More

    ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ

    ನವದೆಹಲಿ: ಸಾಂಕ್ರಾಮಿಕ ಕಾಯಿಲೆ ಕೊವಿಡ್​-19 ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಈಗಾಗಲೇ ಹಲವು ಬಾರಿ ಆರೋಪ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇದೀಗ ಮತ್ತೊಮ್ಮೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ ಬೆನ್ನಲ್ಲೇ ಇಂದು ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ಕೊವಿಡ್​-19 ದೇಶದ ಅನೇಕ ಭಾಗಗಳಿಗೆ ವ್ಯಾಪಿಸುತ್ತಿದೆ. ಇದುವರೆಗೆ ಇರದ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಕರೊನಾ ನಿಯಂತ್ರಣ, ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನೂ ಜಾರಿ ಮಾಡುತ್ತಿಲ್ಲ. ಇದನ್ನೂ ಓದಿ:    ಮುಂದುವರಿದ ಕರೊನಿಲ್​ ವಿವಾದ; ಯೋಗಗುರು ಬಾಬಾ ರಾಮ್​ದೇವ್​ ಸೇರಿ ಐವರ ವಿರುದ್ಧ ಎಫ್​ಐಆರ್​​​

    ಪ್ರಧಾನಿ ನರೇಂದ್ರ ಮೋದಿಯವರು ಮೌನಕ್ಕೆ ಜಾರಿದ್ದಾರೆ. ಕೊವಿಡ್​-19 ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡು, ಶರಣಾಗಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್​ ಮುಖಂಡ ಅಭಿಷೇಕ್​ ಮನು ಸಿಂಘ್ವಿಯವರಿಗೆ ಕೊವಿಡ್​-19; ಇಡೀ ಕುಟುಂಬಕ್ಕೆ ತಗುಲಿದ ಸೋಂಕು

    ಭಾರತದಲ್ಲಿ ಕರೊನಾ ವ್ಯಾಪಕವಾಗುತ್ತಿದೆ. ಇದುವರೆಗೆ ಒಂದೂ ಸೋಂಕಿನ ಪ್ರಕರಣಗಳು ಇಲ್ಲದ ಸ್ಥಳಗಳಿಗೂ ಕಾಲಿಟ್ಟಿದೆ ಎಂಬ ಮಾಧ್ಯಮವೊಂದರ ವರದಿಯನ್ನು ಶೇರ್​ ಮಾಡಿರುವ ರಾಹುಲ್​ ಗಾಂಧಿ, ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಕಳೆದ ಕೆಲವು ವಾರಗಳಿಂದಲೂ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಕೊವಿಡ್​-19, ಆರ್ಥಿCoronavirus,ಕತೆ, ಭಾರತ-ಚೀನಾ ವಿವಾದಗಳಿಗೆ ಸಂಬಂಧಪಟ್ಟ ವಿಷಯಗಳನ್ನಿಟ್ಟುಕೊಂಡು ಕಿಡಿಕಾರುತ್ತಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts