More

    ಮಾಡೆಲ್‌ ತಾನಿಯಾ ಸಿಂಗ್‌ ಕೊನೆಯ ಕರೆ ಹೋಗಿದ್ದು ಸ್ಟಾರ್‌ ಕ್ರಿಕೆಟಿಗನಿಗೆ.. ಆ ಐಪಿಎಲ್‌ ಆಟಗಾರನಿಗೆ ಜಾರಿಯಾಯ್ತು ಸಮನ್ಸ್​?

    ನವದೆಹಲಿ: ಐಪಿಎಲ್‌ ನ ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಆಟಗಾರ ಅಭಿಷೇಕ್ ಶರ್ಮಾ ವಿವಾದಗಳಲ್ಲಿ ಸಿಲುಕಿದ್ದಾರೆ. ಸೂರತ್‌ನ ಖ್ಯಾತ ಮಾಡೆಲ್ ತಾನಿಯಾ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ವಿಚಾರಣೆಗೆ ಬರುವಂತೆ ಸಮನ್ಸ್‌ ಜಾರಿ ಮಾಡಿದ್ದಾರೆ.

    ಇದನ್ನೂ ಓದಿ: ಬೆಂಗಳೂರು ರೈಲುಗಳಲ್ಲಿ ಇನ್ಮುಂದೆ ಪ್ರಯಾಣಿಕರಿದ್ದಲ್ಲಿಗೇ ಸಿಗಲಿದೆ ಸ್ವಿಗ್ಗಿ ಫುಡ್ಸ್!

    ಪೊಲೀಸರು ಹಲವು ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮಾಡೆಲ್‌ ತಾನಿಯಾ ಸಿಂಗ್‌ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, 28ವರ್ಷದ ಆಕೆ ತನ್ನ ಕಡೇ ಕರೆಯನ್ನು 23 ವರ್ಷದ ಅಭಿಷೇಕ್‌ ಶರ್ಮಗೆ ಮಾಡಿದ್ದಾರೆ. ತನಿಖೆಯಲ್ಲಿ ಇದು ದೃಢಪಟ್ಟಿದ್ದರಿಂದ ಸಮನ್ಸ್​ ಜಾರಿ ಮಾಡಿದ್ದಾರೆ.

    ಅಭಿಷೇಕ್ ಮತ್ತು ತಾನಿಯಾ ಸಿಂಗ್ ಈ ಹಿಂದೆ ಸಂಪರ್ಕದಲ್ಲಿದ್ದರು. ಆದರೆ ಇತ್ತೀಚೆಗೆ ಸಂಪರ್ಕದಲ್ಲಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಪೊಲೀಸರು ಅಭಿಷೇಕ್ ಅವರ ಸ್ನೇಹಿತನಾಗಿದ್ದರಿಂದ ವಿಚಾರಣೆಗೆ ಕರೆದಿದ್ದಾರೆ. ಫೆಎಬ್ರವರಿ 20 ರಂದು ಮನೆಗೆ ತಡವಾಗಿ ಆಗಮಿಸಿದ್ದ ಮಾಡೆಲ್‌ ತಾನಿಯಾ ಶರ್ಮ, ಬಳಿಕ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲೇ ಮಗಳ ಸಾವನ್ನು ಕಂಡಿದ್ದ ಆಕೆ ಕುಟುಂಬ ಕಂಗಾಲಾಗಿತ್ತು.

    ತಾನಿಯಾ ಕಾಲ್ ಡಿಟೇಲ್ಸ್ ನಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೇ ಆಕೆಯ ಕೊನೆಯ ಕರೆ ಕೂಡ ಅಭಿಷೇಕ್ ಶರ್ಮಾಗೆ ಹೋಗಿದೆ. ಹೀಗಾಗಿ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವೇ ಎಂಬ ಬಗ್ಗೆ ಸದ್ಯ ಪೊಲೀಸರು ಈ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಸೂರತ್‌ನ ವೆಸು ರಸ್ತೆಯಲ್ಲಿ ವಾಸಿಸುತ್ತಿದ್ದ ತಾನಿಯಾ ಫೆ.22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆ ಕಳೆದ ಒಂದೂವರೆ ಎರಡು ವರ್ಷಗಳಿಂದ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಅಭ್ಯಾಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ತಾನಿಯಾ ಇನ್ಸ್‌ಟಾಗ್ರಾಮ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಅವರು ಡಿಸ್ಕ್ ಜಾಕಿ, ಮೇಕಪ್ ಕಲಾವಿದೆ ಮತ್ತು ಮಾಡೆಲ್ ಎಂದು ತಮ್ಮ ಇನ್ಸ್‌ಟಾಗ್ರಾಮ್‌ ಬಯೋದಲ್ಲಿ ಬರೆದುಕೊಂಡಿದ್ದಾರೆ. ತಾನಿಯಾ ಆತ್ಮಹತ್ಯೆಯ ನಂತರ, ಪೊಲೀಸರು ಸೂರತ್‌ನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಐಪಿಎಲ್‌ ಆಟಗಾರ ಅಭಿಷೇಕ್ ಶರ್ಮಾ ಹೆಸರು ಕೇಳಿ ಬಂದಿದೆ.

    ಅಭಿಷೇಕ್ ಶರ್ಮಾ ಪ್ರಸ್ತುತ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡದ ಆಲ್ರೌಂಡ್‌ ಆಟಗಾರ. ಅವರು ಐಪಿಎಲ್‌ನಲ್ಲಿ 47 ಪಂದ್ಯಗಳಲ್ಲಿ 137.38 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 75 ರನ್. ಐಪಿಎಲ್‌ನಲ್ಲಿ ಇದುವರೆಗೆ 4 ಅರ್ಧ ಶತಕ ಹಾಗೂ 9 ವಿಕೆಟ್‌ಗಳನ್ನು ಪಡೆದಿದ್ದಾರೆ. 2022ರ ಐಪಿಎಲ್ ಹರಾಜಿನಲ್ಲಿ ಅಭಿಷೇಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 6.5 ಕೋಟಿ ರೂ.ಗೆ ಖರೀದಿಸಿತ್ತು.

    ಅರಣ್ಯ, ಪೊಲೀಸ್​ ಸಿಬ್ಬಂದಿ ಭಾರ ತಾಳದೆ ಉಸಿರು ಚೆಲ್ಲಿದ ಚಿರತೆ! ಆಘಾತಕಾರಿ ವೀಡಿಯೋ ವೈರಲ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts