More

    ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳಿ

    ಶಿರಾಳಕೊಪ್ಪ: ಗೋಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಣೆ ಮಾಡುತ್ತಿರುವುದನ್ನು ವಿರೋಧಿಸಿ ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನಾ ಸಭೆ ನಡೆಸಿದರು.

    ಗೋಮಾತೆ ನಮ್ಮ ತಾಯಿ. ಪೊಲೀಸ್ ಇಲಾಖೆ ರಕ್ಷಣೆ ಮಾಡಬೇಕು. ಇಲ್ಲವಾದರೆ ನಾವೇ ಮಾಡಿಕೊಳ್ಳುತ್ತೇವೆ. ಗಂಡು ಕರು ಇದ್ದಲ್ಲಿ ಸಾಕುವುದಾದರೆ ಸಾಕಿ. ಸಾಧ್ಯವಾಗದಿದ್ದರೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ನೀಡಿದರೆ, ಅವರು ಗೋಶಾಲೆಗೆ ತಲುಪಿಸುತ್ತಾರೆ. ದಿನನಿತ್ಯ ಗೋವುಗಳನ್ನು ಆಹಾರಕ್ಕಾಗಿ ಹತ್ಯೆ ಮಾಡುವುದು ನಮ್ಮನ್ನು ಹೆತ್ತು, ಹೊತ್ತು, ಸಾಕಿದ ತಾಯಿಯನ್ನು ಹತ್ಯೆ ಮಾಡಿದಂತೆ ಎಂದು ವೇದಿಕೆಯ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಸತೀಶ್ ಪೂಜಾರ್ ಹೇಳಿದರು.
    ನಮ್ಮ ಕಾರ್ಯಕರ್ತರನ್ನು ಹೆದರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು. ಗೋಹತ್ಯೆಯನ್ನು ಪೊಲೀಸರು ತಡೆಯಬೇಕು. ಇಲ್ಲವಾದರೆ ನಾವೇ ತಡೆಯುತ್ತೇವೆ ಎಂದು ಎಚ್ಚರಿಸಿದರು.
    ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ದೇವರಾಜ್ ಅರಳಹಳ್ಳಿ ಮಾತನಾಡಿ, ಗೋಹತ್ಯೆ ತನಿಖೆಯನ್ನು ನಡೆಸುವುದರಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಲವಾಗಿದೆ. ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಕೊಟ್ಟಿಗೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕೆಲ ರಾಜಕಾರಣಿಗಳು ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೆ. ಅವರು ಹಿಂದು ವಿರೋಧಿ ಹೇಳಿಕೆ ನೀಡುತ್ತ ಶಾಂತಿ ಕದಡುತ್ತಿದ್ದಾರೆ. ಶಿರಾಳಕೊಪ್ಪದಲ್ಲಿ ಗೋಹತ್ಯೆ ಕೊನೆಯಾಗಬೇಕು. ಪೊಲೀಸರು ಕಟ್ಟೆಚ್ಚರ ವಹಿಸಬೇಕು. ಇಲ್ಲವಾದರೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಎಚ್ಚರಿಸಿದರು.
    ಹಿರಿಯ ಮುಖಂಡ ಬಿ.ಎಸ್ ಮಠದ್ ಮಾತನಾಡಿ, ಇತಿಹಾಸ ಬದಲಿಸಿದ ಗಂಡುಮೆಟ್ಟಿದ ಊರು ಶಿರಾಳಕೊಪ್ಪ. ಮಕ್ಕಳನ್ನು ದೇಶ ರಕ್ಷಣೆಗೆ ಮುಡಿಪಾಗಿಡುವಂತೆ ಆಶೀರ್ವದಿಸಬೇಕು ಎಂದರು.
    ಸಾವಿರಾರು ಯುವಕರು, ಸುತ್ತಮುತ್ತಲ ಗ್ರಾಮಗಳ ಹೋರಿ ಬೆದರಿಸುವ ಯುವಕರು ತಮ್ಮ ಹೋರಿಯೊಂದಿಗೆ ವಾಲ್ಮಿಕಿ ಭವನದಿಂದ ಶಿಕಾರಿಪುರ ರಸ್ತೆಯಲ್ಲಿ ಮೆರವಣಿಗೆ ಸಾಗಿ ಹಿರೇಕೆರೂರು ರಸ್ತೆಯ ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲಿ ಸೇರಿದರು. ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts