More

    ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್​ನಲ್ಲಿ ಸೋಮವಾರ ಬೆಳಗ್ಗೆ ಕರೊನಾ ಲಸಿಕೆಯ ಮೊದಲ ಡೋಸ್​ ಪಡೆಯುವ ಮೂಲಕ ಎರಡನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

    ಲಸಿಕೆ ಪಡೆದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಏಮ್ಸ್​ನಲ್ಲಿ ನನ್ನ ಮೊದಲ ಕರೊನಾ ಲಸಿಕೆ ಡೋಸ್​ ಪಡೆಯಲಾಯಿತು. ಕೋವಿಡ್​-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಎಲ್ಲ ಅರ್ಹರು ಕರೊನಾ ಲಸಿಕೆ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ. ಒಟ್ಟಾಗಿ ನಾವು ಭಾರತವನ್ನು ಕೋವಿಡ್​ ಮುಕ್ತವಾಗಿಸೋಣ ಎಂಬ ಸಂದೇಶ ರವಾನಿಸಿದ್ದಾರೆ.

    ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಸ್ವರೂಪದ ಅನ್ಯ ವಾಧಿಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಚುಚ್ಚುಮದ್ದು ನೀಡಲಾಗುತ್ತಿದ್ದು, ಕರೊನಾ ವಿರುದ್ಧ ದೇಶವು ವಿಜಯ ಸಾಧಿಸುವ ಭರವಸೆಯನ್ನು ದೇಶದ ಜನತೆ ಹೊಂದಿದ್ದಾರೆ.

    ಇದನ್ನೂ ಓದಿರಿ: ಕಾಲೇಜು ಪ್ರಿಯಕರನ ನಂಬಿ ಗಂಡನಿಂದ ವಿಚ್ಛೇದನ ಪಡೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ದೇಶಾದ್ಯಂತ 27 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಗುರಿಯನ್ನು ಹೊಂದಲಾಗಿದ್ದು, ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಪ್ರತಿ ಡೋಸೇಜ್​ಗೆ ಗರಿಷ್ಠ 250 ರೂ. ಶುಲ್ಕ ನಿಗದಿ ಮಾಡಿದೆ. ಆಯುಷ್ಮಾನ್​ ಭಾರತ್​ ಯೋಜನೆಯಡಿ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಕೇಂದ್ರ ಹಾಗೂ ಸಿಜಿಎಚ್​ಎಸ್​ ಗುರುತಿಸಿರುವ 60 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ದೊರೆಯಲಿದೆ.

    ಲಸಿಕೆ ಪಡೆಯಲು ಬಯಸುವವರು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಸೋಮವಾರ ಬೆಳಗ್ಗೆ 9ರಿಂದ ಕೋವಿನ್ 2.0 ಪೋರ್ಟಲ್ ಚಾಲನೆ ಆಗಲಿದೆ. ನೋಂದಣಿ ಪ್ರಕ್ರಿಯೆಗೆ ವೆಬ್​ಸೈಟ್ cowin.gov.in ನೋಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ದೇಶದಲ್ಲಿ ಭಾನುವಾರ 16,752 ಕರೊನಾ ಪ್ರಕರಣಗಳು ಹೊಸದಾಗಿ ವರದಿಯಾಗಿದ್ದು, ಕಳೆದ 30 ದಿನದಲ್ಲಿ ಇದು ಗರಿಷ್ಠ ಪ್ರಮಾಣದ್ದಾಗಿದೆ. ಜನವರಿ 29ರಂದು 18,855 ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 1.11 ಕೋಟಿ ದಾಟಿದೆ. ಕಳೆದ 24 ತಾಸಿನಲ್ಲಿ 113 ಮಂದಿ ಮರಣಿಸಿದ್ದು, ಒಟ್ಟು ಸಂಖ್ಯೆ 1.57 ಲಕ್ಷ ಮೀರಿದೆ. ಮರಣ ಪ್ರಮಾಣ ಶೇ. 1.42 ಇದೆ. ಚೇತರಿಸಿಕೊಂಡವರ ಸಂಖ್ಯೆ 1.07ಕ್ಕೂ ಹೆಚ್ಚಿದ್ದು, ಗುಣಮುಖ ಪ್ರಮಾಣ ಶೇ. 97.10 ಇದ್ದು, ಸಕ್ರಿಯ ಪ್ರಕರಣಗಳು 1.61 ಲಕ್ಷದಷ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    ಇದನ್ನೂ ಓದಿರಿ: ಯೋಧರ ರೀತಿ ಪರೀಕ್ಷೆ ಎದುರಿಸಿ; ಮನ್ ಕೀ ಬಾತ್​ನಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

    ಆರು ರಾಜ್ಯಗಳಲ್ಲಿ ಕರೊನಾ ಪ್ರಕರಣ ಸಂಖ್ಯೆ ಹೆಚ್ಚಿದೆ. ದಿನದ ಒಟ್ಟು ಪ್ರಕರಣದಲ್ಲಿ ಈ ರಾಜ್ಯಗಳ ಪಾಲು ಶೇ. 86.37 ಇದೆ. ಮಹಾರಾಷ್ಟ್ರ (8,623), ಕೇರಳ (3,792), ಪಂಜಾಬ್ (593), ಕರ್ನಾಟಕ (521), ತಮಿಳುನಾಡು ಮತ್ತು ಗುಜರಾತ್​ಗಳಲ್ಲಿ 500ರ ಆಸುಪಾಸಿನಲ್ಲಿ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ನಡೆಯದಿರಲಿ; ಜನಮತ

    ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ ಸಂಪನ್ನ; ದೇಣಿಗೆ 2,500 ಕೋಟಿ ರೂ. ದಾಟುವ ನಿರೀಕ್ಷೆ

    ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸ್ಥಾನ ಪಡೆದ ರೋಹಿತ್ ಶರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts