More

    ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿವಿ ಕಟ್ಟಡ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

    ಝಾನ್ಸಿ: ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
    “’ಜೈ ಜವಾನ್, ಜೈ ಕಿಸಾನ್ ಎಂಬ ಮಂತ್ರದೊಂದಿಗೆ ಜೈ ವಿಜ್ಞಾನ್’ ಎಂಬುದೂ ಬುಂದೇಲ್‌ಖಂಡದ ನಾಲ್ಕು ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿದೆ. ಈ ಭೂಮಿಯ ಹೆಮ್ಮೆಯಾದ ಬುಂದೇಲ್‌ಖಂಡದ ಪ್ರಾಚೀನ ಗುರುತನ್ನು ಶ್ರೀಮಂತಗೊಳಿಸಲು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಬದ್ಧವಾಗಿವೆ ಎಂದು ಪ್ರಧಾನಿ ಹೇಳಿದರು.

    ಇದನ್ನೂ ಓದಿ:  ಮನೆಯ ಹೊರಗೆ ಮಲಗಿದ್ದ ಬಾಲಕನ ಮೇಲೆ ಕರಡಿ ದಾಳಿ

    “ಕೃಷಿಗೆ ಸಂಬಂಧಿಸಿದ ಶಿಕ್ಷಣವನ್ನು, ಅದರ ಪ್ರಾಯೋಗಿಕ ಅನ್ವಯವನ್ನು ಶಾಲಾ ಮಟ್ಟಕ್ಕೆ ಕೊಂಡೊಯ್ಯುವುದು ಸಹ ಅಗತ್ಯವಾಗಿದೆ. ಕೃಷಿ ವಿಷಯವನ್ನು ಗ್ರಾಮೀಣ ಮಟ್ಟದಲ್ಲಿ, ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
    ಮಧ್ಯಾಹ್ನ 12: 30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಟ್ಟಡಗಳ ಉದ್ಘಾಟನೆ ನೆರವೇರಿತು.
    ಈ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
    ಈ ಕೃಷಿ ವಿಶ್ವವಿದ್ಯಾಲಯವು ಝಾನ್ಸಿಯಲ್ಲಿದ್ದು,ಇದು ಬುಂದೇಲ್‌ಖಂಡ ಪ್ರದೇಶದ ಪ್ರಮುಖ ಸಂಸ್ಥೆಯಾಗಿದೆ. 2014-15ರಲ್ಲಿ ಪ್ರಾರಂಭವಾಗಿದ್ದು, ಈಗ ಕೃಷಿ, ತೋಟಗಾರಿಕೆ ಮತ್ತು ಅರಣ್ಯಶಾಸ್ತ್ರ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನೀಡುತ್ತಿದೆ.

    ಇದನ್ನೂ ಓದಿ : ಸಿಬ್ಬಂದಿಗೆ ಸಂಬಳ ನೀಡಲು ಬಡ್ಡಿ ದುಡ್ಡಿಗೆ ಮೊರೆಹೋದ ತಿರುಪತಿ ದೇಗುಲ; ಎಷ್ಟಿದೆ ಗೊತ್ತೆ ಠೇವಣಿ?

    “ಇದು ಪ್ರಸ್ತುತ ಝಾನ್ಸಿಯ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯಿಂದ ಕಾರ್ಯನಿರ್ವಹಿಸಲ್ಪಡುತ್ತಿದ್ದು, ಮುಖ್ಯ ಕಟ್ಟಡಗಳು ಸಿದ್ಧವಾಗುತ್ತಿವೆ” ಎಂದು ಪಿಎಂ ಕಚೇರಿ ಮಾಹಿತಿ ನೀಡಿದೆ.

    ಈ ಸಂದರ್ಭದಲ್ಲಿ ಪ್ರಧಾನಿ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.  ಇದು ಶಿಕ್ಷಣ ಮೂಲಸೌಕರ್ಯವನ್ನು ಸುಧಾರಿಸುತ್ತದೆ ಮತ್ತು ಕೃಷಿಯಲ್ಲಿ ಅತ್ಯಾಧುನಿಕ ಸಂಶೋಧನೆ ಜೊತೆಗೆ ಮತ್ತಷ್ಟು ರೈತ ಕಲ್ಯಾಣಕ್ಕೆ ಸಹಕಾರಿಯಾಗುತ್ತದೆ ಎಂದು ಈ ಹಿಂದೆ ಪ್ರಧಾನಿಯವರು ಹೇಳಿದ್ದರು.

    ಒಂದು ಕ್ಷಣ ಈ ವಿಡಿಯೋ ನೋಡಿ… ಆಗುವ ಖುಷಿ ಅಷ್ಟಿಷ್ಟಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts