More

    ಹೋಟೆಲ್​ಗೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ವಧು-ವರ ಎಸ್ಕೇಪ್​! ಕಾರಣ ಕೇಳಿದ್ರೆ ಹುಬ್ಬೇರುವುದು ಖಂಡಿತ!

    ಮುಂಬೈ: ಮದುವೆ ಮಂಟಪಕ್ಕೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ವಧುವಿನ ಜತೆ ವರ ಎಸ್ಕೇಪ್​ ಆಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂದಹಾಗೆ ಈ ವರದಿಯಲ್ಲಿ ಬರುವ ವಧು-ವರ ಅಪರಾಧವೇನು ಮಾಡಿಲ್ಲ. ಅವರಿಬ್ಬರ ಆ ನಿರ್ಧಾರಕ್ಕೆ ಕರೊನಾ ಕಾರಣವಾಗಿದೆ. ಅದು ಹೇಗೆಂದು ತಿಳಿಯಲು ಮುಂದೆ ಓದಿ…

    ದೇಶದಲ್ಲಿ ಎರಡನೇ ಕರೊನಾ ಅಲೆ ದಿನೇದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಕರೊನಾ ಹಾಟ್​ಸ್ಪಾಟ್​ ಆಗಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕರೊನಾ ಮತ್ತೊಮ್ಮೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೆಮ್ಮಾರಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದೆ. ಲಾಕ್​ಡೌನ್​ ಸಹ ಘೋಷಣೆಯಾಗಿದೆ. ಮಹಾರಾಷ್ಟ್ರಾದ್ಯಂತ ರಾತ್ರಿ ಕರ್ಫ್ಯೂ ಸಹ ಜಾರಿಯಾಗಿದೆ. ಮದುವೆ-ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇದರ ನಡುವೆ ನಾಶಿಕ್​ನಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂತು.

    ಮಹಾರಾಷ್ಟ್ರ ಸರ್ಕಾರ ನೀಡಿರುವ ಮಾರ್ಗಸೂಚಿಯ ಪ್ರಕಾರ ಗರಿಷ್ಠ 50 ಮಂದಿ ಮಾತ್ರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಅಲ್ಲದೆ, ಎಲ್ಲರೂ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆದರೆ, ನಾಶಿಕ್​ ಮದುವೆಯಲ್ಲಿ ಇದ್ಯಾವುದನ್ನು ಅನುಸರಿಸುತ್ತಿರಲಿಲ್ಲ. ಹೀಗಾಗಿ ಮದುವೆ ನಡೆಯುತ್ತಿದ್ದ ಹೋಟೆಲ್​ಗೆ ಕ್ರಮ ಜರುಗಿಸಲು ಪೊಲೀಸರು ಆಗಮಿಸಿದರು.

    ಇದನ್ನೂ ಓದಿರಿ: ಗೂಗಲ್‌ ಸರ್ಚ್‌ ಮಾಡುವಾಗ ಬಯಲಾಯ್ತು ಹೆಂಡತಿ ಅಕ್ರಮ ಸಂಬಂಧ! ಬಯಲು ಶೌಚಕ್ಕೆ ಹೋದವನೂ ಸೆರೆಸಿಕ್ಕ…

    ಇತ್ತ ಪೊಲೀಸರು ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಮದುವೆ ಮನೆಯವರು ಹೇಗಾದರೂ ಇದರಿಂದ ತಪ್ಪಿಸಿಕೊಳ್ಳಬೇಕೆಂದು ಉಪಾಯ ಮಾಡಿ, ಅದರಂತೆಯೇ ಎಲ್ಲರೂ ಅಲ್ಲಿಂದ ಪರಾರಿಯಾದರು. ವಧು-ವರ ತಮ್ಮ ಕುಟುಂಬದವರೊಂದಿಗೆ ಸೇರಿ ಹೋಟೆಲ್​ ಬಿಟ್ಟು ಬೀದಿಗೆ ಬಂದರು. ಅದರಲ್ಲೂ ವಧು-ವರ ಸ್ಥಳದಿಂದಲೇ ಪರಾರಿಯಾದರು. ಕೆಲವು ಹತ್ತಿರದ ಎಟಿಎಂ ಒಳಗೆ ಅವಿತು ಕುಳಿತರು.

    ಏನೇ ಮಾಡಿದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ವಧುವಿನ ತಂದೆಯನ್ನು ವಶಕ್ಕೆ ಪಡೆದ ಪೊಲೀಸರು ಹೋಟೆಲ್​ ಮಾಲೀಕ ಮತ್ತು ವಧುವಿನ ತಂದೆಯಿಂದ 5 ಸಾವಿರ ದಂಡ ಸಂಗ್ರಹಿಸಿದರು. ಅಲ್ಲದೆ, ಎಚ್ಚರಿಕೆ ನೀಡಿ ಸ್ಥಳದಿಂದ ಕಾಲ್ಕಿತ್ತರು. (ಏಜೆನ್ಸೀಸ್​)

    VIDEO| ಚುನಾವಣಾ ಪ್ರಚಾರದ ಕೊನೆಯ ದಿನ ರಾಷ್ಟ್ರಗೀತೆಗಾಗಿ ವ್ಹೀಲ್​ಚೇರ್​ನಿಂದ ಎದ್ದು ನಿಂತ ದೀದಿ..!

    ಹೊಸ ಇತಿಹಾಸ ಬರೆಯುವುದೇ ನಂದಿಗ್ರಾಮ?

    ಬದಲಾದ ಜಪಾನ್ ಈಗ ಸಮರಕ್ಕೆ ಹಿಂಜರಿಯುತ್ತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts