More

    ನೇಮಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯಿಂದ ಅನ್ಯಾಯ…!

    ಶ್ರೀಕಾಂತ ಅಕ್ಕಿ
    ಬಳ್ಳಾರಿ: ಕರೊನಾ ನೆಪವೊಡ್ಡಿ ಸರ್ಕಾರವು ಕಲ್ಯಾಣ ಕರ್ನಾಟಕ ಸೇರಿ ವಿವಿಧೆಡೆ ಖಾಲಿಯಿರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ತುಂಬಿಕೊಳ್ಳದಿರಲು ನಿರ್ಧರಿಸಿದೆ. ಆದರೆ, ಇದುವರೆಗೂ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನಡೆಯುತ್ತಿರುವ ಅನ್ಯಾಯ ಮಾತ್ರ ಸರಿಪಡಿಸಲು ಮುಂದಾಗದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.

    ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಗುಲ್ಬರ್ಗಾ, ಬೀದರ್ ಜಿಲ್ಲೆಯೊಳಗೊಂಡ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಬದಲಿಸಿದೆಯಾದರೂ ನೇಮಕಾತಿ ವಿಭಾಗದಲ್ಲಿ ನಡೆಯುತ್ತಿರುವ ಮೋಸ ಸರಿಪಡಿಸುತ್ತಿಲ್ಲ.371-ಜೆ ಪ್ರಕಾರ ಹುದ್ದೆಗಳಲ್ಲಿ ಸಿಗಬೇಕಾದ ಮೀಸಲಾತಿಯೇ ಪರಿಗಣನೆಯಾಗದಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.

    ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದಿಂದ ತೀವ್ರ ಅನ್ಯಾಯ ಮಾಡಲಾಗುತ್ತಿದೆ.ಕಳೆದೆರಡು ವರ್ಷಗಳಿಂದ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿಯನ್ನೇ ಪರಿಗಣಿಸಿಲ್ಲ.ಇದರಿಂದ ನಮ್ಮ ಭಾಗದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.
    ನೊಂದ ಅಭ್ಯರ್ಥಿ, ಬಳ್ಳಾರಿ

    2014ರಿಂದಲೇ ಸಂವಿಧಾನದಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371-ಜೆ ವಿಶೇಷ ಮೀಸಲಾತಿಯಿದ್ದರೂ ರಾಜ್ಯ ಪೊಲೀಸ್ ಇಲಾಖೆಯಿಂದ ನಡೆಯುವ ಎಸ್‌ಐ ನೇಮಕಾತಿಯಲ್ಲಿ ಕಳೆದ 2ವರ್ಷದಿಂದ ಮೀಸಲಾತಿಯನ್ನೇ ಪರಿಗಣಿಸಿಲ್ಲ.ಪ್ರಾರಂಭದ 2016ರಲ್ಲಿ 428ಎಸ್‌ಐ ಹುದ್ದೆಗೆ ಕರೆದಿದ್ದ ಅರ್ಜಿಯಲ್ಲಿ ಕೂಡ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿ ಸರಿಯಾಗಿ ಪರಿಗಣನೆ ಮಾಡಲಿಲ್ಲ.ನಿಯಮದ ಪ್ರಕಾರ 32ಹುದ್ದೆ ಕಾಯ್ದಿರಿಸಬೇಕಿತ್ತು.ಆದರೆ, ಕೇವಲ 26ಹುದ್ದೆ ಕೊಟ್ಟು ಮಲತಾಯಿ ಧೋರಣೆ ಪ್ರಾರಂಭಿಸಿತು.

    ಅದಾದ ಬಳಿಕ 2018ರಲ್ಲಿ 184ಎಸ್‌ಐ ಹುದ್ದೆಗೆ ಅರ್ಜಿ ಕರೆದರೂ ಮೀಸಲಾತಿ ಪರಿಗಣಿಸದಿದ್ದರಿಂದ 15 ಹುದ್ದೆಗಳು ಅಭ್ಯರ್ಥಿಗಳಿಗೆ ದಕ್ಕಲಿಲ್ಲ. ಜುಲೈ-2019ರಲ್ಲಿ 200ಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದರೂ ಮೀಸಲಾತಿ ನೀಡದೆ 16ಹುದ್ದೆಗಳು ದೊರೆಯದಂತೆ ಮಾಡಲಾಯಿತು.2019ರ ಅಕ್ಬೊಂಬರ್‌ನಲ್ಲಿಯೂ 300ಎಸ್‌ಐ ಹುದ್ದೆಗೆ ಅರ್ಜಿ ಕರೆದಿದ್ದರೂ ಅನ್ಯಾಯ ಮಾಡಿ 24 ಹುದ್ದೆಗಳನ್ನು ಕಸಿದುಕೊಳ್ಳಲಾಯಿತು.

    ಇದನ್ನೂ ಓದಿ: VIDEO: ಕೂಲಿ ಕಾರ್ಮಿಕರ ಜಾಗ ತುಂಬೋದಕ್ಕೆ ಬರ್ತಿವೆ ರೊಬಾಟ್​​ಗಳು!

    ಹೈದ್ರಾಬಾದ್ ಕರ್ನಾಟಕವನ್ನು ಕೇವಲ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದರೇ ಸಾಲದು.ಅದರಂತೆ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು.ಹುದ್ದೆಗಳ ನೇಮಕಾತಿಯಲ್ಲಿಯೂ ಮೀಸಲಾತಿ ಪರಿಗಣಿಸದೇ ಅನ್ಯಾಯ ಮಾಡಲಾಗುತ್ತಿದೆ.ಇದರ ಜತೆಗೆ ಕರೊನಾವಿದ್ದರೂ ಸರ್ಕಾರದ ಆದಾಯಕ್ಕೆ ಕೊರತೆಯಾಗಿಲ್ಲ.ಅದರ ನೆಪವೊಡ್ಡಿ ಹುದ್ದೆ ತುಂಬಿಕೊಳ್ಳದಿರುವುದು ದುರಂತದ ಸಂಗತಿಯಾಗಿದೆ.
    ರಜಾಕ್ ಉಸ್ತಾದ್, ಕ-ಕ ಹೋರಾಟ ಸಮಿತಿ ಮುಖಂಡ, ರಾಯಚೂರು

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ 125 ಹುದ್ದೆಗಳಿಗೆ 2020ರ ಮಾರ್ಚ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ದುರಂತವೆಂದರೆ ಇದರಲ್ಲಿ ನಾನ್ ಕೆಕೆ ಭಾಗದವರಿಗೆ 10ಹುದ್ದೆ ಮೀಸಲಿರಿಸಿ ಪೊಲೀಸ್ ಇಲಾಖೆ ನೋಟಿಫೀಕೇಶನ್ ಹೊರಡಿಸಿತ್ತು.ಇದೇ ವೇಳೆ ಆಹ್ವಾನಿಸಿದ್ದ 431ಎಸ್‌ಐ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಮೀಸಲಾತಿ ಪರಿಗಣನೆ ಮಾಡಿಲ್ಲ.ವಾಸ್ತವವಾಗಿ ಶೇ.8ರಷ್ಟು ಸೀಟುಗಳು ಈ ಭಾಗದ ಅಭ್ಯರ್ಥಿಗಳಿಗೆ ದೊರಕಬೇಕಿತ್ತು.ಈ ಎರಡು ಹಂತದ ಹುದ್ದೆಗಳಿಗೆ ಅರ್ಜಿ ಕರೆದ ಬಳಿಕ ವಯೋಮಿತಿ ಹೆಚ್ಚಳ ಮಾಡಿದ ಹಿನ್ನಲೆ ಪೊಲೀಸ್ ಇಲಾಖೆ ನೋಟಿಫಿಕೇಶನ್ ಹಿಂಪಡೆದಿದೆ.

    ಅನ್ಯಾಯ ತಪ್ಪಿಸಿ:ಈ ರೀತಿ ನಿರಂತರವಾಗಿ ರಾಜ್ಯ ಪೊಲೀಸ್ ಇಲಾಖೆ ಕ-ಕ ಭಾಗಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ.ಇನ್ನಾದರೂ ಕ-ಕ ಭಾಗದ ಮೀಸಲಾತಿ ಸಮರ್ಪಕವಾಗಿ ಪರಿಗಣಿಸಬೇಕು.ಯಾವುದೇ ವಿಭಾಗದಲ್ಲಿ ನೇಮಕಾತಿ ನಡೆದರೂ ಅಲ್ಲಿ ಕ-ಕ ಭಾಗದ ಅಧಿಕಾರಿಯೊಬ್ಬರಿರಬೇಕು.ನೋಟಿಫಿಕೇಶನ್ ಬಿಡುವುದಕ್ಕಿಂತ ಮುಂಚೆ ಹುದ್ದೆಗಳ ಮಾದರಿ ಪಟ್ಟಿಯನ್ನು ಮೊದಲು ಎಚ್‌ಕೆಆರ್‌ಡಿಬಿಗೆ ಕಳುಹಿಸಿಬೇಕು, ಅಲ್ಲಿ ಅನುಮೋದನೆಗೊಂಡ ನಂತರವೇ ನೋಟಿಪಿಕೇಶನ್ ರಿಲೀಸ್ ಮಾಡಬೇಕು.ಅಂದಾಗ ಮಾತ್ರ ಕ-ಕ ಭಾಗಕ್ಕೆ ಹಾಗುವ ಅನ್ಯಾಯ ತಪ್ಪಿಸಬಹುದು ಎನ್ನುತ್ತಾರೆ ಪ್ರಜ್ಞಾವಂತರು.

    ನೇಮಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯಿಂದ ಅನ್ಯಾಯ...! ನೇಮಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯಿಂದ ಅನ್ಯಾಯ...!

    ವಯಸ್ಸಾದ ಮಹಿಳೆ ಎಂದೂ ನೋಡದೆ ಫೇಸ್​ಬುಕ್​ ಫ್ರೆಂಡ್ ಹೀಗಾ ವಂಚಿಸೋದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts