More

    ಲಡಾಖ್​ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ಮೋದಿ ಭೇಟಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್​ಗೆ ದಿಢೀರ್​ ಭೇಟಿ ನೀಡಿದ್ದು, ಸೇನಾ ಮುಂಚೂಣಿ ನೆಲೆಗಳಿಗೂ ಭೇಟಿ ನೀಡಿದರು.

    ಅಲ್ಲಿ ಯೋಧರೊಂದಿಗೆ ಸಾಕಷ್ಟು ಸಮಯ ಮಾತುಕತೆ ನಡೆಸಿದರು. ಲಡಾಖ್​ನ ನೀಮು ಮುಂಚೂಣಿ ನೆಲೆಯಲ್ಲಿ ಈ ಮಾತುಕತೆ ನಡೆಯಿತು. 11 ಸಾವಿರ ಅಡಿ ಎತ್ತರದಲ್ಲಿ ಇಂಡಸ್​ ನದಿ ತಟದಲ್ಲಿ ನಿಂತು ಝಾಂಸ್ಕಾರ್​ ಪರ್ವತ ಶ್ರೇಣಿಯ ಸೌಂದರ್ಯವನ್ನೂ ಅವರು ಆಸ್ವಾದಿಸಿದರು.

    ಇದನ್ನೂ ಓದಿ: ಅಲ್ಪಪ್ರಮಾಣದ ಸೇನೆ ಹಿಂದಕ್ಕೆ, ಆದರೂ ತಣಿಯುತ್ತಿಲ್ಲ ಉದ್ವಿಗ್ನತೆ

    ಯೋಧರು ಬಿರುಗಣ್ಣು ಬಿಟ್ಟುಕೊಂಡು ಪರಸ್ಪರ ನೋಡುತ್ತಾ ಕುಳಿತಿರುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್​ಗೆ ದಿಢೀರ್​ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಮತ್ತು ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಪ್ರಧಾನಿ ಅವರಿಗೆ ಸಾಥ್​ ನೀಡಿದ್ದಾರೆ.

    ದೇಶದಲ್ಲಿ ಸ್ಥಿರವಾಗಿ ಕ್ಷೀಣಿಸುತ್ತಿದೆ ಯುವಶಕ್ತಿ, ಹಿರಿಯ ನಾಗರಿಕರ ದೇಶವಾಗುತ್ತಾ ಭಾರತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts