More

    ಕಂಗನಾ ರಣಾವತ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!; ಅಕ್ಕನ ಪರ ವಿಡಿಯೋ ಹೇಳಿಕೆ ನೀಡಿದ್ದೇ ಮುಳುವಾಯ್ತಾ?

    ಮುಂಬೈ: ಸಹೋದರಿ ರಂಗೋಲಿ ಚಾಂಡೆಲ್​ ಹೇಳಿಕೆ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸಮಜಾಯಿಷಿ ಕೊಟ್ಟಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ವಿರುದ್ಧವೇ ಈಗ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಸೀಮಿತ ಸಮುದಾಯವನ್ನು ಟೆರರಿಸ್ಟ್​ ಎಂದು ಸಂಬೋಧಿಸಿದ್ದರು ಎಂದು ಆರೋಪಿಸಿ ವಕೀಲ ಅಲಿ ಕಾಶಿಪ್​ ದೇಶ್​ಮುಖ್ ಕಂಗನಾ ವಿರುದ್ಧ ಮುಂಬೈನ ಅಂಬೂಲಿ ಪೊಲೀಸ್​ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದರು.
    ಅಂದಹಾಗೆ, ಟ್ವಿಟರ್​ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಂಗೋಲಿ ಚಾಂಡೆಲ್​ ಅವರ ಟ್ವಿಟರ್​ ಖಾತೆಯನ್ನೇ ರದ್ದು ಮಾಡಲಾಗಿತ್ತು. ಆಗ ಅಕ್ಕನ ಪರವಾಗಿ ವಿಡಿಯೋ ಬಿಡುಗಡೆ ಮಾಡಿದ್ದ ಕಂಗನಾ ಇದೀಗ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದು, ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts