More

    ರಾಮಲಲ್ಲಾನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ; ವಿಮಾನದಲ್ಲಿಯೇ ವಿಡಿಯೋ ಮೂಲಕ ವೀಕ್ಷಿಸಿದ ಪ್ರಧಾನಿ

    ನವದೆಹಲಿ: ರಾಮನವಮಿ ಪ್ರಯುಕ್ತ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ ಕಾರ್ಯಕ್ರಮವನ್ನು ವಿಮಾನದಲ್ಲಿಯೇ ಕುಳಿತು ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಿದರು. ಈ ವಿಡಿಯೋ ವೈರಲ್​ ಆಗಿದೆ.

    ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಗಳ ಕಾರಣದಿಂದಾಗಿ ಶ್ರೀರಾಮ ಮಂದಿರದಲ್ಲಿ ಬಾಲಕರಾಮನ ಹಣೆಯ ಮೇಲೆ ಮೂಡಿದ ಸೂರ್ಯತಿಲಕವನ್ನು ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿಯೇ ವೀಕ್ಷಣೆ ಮಾಡಿದರು. ಸೂರ್ಯತಿಲಕ ರಾಮನ ಹಣೆಯ ಮೇಲೆ ಮೂಡುತ್ತಿದ್ದಂತೆ ಕೈಮುಗಿದು ನಮಸ್ಕರಿಸಿದ ಫೋಟೋವನ್ನು ಕೂಡ ಅವರು ಪ್ರಕಟಿಸಿದ್ದಾರೆ.

    ‘ನನ್ನ ನಲ್ಬರಿ ಸಮಾವೇಶದ ನಂತರ ರಾಮ್ ಲಲ್ಲಾ ಮೇಲೆ ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ್ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ’ ಎಂದು ಮೋದಿ ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ ಅವರು ರಾಮ ಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದರು. ಕಾಲಿನಿಂದ ಚಪ್ಪಲಿ ಕಳಚಿ ನಮಸ್ಕರಿಸಿ ಭಕ್ತಿಯಿಂದ ಈ ಕ್ಷಣಕ್ಕೆ ಸಾಕ್ಷಿಯಾದರು.

    ರಾಮನವಮಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, “ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ನಂತರದ ಮೊದಲ ರಾಮನವಮಿ ಒಂದು ಪೀಳಿಗೆಯ ಮೈಲಿಗಲ್ಲು, ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಶತಮಾನಗಳ ಭಕ್ತಿಯನ್ನು ಒಟ್ಟುಗೂಡಿಸುತ್ತದೆ. ಇದು ಕೋಟಿಗಟ್ಟಲೆ ಭಾರತೀಯರು ಕಾಯುತ್ತಿರುವ ದಿನ” ಎಂದು ಎಕ್ಸ್‌ನಲ್ಲಿ ಸರಣಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

    ಬಾಲರಾಮನ 51 ಇಂಚು ಎತ್ತರದ ಪ್ರತಿಮೆಗೆ ಸೂರ್ಯನ ಕಿರಣಗಳಾಗಿವೆ. ಸೂರ್ಯನ ಕಿರಣಗಳು ನೇರವಾಗಿ ಬಾಲರಾಮನ ಹಣೆಯ ಮೇಲೆ ಬಿದ್ದವು. ಸುಮಾರು 6 ನಿಮಿಷಗಳ ಕಾಲ ಸೂರ್ಯನು ಬಾಲರಾಮನ ಹಣೆಗೆ ಮುತ್ತಿಟ್ಟನು. ಇದರ ಪ್ರತಿಬಿಂಬದಿಂದಾಗಿ ಬಾಲರಾಮನ ವಿಗ್ರಹ ನೀಲಿ ಬಣ್ಣಕ್ಕೆ ತಿರುಗಿತು ಮತ್ತು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿತು. ಇದನ್ನು ಕಣ್ಣಾರೆ ಕಂಡ ಭಕ್ತರು ಮತ್ತಷ್ಟು ಭಕ್ತಿಭಾವ ಮೆರೆದಿದ್ದಾರೆ. ಶ್ರೀರಾಮ ನವಮಿಯ ದಿನದಂದು ಮಾತ್ರ ಈ ದೃಶ್ಯ ಕಾಣಸಿಗುತ್ತದೆ. ಇದನ್ನು ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕ ಎನ್ನುತ್ತಾರೆ. ಸೂರ್ಯನ ಕಿರಣಗಳು ರಾಮಲಲ್ಲಾ ಅವರ ಹಣೆಗೆ ತಾಗುವಂತೆ ಆಧುನಿಕ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಶ್ರೀರಾಮ ನವಮಿಯ ದಿನದಂದು ಮಾತ್ರ ಈ ಅದ್ಭುತ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.

    ಶ್ರೀರಾಮ ನವಮಿಯಂದೇ ಅಯೋಧ್ಯೆಯಲ್ಲಿ ಪವಾಡ! ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ

    ಲೋಕಸಭಾ ಚುನಾವಣೆ; ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟ ವೃದ್ಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts