More

  ವಾರಾಣಸಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

  ವಾರಾಣಸಿ: ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ವಾರಾಣಸಿಯಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್​ ಸ್ಟೇಡಿಯಂಗೆ ಪ್ರಧಾನಿ ಮೋದಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

  ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಕ್ರೀಡಾಂಗಣವನ್ನು ಮಹಾದೇವನಿಗೆ ಸಮರ್ಪಿಸಲಾಗುವುದು. ಈ ಕ್ರೀಡಾಂಗಣ ಪೂರ್ವಾಂಚಲ ಪ್ರದೇಶದ ಸ್ಟಾರ್ ಆಗಲಿದೆ ಎಂದು ಹೇಳಿದ್ದಾರೆ.

  ಇಂದು ವಾರಾಣಸಿಗೆ ಭೇಟಿ ನೀಡುವ ಮತ್ತೊಂದು ಅವಕಾಶ ಸಿಕ್ಕಿದೆ. ಕಾಶಿಗೆ ಭೇಟಿ ನೀಡಿದಾಗ ನಮಗೆ ಸಿಗುವ ಆನಂದ ಅಪೂರ್ವವಾದುದು. ಒಂದು ಶಿವಶಕ್ತಿ ಬಿಂದು ಚಂದ್ರನ ಮೇಲಿದೆ, ಒಂದು ಕಾಶಿಯಲ್ಲಿದೆ. ಇಂದು ನಾನು ಮತ್ತೊಮ್ಮೆ ಭಾರತದ ವಿಜಯಕ್ಕಾಗ ದೇಶದ ಜನರನ್ನು ಅಭಿನಂದಿಸುತ್ತೇನೆ. ಇಂದು ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದು ಪೂರ್ವಾಂಚಲದ ಯುವಕರಿಗೆ ವರದಾನವಾಗಲಿದೆ.

  ಕ್ರಿಕೆಟ್ ಮೂಲಕ ಇಡೀ ವಿಶ್ವವೇ ಭಾರತದೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಹೊಸ ದೇಶಗಳು ಈಗ ಕ್ರಿಕೆಟ್ ಆಡಲು ಮುಂದೆ ಬರುತ್ತಿವೆ. ಮಹಾದೇವನಗರದ ಈ ಕ್ರೀಡಾಂಗಣವನ್ನು ಮಹಾದೇವನಿಗೆ ಸಮರ್ಪಿಸಲಾಗುವುದು.  ಕಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾ ಪಟುಗಳಿಗೆ ಅನುಕೂಲವಾಗಲಿದೆ.

  ಇದನ್ನೂ ಓದಿ: ಕಾವೇರಿ ಜಲವಿವಾದ; ಮಂಗಳವಾರ ಬೆಂಗಳೂರು ಬಂದ್​

  ಕ್ರೀಡೆಯಲ್ಲಿ ಭಾರತ ಕಾಣುತ್ತಿರುವ ಯಶಸ್ಸು ಕ್ರೀಡೆಯ ಬಗೆಗಿನ ದೃಷ್ಟಿಕೋನದಲ್ಲಿನ ಬದಲಾವಣೆಗೆ ಸಾಕ್ಷಿಯಾಗಿದೆ. ಸರ್ಕಾರ ಎಲ್ಲಾ ಹಂತದಲ್ಲೂ ಕ್ರೀಡಾಪಟುಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಹೇಳಿದ್ದಾರೆ.

  ಕ್ರೀಡಾಂಗಣ ನಿರ್ಮಿಸಲು ಭೂಸ್ವಾಧೀನಕ್ಕಾಗಿ ಉತ್ತರಪ್ರದೇಶ ಸರ್ಕಾರವು 121 ಕೋಟಿ ರೂಪಾಯಿ ವ್ಯಯಿಸಿದೆ. 330 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಸಿಸಿಐ ಕ್ರೀಡಾಂಗಣವನ್ನು ನಿರ್ಮಿಸಲಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ತಿಳಿಸಿದ್ಧಾರೆ.

  ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಬಿಸಿಸಿಐ ಅಧ್ಯಕ್ಷರಾದ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್​ ಶುಕ್ಲಾ, ಕಾರ್ಯದರ್ಶಿ ಜಯ್​ ಷಾ, ಮಾಜಿ ಕ್ರಿಕೆಟಿಗರಾದ ಸಚಿನ್​ ತೆಂಡುಲ್ಕರ್, ರವಿಶಾಸ್ತ್ರಿ, ಸುನೀಲ್​ ಗಾವಸ್ಕರ್​ ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts