More

    ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ: ಮಲೆನಾಡಲ್ಲಿ ನಮೋ ಮೋಡಿ​

    ಶಿವಮೊಗ್ಗ: ನೂತನ ವಿಮಾನ ನಿಲ್ದಾಣದ ಉದ್ಘಾಟನೆಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ 11.40ಕ್ಕೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗದ ವಿಮಾನ ನಿಲ್ದಾಣದಕ್ಕೆ ಪ್ರಧಾನಿ ಮೋದಿ ಬಂದಿಳಿದರು.

    ಇನ್ನು ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ, ವಿಮಾನ ನಿಲ್ದಾಣವನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ವಿಮಾನ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಇದನ್ನೂ ಓದಿ: ಶಾಲೆಗಳೇ ಇವರ ಟಾರ್ಗೆಟ್; 22 ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದ ಖದೀಮರು

    ಪ್ರಧಾನಿ ಮೋದಿಗೆ ಶ್ರೀಗಂಧದ ಉಡುಗೊರೆ ರೆಡಿಯಾಗಿದ್ದು, ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯನ್ನು ಕಲಾವಿದರು ಶ್ರೀಗಂಧದಲ್ಲಿ ನಿರ್ಮಾಣ ಮಾಡಿದ್ದಾರೆ. ಇದುವರೆಗೂ ಯಾರೂ ಪಡೆಯದ ವಿನೂತನ ಉಡುಗೊರೆಯನ್ನು ಪ್ರಧಾನಿ ಮೋದಿ ಪಡೆಯಲಿದ್ದಾರೆ. ಶ್ರೀಗಂಧದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯ ಪ್ರತಿಕೃತಿ ನಿರ್ಮಾಣವಾಗಿದ್ದರೆ, ಸ್ಮರಣಿಕೆಯ ಕೆಳಭಾಗವನ್ನು ಬೀಟೆ ಹಾಗೂ ಶಿವನೆ ಮರದಿಂದ ತಯಾರಿಸಲಾಗಿದೆ. ಸಾಗರದ ಕಲಾವಿದರು ಈ ವಿಶೇಷ ಕಲಾಕೃತಿ ಸೃಷ್ಟಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿಗೆ ಶಿವಮೊಗ್ಗ ಜನತೆಯ ಪರವಾಗಿ ವಿಶೇಷ ಉಡುಗೊರೆ ನೀಡಲಾಗುತ್ತದೆ.

    ಶ್ರೀಗಂಧದ ಸ್ಮರಣಿಕೆಯ ಜೊತೆಗೆ ಅಡಕೆ ಹಾಳೆಯಲ್ಲಿ ಮಾಡಿರುವ ಪೇಟ ಹಾಗೂ ಅಡಕೆಯಲ್ಲಿ ಮಾಡಿರುವ ಹಾರ ಹಾಕಿ ಸನ್ಮಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಡಕೆ ಮಲೆನಾಡಿನ ಟ್ರೇಡ್ ಮಾರ್ಕ್ ಆಗಿರುವುದರಿಂದ ಅಡಕೆ ಹಾಳೆಯಲ್ಲಿ ತಯಾರಿಸಿರುವ ಪೇಟ ಹಾಗೂ ಅಡಕೆ ಹಾರ ಹಾಕಿ ಪ್ರಧಾನಿಯನ್ನು ಸನ್ಮಾನಿಸಲಾಗುತ್ತಿದೆ.

    ಇದನ್ನೂ ಓದಿ: ಎಂಜಿನ್​ ಸಮಸ್ಯೆ; ಕೆಟ್ಟುನಿಂತ ಇಂಡಿಗೋ, ಗೋಫಸ್ಟ್​​ನ 50ಕ್ಕೂ ಹೆಚ್ಚು ವಿಮಾನಗಳು

    ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ವಿಮಾನ ನಿಲ್ದಾಣ ಮುಂಭಾಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಬೃಹತ್ ಪೆಂಡಾಲ್​ನಲ್ಲಿ ಒಂದು ಲಕ್ಷ ಅಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು ಎರಡು ಲಕ್ಷ ಜನರು ಸೇರುವ ನೀರೀಕ್ಷೆ ಇದೆ. ಬೆಳಗ್ಗಿನಿಂದಲೇ ಜನರು ಸಮಾವೇಶದತ್ತ ಬರುತ್ತಿರುದ್ದಾರೆ. ಪ್ರಧಾನಿ ಮೋದಿ ಮಧ್ಯಾಹ್ನ 1.15 ಗಂಟೆಯವರೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ರ ವೇಳೆಗೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶ್ರೀಗಂಧದಲ್ಲಿ ಮೂಡಿದ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ: ಪ್ರಧಾನಿ ಮೋದಿಗಾಗಿ ವಿಶೇಷ ಗಿಫ್ಟ್​

    ರ‍್ಯಾಗಿಂಗ್​ಗೆ ವೈದ್ಯಕೀಯ ವಿದ್ಯಾರ್ಥಿನಿ ಬಲಿ: ವಾಟ್ಸ್​ಆ್ಯಪ್​ ಚಾಟ್​ನಿಂದ ಸಿಕ್ಕಿಬಿದ್ದ ಸೀನಿಯರ್​ ಸ್ಟೂಡೆಂಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts