More

    ಕರೊನಾ ವೈರಸ್​ ವಿಚಾರದಲ್ಲಿ ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್​ ಷಾ ಕಿಡಿ

    ನವದೆಹಲಿ: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹಸಚಿವ ಅಮಿತ್​ ಷಾ, ಪ್ರತಿಪಕ್ಷವು ಕರೊನಾ ವೈರಸ್​ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಟ್ವೀಟ್​ ಮೂಲಕ ಕಿಡಿಕಾರಿರುವ ಅಮಿತ್​ ಷಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಅಡಿಯಲ್ಲಿ ಕರೊನಾ ವೈರಸ್​ ತಡೆಗಟ್ಟಲು ಇಡೀ ಭಾರತ ಹೋರಾಡುತ್ತಿದೆ. ಜಾಗತಿಕ ಹಾಗೂ ದೇಶೀಯವಾಗಿ ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೋವಿಡ್​ 19 ಮಣಿಸಲು 130 ಕೋಟಿ ಭಾರತೀಯರು ಒಗ್ಗೂಡಿದ್ದಾರೆ. ಆದರೆ, ಕಾಂಗ್ರೆಸ್​ ಚಿಲ್ಲರೆ ರಾಜಕೀಯ ಮಾಡುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅವರು ದೇಶದ ಹಿತಾಸಕ್ತಿ ಬಗ್ಗೆ ಚಿಂತಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದ್ದಾರೆ.

    ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ 21 ದಿನಗಳ ಲಾಕ್​ಡೌನ್​ ಅನ್ನು ಟೀಕಿಸಲಾಯಿತು. ಯಾವುದೇ ಯೋಜನೆಯಿಲ್ಲದೇ ಪ್ರಧಾನಿ ಮೋದಿ ಸರ್ಕಾರ ಲಾಕ್​ಡೌನ್​ ಅನುಷ್ಠಾನಕ್ಕೆ ತಂದಿದೆ. ಹಳ್ಳಿಯಿಂದ ಬಂದು ದೊಡ್ಡ ದೊಡ್ಡ ನಗರಗಳಲ್ಲಿ ದಿನಗೂಲಿ ಮಾಡುತ್ತಿದ್ದವರ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದು ಕಿಡಿಕಾರಿದ ಬೆನ್ನಲ್ಲೇ ಷಾ ಟ್ವೀಟ್ ಮೂಲಕ ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ.​

    ಇಡೀ ರಾಷ್ಟ್ರ ಹಾಗೂ ಸರ್ಕಾರ ಬಡವರು ಮತ್ತು ವಲಸಿಗರ ಪರವಾಗಿ ಒಟ್ಟಿಗೆ ನಿಲ್ಲುವಂತೆ ಒತ್ತಾಯಿಸಿದ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಂಬರುವ ಕಷ್ಟದ ದಿನಗಳಲ್ಲಿ ಅವರಿಗೆ ಸಂಪೂರ್ಣ ಬೆಂಬಲ ಕೊಡಬೇಕಿದೆ ಎಂದರು.

    ಇದೇ ವೇಳೆ ವಲಸಿಗರ ಬಿಕ್ಕಟ್ಟಿನ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ ರಾಹುಲ್​ ಗಾಂಧಿ, ನಿರ್ದಿಷ್ಟ ತಂತ್ರದೊಂದಿಗೆ ಭಾರತವನ್ನು ಅಭಿವೃದ್ಧಿ ಪಡಿಸಿ ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದರು. ಅಲ್ಲದೆ, ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಬಡವರಿಗೆ ನೆರವಾಗಲು ಕರೆ ನೀಡಿದರು. (ಏಜೆನ್ಸೀಸ್​)

    ನಿಮ್ಮ ಸಮೀಪದಲ್ಲಿರೋ ಕರೊನಾ ಸೋಂಕಿತನ ಬಗ್ಗೆ ಎಚ್ಚರಿಸಲಿದೆ ಕೇಂದ್ರ ಸರ್ಕಾರದ ನೂತನ ‘ಆರೋಗ್ಯ ಸೇತು’ ಆ್ಯಪ್​!

    ಲಾಕ್​ಡೌನ್​ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts