More

    ಸಜೀವ ಬಾಂಬ್ ನಿಷ್ಕ್ರಿಯಗೊಳಿಸಿದ ಪೊಲೀಸರು

    ಕನಕಪುರ: ಬೊಮ್ಮಸಂದ್ರದ ಬಳಿ ಉಳಿದಿದ್ದ ಒಂದು ಸಜೀವ ಸ್ಪೋಟಕವನ್ನು ಮಂಗಳವಾರ ನಿಷ್ಕ್ರಿಯಗೊಳಿಸಲಾಗಿದೆ. ತಾಮ್ರ ಸಂಗ್ರಹಿಸುವ ಆಸೆಯಿಂದ ಕೆಲವರು ಕಳೆದ ಗುರುವಾರ ಬೊಮ್ಮಸಂದ್ರದಲ್ಲಿ ಹಳೆಯ ಮಲ್ಟಿ ಪ್ಲೈ ಮಾರ್ಟರ್ ಲಾಂಚರ್ ಕಿಟ್ ಅನ್ನು ಬೆಂಕಿ ಹಚ್ಚಿ ಸ್ಪೋಟಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೇರಿ ವನ್ಯಜೀವಿ ಅರಣ್ಯಪ್ರದೇಶದ ಆರ್​ಎಫ್​ಒ ಕಿರಣ್​ಕುಮಾರ್ ಕರತಂಗಿ ಸಾತನೂರು ಪೊಲೀಸರಿಗೆ ಸೋಮವಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಠಾಣೆಯಲ್ಲೇ ಆತ್ಮಹತ್ಯೆಗೆ ಮಹಿಳೆ ಯತ್ನ

    ಸಜೀವ ಬಾಂಬ್ ಉಳಿದ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಮತ್ತು ಭದ್ರತೆ ವಿಭಾಗದ ಎಡಿಜಿಪಿ ಬಿ.ಎಸ್.ಸಂಧು ನೇತೃತ್ವದಲ್ಲಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸಜೀವ ಸ್ಪೋಟಕ ನಿಷ್ಕ್ರಿಯಗೊಳಿಸಲಾಯಿತು. ಪ್ರಕರಣದ ಗಂಭೀರತೆ ಮನಗಂಡಿರುವ ಎಸ್​ಪಿ ಅನೂಪ್ ಎ. ಶೆಟ್ಟಿ, ತನಿಖೆಗಾಗಿ ಕನಕಪುರ ಸಿಪಿಐ ಕೆ. ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ಮಿಲಿಟರಿ ಶಸ್ತ್ರಾಸ್ತ್ರ: ಈ ಬಾಂಬುಗಳನ್ನು 2002ರಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಬಿಟ್ಟು ಹೋಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

    54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts