More

    ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅಪಸ್ವರ ಎತ್ತಿದವರಿಗೆ ಸರ್ವಾಧ್ಯಕ್ಷರಿಂದ ಚರ್ಚೆಗೆ ಆಹ್ವಾನ

    ಹಾವೇರಿ: ವಿವಾದಗಳ ನಡುವೆಯೇ ಮುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಮಾರೋಪಗೊಂಡಿದ್ದು, ಸಮ್ಮೇಳನದ ಬಗ್ಗೆ ಅಪಸ್ವರ ಎತ್ತಿದ್ದವರಿಗೆ ಸರ್ವಾಧ್ಯಕ್ಷರೇ ಚರ್ಚೆಗೆ ಆಹ್ವಾನಿಸಿದ್ದಾರೆ. ಇಂದು ನಡೆದ ಸಮಾರೋಪ ಸಮಾರಂಭದಲ್ಲೇ ಅವರು ಈ ಆಹ್ವಾನವನ್ನು ನೀಡಿದ್ದಾರೆ.

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರು, ಈ ಸಲದ ಸಮ್ಮೇಳನವನ್ನು ವಿರೋಧಿಸಿದ್ದರಿಗೆ ಪ್ರಾರ್ಥಿಸುತ್ತಲೇ ಚರ್ಚೆಗೆ ಆಹ್ವಾನಿಸಿದ್ದಾರೆ. ಸಮ್ಮೇಳನವನ್ನು ವಿರೋಧಿಸುವವರಿಗೆ ನನ್ನ ಪ್ರಾರ್ಥನೆ, ತಾವೆಲ್ಲ ಕನ್ನಡ ಸಾಹಿತ್ಯ ಪರಿಷತ್ ಬನ್ನಿ ಎಂದು ಕರೆ ನೀಡಿದ್ದಾರೆ.

    ಇದನ್ನೂ ಓದಿ: ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲೂ ಅನುರಣಿಸಿತು ಮುಸ್ಲಿಂ ವಿಚಾರ; ಹರಿಪ್ರಸಾದ್ ಆರೋಪಕ್ಕೆ ವೇದಿಕೆಯಲ್ಲೇ ಜೋಶಿ ತಿರುಗೇಟು

    ನಾವು ಕನ್ನಡದ ಐಕ್ಯತೆ ಪ್ರದರ್ಶನ ಮಾಡಬೇಕಿದೆ, ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನ ಇದೆ, ಅದನ್ನು ಎತ್ತರೆತ್ತರಕ್ಕೆ ಒಯ್ಯಬೇಕಿದೆ. ಹೀಗಾಗಿ ವಿರೋಧಿ ಸಾಹಿತಿಗಳು, ಕವಿಗಳು ಪರಿಷತ್‌ಗೆ ಬರಬೇಕು, ಅಭಿಪ್ರಾಯ ಬೇರೆ ಬೇರೆ ಇರಬಹುದು, ಅದನ್ನು ಕುಳಿತು ಬಗೆಹರಿಸಿಕೊಳ್ಳೋಣ, ಬರೀ ಟೀಕೆ ಮಾಡುವುದರಿಂದ ಪ್ರಯೋಜನವಿಲ್ಲ, ಚರ್ಚೆ ಮಾಡಿ ನಿರ್ಣಯ ಮಾಡೋಣ ಬನ್ನಿ ಎಂದು ಅವರು ಆಹ್ವಾನ ನೀಡಿದ್ದಾರೆ.

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts