ್ಸಿನ ಪುರುಷನು, ಉತ್ತರಾಖಂಡದ ಅಲ್ಮೋರಾದ ನಿವಾಸಿ ಜಗತ್​ ಸಿಂಗ್​ ಬಿಷ್ಟ್​ ಎಂಬುದಾಗಿ ಗುರುತಿಸಲ್ಪಟ್ಟಿದ್ದಾನೆ. ಹಾಲಿ ಹೌಜ್​ ಖಾಸ್​​ನಲ್ಲಿ ವಾಸಿಸುತ್ತಿದ್ದ ಆತನನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಟೆನ್ನಿಸ್​: ಜೋಕೋವಿಕ್​ರ ಕ್ಯಾಲೆಂಡರ್​ ಸ್ಲಾಂ ಕನಸು ಭಗ್ನ; ರಷ್ಯಾದ ಮೆಡ್ವೆಡೆವ್​ಗೆ ಒಲಿದ ಯುಎಸ್​ ಓಪನ್​ ಟ್ರೋಫಿ

    ದೇವಸ್ಥಾನದ ಬಳಿ ಗೃಹರಕ್ಷಕಿ ಜತೆ ಅಸಭ್ಯವಾಗಿ ವರ್ತಿಸಿದವನ ಬಂಧನ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts