More

    ಅಂತಾರಾಷ್ಟ್ರೀಯ ಯೋಗ ದಿನ: ನಾಳೆ ಬೆಳಗ್ಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

    ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಏಳನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜೂನ್​ 21ರ ಬೆಳಗ್ಗೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಈ ವರ್ಷ ಯೋಗ ದಿನದ ಪ್ರಮುಖ ಕಾರ್ಯಕ್ರಮವು ದೂರದರ್ಶನ ಕಾರ್ಯಕ್ರಮವಾಗಿರಲಿದ್ದು, ಎಲ್ಲ ದೂರದರ್ಶನ ಚಾನೆಲ್​ಗಳಲ್ಲಿ ನಾಳೆ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ.

    ಯೋಗ ದಿನದ ಒಂದು ದಿನದ ಮುಂಚೆಯೇ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ನಾಳೆ ಜೂನ್​ 21, ಏಳನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಗುರುತಾಗಿದೆ. ಈ ವರ್ಷ “ಸ್ವಾಸ್ಥ್ಯಕ್ಕಾಗಿ ಯೋಗ” ಎಂಬ ಥೀಮ್​ನೊಂದಿಗೆ ಆಚರಿಸಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸ ಎಂಬುದರ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತದೆ. ನಾಳೆ ಬೆಳಗ್ಗೆ 6.30ರ ಸುಮಾರಿಗೆ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.

    ಯೋಗ ಪ್ರದರ್ಶನದ ನೇರಪ್ರಸಾರದ ನಂತರ 15 ಆಧ್ಯಾತ್ಮಿಕ ಮುಖಂಡರು ಮತ್ತು ಯೋಗ ಗುರುಗಳ ಸಂದೇಶಗಳು ಬರಲಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

    ಯೋಗ ದಿನದ ಆಚರಣೆಯಲ್ಲಿ ಆಯೋಜಿಸಲಾದ ವಿವಿಧ ಚಟುವಟಿಕೆಗಳ ಮೂಲಕ ಎಲ್ಲರ ಯೋಗಕ್ಷೇಮವಾಗಿ ಯೋಗದ ಮಹತ್ವವನ್ನು ಆಯುಷ್ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೋಡಲ್ ಸಚಿವಾಲಯ (ಐಡಿವೈ) ತನ್ನ ಪತ್ರಿಕಾ ಹೇಳಿಕೆಯಲ್ಲಿ ಎತ್ತಿ ತೋರಿಸಿದೆ.

    ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದರ ಕರಡು ನಿರ್ಣಯವನ್ನು ಅಂಗೀಕರಿಸಿ, ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. 177 ದೇಶಗಳು ಈ ನಿರ್ಣಯವನ್ನು ಬೆಂಬಲಿಸಿದ್ದು ಒಂದು ದಾಖಲೆಯಾಗಿ ಉಳಿದಿದೆ.

    ವಿಶ್ವಸಂಸ್ಥೆಯ ವೆಬ್‌ಸೈಟ್‌ ಪ್ರಕಾರ, ಈ ವರ್ಷದ “ಸ್ವಾಸ್ಥ್ಯಕ್ಕಾಗಿ ಯೋಗ” ಎಂಬ ಥೀಮ್​ನೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಮತ್ತು ಯೋಗದ ಅಭ್ಯಾಸವು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಆರೋಗ್ಯವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದು ಈ ದಿನದ ಪ್ರಮುಖ ವಿಷಯವಾಗಿದೆ. (ಏಜೆನ್ಸೀಸ್​)

    ತನಿಖಾ ಸಂಸ್ಥೆಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಜತೆ ಹೊಂದಾಣಿಕೆ ಉತ್ತಮ: ಶಿವಸೇನಾ ಶಾಸಕ

    ನಿಮ್ಮ ಫೋನ್ ಕಳವಾಗಿದೆಯೇ/ ಕಳೆದು ಹೋಗಿದೆಯೇ? ಗೂಗಲ್​ನ ಈ ಫೀಚರ್​ನಿಂದ ಮರಳಿ ಪಡೆಯಬಹುದು!

    VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts