More

    ಅರ್ಧರಾತ್ರಿಯಲ್ಲಿ ಸಂಪೂರ್ಣ ಕಾಶಿ ಸುತ್ತಿದ ಪ್ರಧಾನಿ.. ನಿಶಾಚರಿಯಂತೆ ಮೋದಿ ಸಂಚರಿಸಿದ್ದಕ್ಕೆ ಹೀಗಿದೆ ಕಾರಣ..!

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ತಮ್ಮ ಸ್ವಂತ ಕ್ಷೇತ್ರವಾದ ವಾರಣಾಸಿಗೆ ಗುರುವಾರ ಅರ್ಧರಾತ್ರಿ ದಿಢೀರನೆ ಭೇಟಿ ನೀಡಿ ಸ್ಥಳೀಯವಾಗಿ ನಡೆದ ಇತ್ತೀಚಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

    ಇದನ್ನೂ ಓದಿ: ಮಾಡೆಲ್‌ ತಾನಿಯಾ ಸಿಂಗ್‌ ಕೊನೆಯ ಕರೆ ಹೋಗಿದ್ದು ಸ್ಟಾರ್‌ ಕ್ರಿಕೆಟಿಗನಿಗೆ.. ಆ ಐಪಿಎಲ್‌ ಆಟಗಾರನಿಗೆ ಜಾರಿಯಾಯ್ತು ಸಮನ್ಸ್​?

    ಪ್ರಧಾನಿ ಮೋದಿ ಅವರು ನೂತನವಾಗಿ ನಿರ್ಮಿಸಿರುವ ಶಿವಪುರ-ಫುಲ್ವಾರಿಯಾ-ಲಾ-ತಾರಾ ಮಾರ್ಗವನ್ನು ಪರಿಶೀಲಿಸಲಾಯಿತು. ಅವರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    360 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ ರಸ್ತೆಯನ್ನು ಇತ್ತೀಚೆಗಷ್ಟೇ ಲೋಕಾರ್ಪಣೆ ಮಾಡಲಾಗಿತ್ತು. ಇದರಿಂದ ದಕ್ಷಿಣ ವಾರಣಾಸಿ ಭಾಗದ ಜನರ ಸಂಚಾರ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಮೋದಿಯವರು ಹೇಳಿದ್ದಾರೆ.

    ಈ ರಸ್ತೆಯಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವಾರಣಾಸಿ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸಮಯ ಅರ್ಧದಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ತಪಾಸಣೆಗೂ ಮುನ್ನ ಮೋದಿ ವಾರಣಾಸಿಯ ಬೀದಿಗಳಲ್ಲಿ ನಡೆದು ಸಾಗಿದರು. ರಾತ್ರಿಯಾಗಿದ್ದರೂ ಅವರನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಪ್ರಧಾನಿಯವರ ಮೇಲೆ ಪುಷ್ಪವೃಷ್ಟಿ ಮಾಡಿದರು.

    ಭೇಟಿಯ ಭಾಗವಾಗಿ ಶುಕ್ರವಾರ ಮುಂಜಾನೆ ವಾರಣಾಸಿಯಲ್ಲಿ ಪ್ರಧಾನಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂತ ಗುರು ರವಿದಾಸ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದರು.

    ಬೆಂಗಳೂರು ರೈಲುಗಳಲ್ಲಿ ಇನ್ಮುಂದೆ ಪ್ರಯಾಣಿಕರಿದ್ದಲ್ಲಿಗೇ ಸಿಗಲಿದೆ ಸ್ವಿಗ್ಗಿ ಫುಡ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts