ಮದ್ದೂರು: ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯ ಮತ್ತಷ್ಟು ಹೆಚ್ಚಳವಾದಾಗ ಮಾತ್ರ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಕೊಪ್ಪ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.
ಕಾರ್ಮಿಕರ ದಿನದ ಅಂಗವಾಗಿ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಅವಿರತವಾಗಿ ಶ್ರದ್ಧೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರೆ ಭವಾನಿ ಅವರನ್ನು ಗುರುವಾರ ಸನ್ಮಾನಿಸಿ ಮಾತನಾಡಿದರು.
ಒಂದು ಕಾಲೇಜು ಉತ್ತಮವಾಗಿ ಕೆಲಸ ನಿರ್ವಹಿಸಲು ಕಾರ್ಮಿಕ ವರ್ಗದ ಪಾತ್ರ ಅನನ್ಯ. ಕಾರ್ಮಿಕರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಸರಿಯಾಗಿ ಕಾರ್ಯನಿರ್ವಹಿಸದೆ ಹೋದರೆ ಕಾಲೇಜಿನಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಅಸಾಧ್ಯ. ಹಾಗಾಗಿ ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದರು.
ಪ್ರಾಧ್ಯಾಪಕರಾದ ಜಿ.ಯಶೋದಾ, ಡಿ.ಶ್ರೀನಿವಾಸ್, ಉಮೇಶ್, ಡಾ.ಲತಾ, ಡಾ.ಭಾರತಿ , ಸಂತೋಷ್, ವಿಜಯಲಕ್ಷ್ಮೀ, ಉಪನ್ಯಾಸಕರಾದ ಕೆಂಪೇಗೌಡ, ಸೌಜನ್ಯಾ, ಸೌಮ್ಯಾ ಹಾಗೂ ಮಂಜುಳಾ ಹಾಜರಿದ್ದರು.