More

    ಭೂ ಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಬಿಪಿನ್ ರಾವತ್​ಗೆ ಬೀಳ್ಕೊಡುಗೆ ಔತಣಕೂಟ ಏರ್ಪಡಿಸಿದ್ದ ಪ್ರಧಾನಿ ಮೋದಿ ಅಲ್ಲಿ ಮಾಡಿದ್ದೇನು ಗೊತ್ತಾ…?

    ನವದೆಹಲಿ: ಮಾಜಿ ಭೂಸೇನಾ ಮುಖ್ಯಸ್ಥ ಬಿಪಿನ್​ ರಾವತ್ ಅವರು ಇಂದು ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ (ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​) ಪ್ರಮಾಣವಚನ ಸ್ವೀಕಾರ ಮಾಡುವ ಮೂಲಕ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಭೂ ಸೇನಾ ಮುಖ್ಯಸ್ಥ ಹುದ್ದೆಯಿಂದ ಡಿ.31ರಂದು ನಿವೃತ್ತರಾಗಿದ್ದ ಅವರನ್ನು ಕೇಂದ್ರ ಸರ್ಕಾರ ದೇಶದ ಮೊದಲ ಸಿಡಿಎಸ್​ ಆಗಿ ನೇಮಕ ಮಾಡಿದೆ.

    ಈ ಹಿಂದೆ ಆಗಸ್ಟ್​ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವ ಸಂದರ್ಭದಲ್ಲಿ ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನನ್ನು ನೇಮಕ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ಈಗ ದೇಶಕ್ಕೆ ಮೊದಲ ಸಿಡಿಎಸ್ ನೇಮಕ ಆಗಿದೆ.

    ಸಿಡಿಎಸ್​ ಹುದ್ದೆ ಸೃಷ್ಟಿಯಾದಾಗಿನಿಂದ ಅದಕ್ಕೆ ಬಿಪಿನ್​ ರಾವತ್​ ಹೆಸರೇ ಕೇಳಿಬರುತ್ತಿತ್ತು. ಬಿಪಿನ್​ ರಾವತ್​ ಅವರಿಗೆ ಸಿಡಿಎಸ್​ ಹುದ್ದೆಗೆ ನಿಮ್ಮನ್ನು ನೇಮಕ ಮಾಡಿದ್ದೇವೆ ಎಂದು ಖುದ್ದಾಗಿ ನರೇಂದ್ರ ಮೋದಿಯವರೇ ಹೇಳುವ ಮೂಲಕ ಆ ಸಂದರ್ಭವನ್ನು ವಿಶೇಷವನ್ನಾಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಭೂ ಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಬಿಪಿನ್​ ರಾವತ್​ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಬೀಳ್ಕೊಡುಗೆ ಔತಣಕೂಟ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೋದಿಯವರು ಸಿಡಿಎಸ್​ ಹುದ್ದೆಗೆ ಬಿಪಿನ್​ ರಾವತ್​ ಅವರನ್ನು ನೇಮಕ ಮಾಡಿದ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಅಲ್ಲದೆ ರಾವತ್​ ಅವರಿಗೇ ತಿಳಿಸಿ ಶುಭಕೋರಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts