More

    ಗೋವಾಗೆ ತೆರಳುತ್ತಿದ್ದ ಪೃಥ್ವಿ ಷಾ ಮತ್ತು ಸ್ನೇಹಿತರನ್ನು ತಡೆದ ಪೊಲೀಸರು..!

    ಮುಂಬೈ: ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಪೃಥ್ವಿ ಷಾಗೆ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಶಾಕ್​ ನೀಡಿದ್ದಾರೆ. ಸದ್ಯ ಐಪಿಎಲ್​ ಮುಂದೂಡಿಕೆಯಿಂದಾಗಿ ಬಿಡುವು ಹೊಂದಿರುವ ಪೃಥ್ವಿ ಷಾ, ಗೆಳೆಯರೊಂದಿಗೆ ರಜೆಯ ಮಜಾ ಕಳೆಯಲು ಮುಂಬೈನಿಂದ ಗೋವಾಗೆ ತೆರಳುತ್ತಿದ್ದರು. ಕೋಲ್ಹಾಪುರ ಮಾರ್ಗವಾಗಿ ಗೋವಾಗೆ ತೆರಳಲು ಬಂದ ಪೃಥ್ವಿ ಷಾ ಅವರನ್ನು ಅಂಬೊಲಿ ಎಂಬಲ್ಲಿ ಪೋಲಿಸರು ತಡೆದಿದ್ದಾರೆ. ಈ ವೇಳೆ ಅಂತರ ರಾಜ್ಯ ಗಡಿ ದಾಟಲು ಇ-ಪಾಸ್​ ಕೇಳಲಾಗಿದೆ. ಆದರೆ, ಪೃಥ್ವಿ ಷಾ ಬಳಿಕ ಇ-ಪಾಸ್​ ಇರಲಿಲ್ಲ. ಬಳಿಕ 21 ವರ್ಷದ ಪೃಥ್ವಿ ಷಾ ಇ-ಪಾಸ್​ಗೆ ಸ್ಥಳದಲ್ಲೇ ನಿಂತು ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿದ ಒಂದು ಗಂಟೆಯೊಳಗೆ ಇ-ಪಾಸ್​ ದಕ್ಕಿದೆ. ಕೋವಿಡ್​-19ರಿಂದಾಗಿ ರಾಜ್ಯದ ಗಡಿ ದಾಟಲು ಮಹಾರಾಷ್ಟ್ರ ಸರ್ಕಾರ ಇ-ಪಾಸ್ ಕಡ್ಡಾಯಗೊಳಿಸಿದೆ. 

    ಇದನ್ನೂ ಓದಿ: ತುಗೂಯ್ಯಾಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್​ ಭವಿಷ್ಯ,

    ಇ-ಪಾಸ್​ ಸಿಕ್ಕಿದ ಬಳಿಕವೇ ಪೃಥ್ವಿ ಷಾ ಪ್ರಯಾಣ ಮುಂದವರಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್​ ಪ್ರವಾಸಕ್ಕೆ ಪ್ರಕಟಿಸಿದ ಟೀಮ್​ ಇಂಡಿಯಾದಲ್ಲಿ ಪೃಥ್ವಿ ಷಾ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ಷಾ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಐಪಿಎಲ್​ನಲ್ಲಿ ಉತ್ತಮ ಫಾಮ್​ರ್ನಲ್ಲಿದ್ದ ಷಾ, ಇದಕ್ಕೂ ಆಸ್ಟ್ರೆಲಿಯಾ ಪ್ರವಾಸದಲ್ಲಿ ಕಳಪೆ ನಿರ್ವಹಣೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಆಯ್ಕೆ ಸಮಿತಿಯೇ ಷಾ ಅವರಿಗೆ ತೂಕ ಇಳಿಸುವಂತೆಯೂ ಸೂಚಿಸಲಾಗಿತ್ತು.

    ಇದನ್ನೂ ಓದಿ: ನಾನಿನ್ನು ಕ್ವಾರಂಟೈನ್​ನಲ್ಲಿರುವೆ, ದಯವಿಟ್ಟು ಯಾರು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಾಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ?

    ತೂಕ ಕಡಿಮೆ ಮಾಡಿಕೊಳ್ಳುವ ವಿಷಯದಲ್ಲಿ ವಿಕೆಟ್​ ಕೀಪರ್​ ರಿಷಭ್​ ಪಂತ್​ ಅವರನ್ನು ನೋಡಿ ಕಲಿಯಿರಿ ಎಂದು ಷಾಗೆ ಆಯ್ಕೆ ಸಮಿತಿ ಖಡಕ್​ ಸೂಚನೆ ನೀಡಿತ್ತು. ಆಸೀಸ್​ ಪ್ರವಾಸದ ಬಳಿಕ ತವರಿನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಸರಣಿಗೆ ತಂಡದಿಂದ ಕೈಬಿಡಲಾಗಿತ್ತು. ಬಳಿಕ ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್​ ಕಂಡುಕೊಂಡಿದ್ದರು. ಬಳಿಕ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಗಮನಾರ್ಹ ನಿರ್ವಹಣೆ ತೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts