More

    ಮುಂದಿನ ದಶಕ ಭಾರತದ್ದು, ಉದ್ದಿಮೆಗಳ ಬೆಳವಣಿಗೆಯಿಂದ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ

    ನವದೆಹಲಿ: ನಾವು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಸಂದರ್ಭದಲ್ಲಿ ಮುಂದಿನ ದಶಕ ಭಾರತೀಯರದ್ದಾಗಿರುತ್ತದೆ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೇಶವು 2024 ರ ವೇಳೆಗೆ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಆಗಬೇಕೆಂದು ಬಯಸುತ್ತೇನೆ ಎಂದು ಮೋದಿ ಇದೇ ವೇಳೆ ಘೋಷಿಸಿದರು.

    ಈ ಹೊಸ ದಶಕವು ಭಾರತದ ಉದ್ಯಮಿಗಳದ್ದಾಗಲಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದು, ಅದು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ನಮಗೆ ದೊಡ್ಡ ಕನಸುಗಳಿವೆ ಹಾಗೆಯೇ ದೊಡ್ಡ ಭರವಸೆಗಳು ಇವೆ ಎಂದರು.

    ನಮ್ಮ ಉದ್ಯಮಿಗಳು ಬರುವ ಅಪಾಯಗಳನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಅವರು ಉದ್ದಿಮೆಗಳನ್ನು ಬೆಳೆಸಲು ಮತ್ತು ಹೊಸದನ್ನು ಸಾಧಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

    ಸರ್ಕಾರಗಳು ಉದ್ದಿಮೆಗಳಿಗೆ ಪಾಲುದಾರನಾಗಿ ಉದ್ದಿಮೆದಾರರ ಬೆನ್ನಿಗೆ ನಿಂತಾಗ ಉದ್ಯಮಿಗಳ ವಿಶ್ವಾಸ ಹೆಚ್ಚುತ್ತದೆ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ದರವು ಎಂದಿಗಿಂತಲೂ ಕಡಿಮೆ ಇದೆ. ಜಿಎಸ್‌ಟಿ ಸುಧಾರಣೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸುಧಾರಣೆಗಳು ನಡೆದಿವೆ. ಹಾಗಾಗಿ ಭಾರತದಲ್ಲಿ ಉದ್ಯಮದ ಬೆಳವಣಿಗೆಗೆ ಇದ್ದ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts