More

    ಐಪಿಎಲ್‌ಗಿಂತ ದೇಶಕ್ಕೆ ಆದ್ಯತೆ ನೀಡಿ, ಭಾರತೀಯ ಕ್ರಿಕೆಟಿಗರಿಗೆ ಕಪಿಲ್ ದೇವ್ ಕಿವಿಮಾತು

    ನವದೆಹಲಿ: ಭಾರತೀಯ ಕ್ರಿಕೆಟಿಗರು ಐಪಿಎಲ್‌ಗಿಂತ ದೇಶದ ಪರ ಆಡುವುದಕ್ಕೆ ಆದ್ಯತೆ ನೀಡಬೇಕು. ಇದಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸುವುದು ಬಿಸಿಸಿಐ ಜವಾಬ್ದಾರಿಯಾಗಿದೆ ಎಂದು ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

    ಸದ್ಯ ದೇಶದ ಪರ ಆಡುವುದಕ್ಕಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದೆ. ಫ್ರಾಂಚೈಸಿಗಿಂತ ದೇಶದ ಪರ ಆಡುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಐಪಿಎಲ್‌ನಲ್ಲಿ ಆಡಬೇಡಿ ಎಂದು ನಾನು ಹೇಳುವುದಿಲ್ಲ. ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ನನಗೆ ಗೊತ್ತಿಲ್ಲ. ಆದರೆ ಈ ಸಲದ ತಪ್ಪು ಪುನರಾವರ್ತನೆ ಆಗುವುದನ್ನು ತಪ್ಪಿಸಬೇಕಾದರೆ ಬಿಸಿಸಿಐ ಉತ್ತಮ ವೇಳಾಪಟ್ಟಿಯನ್ನು ರೂಪಿಸಬೇಕು ಎಂದು ಕಪಿಲ್ ವಿವರಿಸಿದ್ದಾರೆ.

    ಅಕ್ಟೋಬರ್ 15ರಂದು ಐಪಿಎಲ್ 14ನೇ ಆವೃತ್ತಿಯ 2ನೇ ಭಾಗ ಮುಕ್ತಾಯಗೊಂಡ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭಗೊಂಡಿತ್ತು. ಸೂಪರ್-12 ಹಂತಕ್ಕೆ ಮುನ್ನ ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನೂ ಆಡಿತ್ತು. ಅದರ ಬೆನ್ನಲ್ಲೇ ಪಾಕ್ ವಿರುದ್ಧ ಮೊದಲ ಪಂದ್ಯವಾಡಿತ್ತು. ಆದರೆ ಐಪಿಎಲ್ ಮತ್ತು ವಿಶ್ವಕಪ್ ನಡುವೆ ಅಂತರವಿರಬೇಕಾಗಿತ್ತು. ನಾವೀಗ ಭವಿಷ್ಯದ ಕಡೆಗೆ ಗಮನಹರಿಸಬೇಕಾಗಿದೆ. ಈಗಿನಿಂದಲೇ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಕಪಿಲ್ ಹೇಳಿದ್ದಾರೆ.

    ಭಾರತ ತಂಡ 2012ರ ಟಿ20 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಗಿದೆ. ಅಲ್ಲದೆ 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡದ ಐಸಿಸಿ ಪ್ರಶಸ್ತಿ ಬರವೂ ಮುಂದುವರಿದಿದೆ. ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿಯೂ ಕೈಗೆಟುಕದಂತಾಗಿದೆ.

    ‘ಪ್ರಮುಖ ಆಟಗಾರರು ವೃತ್ತಿಜೀವನದಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಆದರೆ ಅವರು ಉತ್ತಮ ಆಡವಾಡದೇ ಇದ್ದಾಗ ಟೀಕೆಗಳನ್ನು ಎದುರಿಸಲೇ ಬೇಕಾಗುತ್ತದೆ. ರವಿಶಾಸಿ, ವಿರಾಟ್ ಕೊಹ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದೇ ಹೋದಾಗ ನೋವಾಗುತ್ತದೆ’ ಎಂದು ಕಪಿಲ್ ಹೇಳಿದ್ದಾರೆ.

    ಆರ್‌ಸಿಬಿ, ಅಹಮದಾಬಾದ್‌ನಿಂದ ಆಫರ್; ಯಾವ ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರೆ ರವಿಶಾಸ್ತ್ರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts