More

    ದೇಶದ ಪ್ರಥಮ ರ್ಯಾಪಿಡ್​ಎಕ್ಸ್ ಟ್ರೈನ್​ಗೆ ಪ್ರಧಾನಿ ಮೋದಿ ಹಸಿರು ನಿಶಾನೆ: ರೈಲಿನ ವಿಶೇಷತೆಗಳು ಹೀಗಿವೆ…

    ನವದೆಹಲಿ: ದೇಶದ ಮೊಟ್ಟಮೊದಲ ರ್ಯಾಪಿಡ್ ಎಕ್ಸ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಇಂದು (ಅ.20) ಹಸಿರು ನಿಶಾನೆ ತೋರಿದರು. ವಂದೇ ಭಾರತ್ ರೈಲಿನ ವೇಗಕ್ಕೆ ಸರಿಸಮನಾಗಿ ಸಂಚರಿಸುವ ಮತ್ತೊಂದು ಸೆಮಿ ಸ್ಪೀಡ್ ರೈಲು ಇದಾಗಿದ್ದು, ದೆಹಲಿ- ಗಾಜಿಯಾಬಾದ್-ಮೀರತ್ ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್​ಆರ್​ಟಿಎಸ್- ಪ್ರಾದೇಶಿಕ ತ್ವರಿತ ಸಂಚಾರ ವ್ಯವಸ್ಥೆ) ಯೋಜನೆಯಡಿ ರ್ಯಾಪಿಡ್ ಎಕ್ಸ್ ರೈಲಿನ ಮೊದಲ ಪ್ರಯಾಣವು ಉತ್ತರ ಪ್ರದೇಶದ ಸಾಹಿಬಾಬಾದ್​ನಿಂದ ದುಹೈ ಡಿಪೋವರೆಗೆ ನಡೆಯಿತು. ಪ್ರಧಾನಿ ಮೋದಿ ಸಹ ಮೊದಲ ಸಂಚಾರ ಅನುಭವನ್ನು ಪಡೆದರು.

    ಪ್ರಯಾಣದ ನಡುವೆ ಪ್ರಧಾನಿ ಮೋದಿ ಅವರು ರೈಲಿನ ಒಳಗೆ ವಿದ್ಯಾರ್ಥಿಗಳು ಹಾಗೂ ರೈಲಿನ ಸಿಬ್ಬಂದಿಯ ಜತೆ ಸಂವಾದ ನಡೆಸಿದರು. ಇನ್ನು ಈ ರ್ಯಾಪಿಡ್ ಎಕ್ಸ್ ರೈಲು ಸಂಚಾರ ಅ.21ರಂದು ಸಾರ್ವಜನಿಕರಿಗೆ ಲಭ್ಯವಾಗಲಿದೆ.

    ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC) ಕಳೆದ ಏಪ್ರಿಲ್‌ ತಿಂಗಳಲ್ಲಿ RRTS ರೈಲುಗಳಿಗೆ RAPIDX ಎಂದು ಹೆಸರಿಸಿತ್ತು. ಇದರ ನಡುವೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಆರ್‌ಆರ್‌ಟಿಎಸ್ ರೈಲುಗಳನ್ನು ‘ನಮೋ ಭಾರತ್’ ಎಂದು ಕರೆಯಲಾಗುವುದು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಘೋಷಿಸಿದ್ದಾರೆ.

    ಆರ್​ಆರ್​ಟಿಎಸ್ ಕಾರಿಡಾರ್​ನ ಒಟ್ಟು ಉದ್ದವು ರಾಜಧಾನಿ ದೆಹಲಿಯಿಂದ ಉತ್ತರಪ್ರದೇಶದ ರಾಜ್ಯದ ಮೀರತ್​ವರೆಗೆ 82 ಕಿ.ಮೀ. ಆಗಿದೆ. ಈ ಸಂಪೂರ್ಣ ರೈಲು ಮಾರ್ಗವನ್ನು 2025ರ ಹೊತ್ತಿಗೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಕಾರಿಡಾರ್ ಪೈಕಿ 17 ಕಿಮೀ ಉದ್ದದ ಆದ್ಯತೆಯ ವಿಭಾಗವಾದ ಸಾಹಿಬಾಬಾದ್​ನಿಂದ ದುಹೈ ಡಿಪೋವರೆಗೆ ರೈಲು ಸಂಚಾರ ಈಗ ಆರಂಭವಾಗಿದೆ. ಗಾಜಿಯಾ ಬಾದ್, ಗುಲ್ಧರ್ ಮತ್ತು ದುಹೈ ನಿಲ್ದಾಣಗಳ ಮೂಲಕ ಈಗ ರೈಲು ಸಾಗುತ್ತದೆ. ಈ ರೈಲು ಪ್ರತಿ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ರ್ಯಾಪಿಡ್​ಎಕ್ಸ್ ರೈಲಿನ ಯೋಜನೆಯನ್ನು ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ಸಂಸ್ಥೆ (ಎನ್​ಸಿಆರ್​ಟಿಸಿ) ಜಾರಿಗೊಳಿಸುತ್ತಿದೆ.

    ದರ: ಸ್ಟ್ಯಾಂಡರ್ಡ್​ ಕೋಚ್​ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ 50 ರೂ. ಪ್ರೀಮಿಯಂ ಕೋಚ್​ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಈ ರೈಲುಗಳು ಬೆಳಗ್ಗೆ 6 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಲಿವೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿದೆ.

    ರೈಲಿನ ವೈಶಿಷ್ಟ್ಯಗಳು
    * ರೈಲಿನ ವೇಗ ಪ್ರತಿ ಗಂಟೆಗೆ 160 ಕಿ.ಮೀ.
    * ಪ್ರತಿ ರೈಲಿನಲ್ಲಿ 6 ಕೋಚ್, ಅಂದಾಜು 1,700 ಪ್ರಯಾಣಿಕರ ಸಾಮರ್ಥ್ಯ
    * ಒಂದು ಕೋಚ್​ನಲ್ಲಿ 72 ಸೀಟು, ಪ್ರೀಮಿಯಂ ಕೋಚ್​ನಲ್ಲಿ 62 ಸೀಟು.
    * ಮಹಿಳೆಯರಿಗೆ ಒಂದು ಪ್ರತ್ಯೇಕ ಕೋಚ್
    * ಪ್ರತಿ ಕೋಚ್​ನಲ್ಲಿ ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಆಸನ ಮೀಸಲು.
    * ಸಂಪೂರ್ಣ ಹವಾ ನಿಯಂತ್ರಿತ. ಪ್ರಾದೇಶಿಕ ಪ್ರಯಾಣಕ್ಕೆ ಪೂರಕವಾಗಿ ಆಸನ ವಿನ್ಯಾಸ,
    * ನಿಂತುಕೊಳ್ಳಲು ವಿಶಾಲವಾದ ಸ್ಥಳಾವಕಾಶ. ಲಗೇಜ್ ರ್ಯಾಕ್ ಸೌಲಭ್ಯ.
    * ಪ್ರೀಮಿಯಂ ಕೋಚ್​ನಲ್ಲಿ ತಿಂಡಿ, ಪಾನೀಯ ಖರೀದಿಸಬಹುದಾದ ಮಾರಾಟ ಯಂತ್ರ ಅಳವಡಿಕೆ.
    * ಪ್ರತಿ ರೈಲಿನಲ್ಲಿ ಒಬ್ಬ ಅಟೆಂಡೆಂಟ್ ನಿಯೋಜನೆ.
    * ಲ್ಯಾಪ್​ಟಾಪ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ.
    * ಕೊನೆಯ ಕೋಚ್​ನಲ್ಲಿ ಗಾಲಿಕುರ್ಚಿ, ಸ್ಟ್ರೆಚರ್.

    ವಂದೇ ಭಾರತ್​ ಸ್ಲೀಪರ್​ ಟ್ರೈನ್​ಗೆ ಜಾಗತಿಕ ರೈಲುಗಳೇ ಸ್ಫೂರ್ತಿ: ರಾಜಧಾನಿ ಎಕ್ಸ್​ಪ್ರೆಸ್​ಗಿಂತಲೂ ಅತ್ಯುತ್ತಮ

    ಮೋದಿ ಸರ್ಕಾರದ 9 ವರ್ಷದ ಆಡಳಿತದಲ್ಲಿ ಮಾವೋವಾದಿಗಳ ಹಿಂಸಾಚಾರ ಶೇ.52ಕ್ಕೆ ಕುಸಿತ: ಅಮಿತ್​ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts