More

    ಎಂಜಿನ್​ ಸಮಸ್ಯೆ; ಕೆಟ್ಟುನಿಂತ ಇಂಡಿಗೋ, ಗೋಫಸ್ಟ್​​ನ 50ಕ್ಕೂ ಹೆಚ್ಚು ವಿಮಾನಗಳು

    ನವದೆಹಲಿ: ಎಂಜಿನ್‌ ಸಮಸ್ಯೆಗಳಿಂದ ಇಂಡಿಗೋ ಹಾಗೂ ಗೋಫಸ್ಟ್‌ ವಿಮಾನಯಾನ ಸಂಸ್ಥೆಗಳ 50ಕ್ಕೂ ಹೆಚ್ಚು ವಿಮಾನಗಳು ಕೆಟ್ಟುನಿಂತಿವೆ ಎಂದು ವರದಿಯಾಗಿದೆ.

    ಎಂಜಿನ್‌ ದುರಸ್ತಿಗೆ ಬೇಕಿರುವ ಬಿಡಿ ಭಾಗಗಳ ಪೂರೈಕೆ ವ್ಯವಸ್ಥೆಗೆ ರಷ್ಯಾ–ಉಕ್ರೇನ್‌ ಯುದ್ಧವು ಹೊಡೆತ ನೀಡಿದೆ. ಪೂರೈಕೆ ವ್ಯವಸ್ಥೆಯಲ್ಲಿ ತೊಡಕಾಗಿರುವುದರಿಂದ ವಿಮಾನಯಾನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗನ್ನು ಚಿಂತಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದರು.

    ಇದನ್ನೂ ಓದಿ:  ವರದಕ್ಷಿಣೆ ಕಿರುಕುಳ; ಸೊಸೆಗೆ ಆ್ಯಸಿಡ್ ಕುಡಿಸಿ ಕೊಂದ ಅತ್ತೆ

    ‘ಪ್ರಾಟ್‌ ಆ್ಯಂಡ್‌ ವೈಟ್ನಿ ಹಾಗೂ ಸಿಎಫ್‌ಎಂ ಕಂಪನಿಗಳಿಂದ ಇಂಡಿಗೋ ಸಂಸ್ಥೆಯು ಎಂಜಿನ್‌ ಹಾಗೂ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತಿದೆ. ಗೋಫಸ್ಟ್‌ ಸಂಸ್ಥೆಯು ಪ್ರಾಟ್‌ ಆ್ಯಂಡ್‌ ವೈಟ್ನಿಯೊಂದಿಗೆ ವ್ಯವಹಾರ ನಡೆಸುತ್ತಿದೆ. ಸುಮಾರು 50ಕ್ಕೂ ಹೆಚ್ಚು ವಿಮಾನಗಳು ಕೆಟ್ಟುನಿಂತಿವೆ. ಬಿಡಿಭಾಗಗಳ ಪೂರೈಕೆಯ ಖಚಿತತೆ ಕುರಿತು ಪ್ರಾಟ್‌ ಆ್ಯಂಡ್‌ ವೈಟ್ನಿ ಕಂಪೆನಿಯು ಭರವಸೆ ನೀಡಿಲ್ಲ’ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದರು.

    ಇದನ್ನೂ ಓದಿ:  ಬಡತನ ಬೇಗೆಗೆ ಹೆಂಡತಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ!

    ವಿಮಾನಯಾನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗನ್ನು ಚಿಂತಿಸುತ್ತಿವೆ. ವಿಮಾನಗಳನ್ನು ಗುತ್ತಿಗೆಗೆ ಪಡೆಯುವುದು, ಗುತ್ತಿಗೆ ಅವಧಿಯನ್ನು ಹೆಚ್ಚಿಸುವುದರ ಕುರಿತು ಮಾರ್ಗಸೂಚಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

    ಗರ್ಲ್ ಫ್ರೆಂಡ್​​ಗಾಗಿ ಸ್ನೇಹಿತನ ಹೃದಯ ಕಿತ್ತು, ಬೆರಳು ಕತ್ತರಿಸಿ ಕೊಂದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts