ಜನರ ಮನ ಗೆದ್ದ ಮೋದಿ

1 Min Read
Modi won the hearts of the people
ರಾಚೋಟೇಶ್ವರ ದೇವಸ್ಥಾನಕ್ಕೆ ಸಂಸದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ದಾಸಮನಿ, ಪಪಂ ಸದಸ್ಯ ಕುಮಾರ ಐವಳ್ಳಿ, ಪರಸುರಾಮ ಮಲನಾಡದ, ಶಂಕರ ಕೆಂದೂಳ್ಳಿ ಇತರರಿದ್ದರು.

ಕೆರೂರ: ಅಭಿವೃದ್ಧಿ ಕಾರ್ಯಗಳಿಂದ ಪ್ರಧಾನಿ ನರೇಂದ್ರ ಮೋದಿ ಜನರ ಮನಸ್ಸು ಗೆದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಲೆ ಇದ್ದು, ಬಾಗಲಕೋಟೆಯಲ್ಲಿ ನನ್ನ ಪುನರಾಯ್ಕೆ ಖಚಿತ ಎಂದು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹೇಳಿದರು.

ಪಟ್ಟಣದ ಆರಾಧ್ಯ ದೇವ ರಾಚೋಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕಳೆದ ಒಂದು ದಶಕದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದೇಶದ ಜನತೆ ಗಮನಿಸಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ತಾವು ಮಾಡಿದ ಜನಪರ ಕೆಲಸಗಳನ್ನು ಮನೆ ಮನೆಗೆ ತಿಳಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಅವರ ಸುಭದ್ರ ಭಾರತ ಕಲ್ಪನೆ ಮತ್ತೊಮ್ಮೆ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಕಾರಿ ಆಗಲಿವೆ. ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. 20 ದಿನಗಳಿಂದ ಪ್ರಚಾರ ನಡೆದಿದ್ದು ಹೋದ ಕಡೆಗಳಲ್ಲಿ ಮತದಾರರು ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದಾರೆ ಎಂದರು.

ಬಿಜೆಪಿಗೆ ನಷ್ಟವಿಲ್ಲ

ಬಾಗಲಕೋಟೆ ನಗರದ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮತ್ತು ಸಂತೋಷ ಹೊಕ್ರಾಣಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಈಗ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ದಾಸಮನಿ, ಪಪಂ ಸದಸ್ಯ ಕುಮಾರ ಐವಳ್ಳಿ, ಪರಸುರಾಮ ಮಲನಾಡದ, ಶಂಕರ ಕೆಂದೂಳ್ಳಿ, ಪ್ರಮುಖರಾದ ಹಣಮಂತ ಚೂರಿ, ಸದಾನಂದ ಮದಿ, ನಾಗೇಶ ಛತ್ರಬಾನು, ಕಾಂತೇಶ ಬಿಜಾಪುರ, ಅರುಣ ಕಟ್ಟಿಮನಿ, ಶರಣು ಸಜ್ಜನ, ಅನಂತ ಚೂರಿ, ಸುರೇಶ ಜೋಗಿ ಇತರರಿದ್ದರು.

See also  ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2024’ ಮಾ.7ರಿಂದ ಅಧಿಕೃತವಾಗಿ ತೆರೆದುಕೊಳ್ಳುವ ಮೂಲಕ ಕಲಾ ರಸ ಹಂಚಲಿದೆ
Share This Article