More

    ಟೀಮ್ ಇಂಡಿಯಾ ಕ್ರಿಕೆಟಿಗರ ಕುಟುಂಬ ಸದಸ್ಯರಿಗೂ ಬ್ರಿಟನ್ ಟಿಕೆಟ್

    ಮುಂಬೈ: ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡದ ಕ್ರಿಕೆಟಿಗರು ಮತ್ತು ತರಬೇತಿ ಸಿಬ್ಬಂದಿಗೆ ಇಂಗ್ಲೆಂಡ್ ಪ್ರವಾಸದ ವೇಳೆ ಕುಟುಂಬದ ಸದಸ್ಯರನ್ನೂ ಕರೆದೊಯ್ಯಲು ಅನುಮತಿ ದೊರೆತಿದೆ. ಇದರಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜತೆಗೆ ಪತ್ನಿ ಅನುಷ್ಕಾ ಶರ್ಮ ಮತ್ತು ಪುತ್ರಿ ವಾಮಿಕಾ ಕೂಡ ಬ್ರಿಟನ್‌ಗೆ ತೆರಳಲಿದೆ ಎನ್ನಲಾಗಿದೆ. ಆದರೆ ಕ್ವಾರಂಟೈನ್ ನಿಯಮಗಳಿಂದಾಗಿ ಅಧ್ಯಕ್ಷ ಸೌರವ್ ಗಂಗೂಲಿ ಸಹಿತ ಬಿಸಿಸಿಐನ ಯಾವುದೇ ಅಧಿಕಾರಿಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಹಾಜರಾಗುವುದಿಲ್ಲ.

    ಸುದೀರ್ಘ ಪ್ರವಾಸದ ವೇಳೆ ಆಟಗಾರರಿಗೆ ಪತ್ನಿ, ಮಕ್ಕಳನ್ನು ಕರೆದೊಯ್ಯಲು ಬಿಸಿಸಿಐ ಈ ಮೊದಲೇ ಅನುಮತಿ ನೀಡಿತ್ತು. ಇದೀಗ ಬ್ರಿಟನ್ ಸರ್ಕಾರದಿಂದಲೂ ಅಧಿಕೃತ ಒಪ್ಪಿಗೆ ಲಭಿಸಿದೆ. ಮಾನಸಿಕ ಸವಾಲಿನ ಈ ಸಮಯದಲ್ಲಿ ಇದೊಂದು ಸಿಹಿಸುದ್ದಿಯಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಿಸಿಸಿಐ ಅಧಿಕಾರಿಗಳು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡರೆ 10 ದಿನಗಳ ಹಾರ್ಡ್ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿರುವುದರಿಂದ ಅವರು ಪ್ರವಾಸಕ್ಕೆ ತೆರಳುತ್ತಿಲ್ಲ. ಆದರೆ ಆಟಗಾರರು ಮೂರೇ ದಿನಗಳ ಕಾಲ ಹಾರ್ಡ್ ಕ್ವಾರಂಟೈನ್‌ನಲ್ಲಿರಲಿದ್ದಾರೆ.

    ಇದನ್ನೂ ಓದಿ: ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

    ಪುರುಷ-ಮಹಿಳಾ ತಂಡಗಳು ಪ್ರವಾಸದ ಆರಂಭದಲ್ಲಿ 10 ದಿನಗಳ ಕಾಲ ಸೌಥಾಂಪ್ಟನ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ. ಈ ಪೈಕಿ ಮೊದಲ 3 ದಿನದ ಹಾರ್ಡ್ ಕ್ವಾರಂಟೈನ್ ಬಳಿಕ ಜಿಮ್ ಬಳಕೆ ಮತ್ತು ನೆಟ್ ಅಭ್ಯಾಸಕ್ಕೂ ಅವಕಾಶ ಲಭಿಸಲಿದೆ. ತಂಡಗಳು ಈಗಾಗಲೆ ಮುಂಬೈ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಕೂಡ ಪೂರೈಸಿವೆ. ಜೂನ್ 18ರಿಂದ ಡಬ್ಲ್ಯುಟಿಸಿ ಫೈನಲ್ ಆಡುವುದಕ್ಕೆ ಮುನ್ನ 24 ಸದಸ್ಯರ ಭಾರತ ತಂಡ 2 ತಂಡಗಳಾಗಿ ವಿಭಾಗಿಸಲ್ಪಟ್ಟು ತ್ರಿದಿನ ಅಭ್ಯಾಸ ಪಂದ್ಯವನ್ನೂ ಆಡಲಿದೆ. ಮಹಿಳಾ ತಂಡ ಹಾರ್ಡ್ ಕ್ವಾರಂಟೈನ್ ಬಳಿಕ ಬ್ರಿಸ್ಟಲ್‌ಗೆ ತೆರಳಲಿದ್ದು, ಅಲ್ಲಿ ಜೂನ್ 16ರಿಂದ ಏಕೈಕ ಟೆಸ್ಟ್ ಪಂದ್ಯ ಆಡಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts