More

    ಮಂಗಳೂರಿನಲ್ಲಿ ಪ್ಲಾಸ್ಮಾ ಚಿಕಿತ್ಸೆ ಆರಂಭ

    ಮಂಗಳೂರು: ಕೋವಿಡ್-19 ರೋಗಿಗಳಿಗೆ ಕರೊನಾದಿಂದ ಗುಣಹೊಂದಿದವರ ಪ್ಲಾಸ್ಮಾ ನೀಡಿ ರೋಗ ಗುಣಪಡಿಸುವ ‘ಪ್ಲಾಸ್ಮಾ ಚಿಕಿತ್ಸೆ’ ಮಂಗಳೂರಿನಲ್ಲಿಯೂ ಆರಂಭವಾಗಿದೆ. ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 4 ಮಂದಿಗೆ ಈ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ.

    ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹ ಕೇಂದ್ರ ಇಲ್ಲದಿರುವುದರಿಂದ ಬೆಂಗಳೂರಿನ ಎಚ್‌ಸಿಜಿ ಪ್ಲಾಸ್ಮಾ ಬ್ಯಾಂಕ್‌ನಿಂದ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲದಿನಗಳ ಹಿಂದೆ ವೃದ್ಧೆಯೊಬ್ಬರಿಗೆ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಟ್ಕಳ ಮೂಲದ 85 ವರ್ಷ ಪ್ರಾಯದ ವೃದ್ಧರೊಬ್ಬರ ಚಿಕಿತ್ಸೆಗೆ ಅಗತ್ಯವಿದ್ದ ಪ್ಲಾಸ್ಮಾವನ್ನು ಕರೊನಾದಿಂದ ಗುಣಹೊಂದಿದ ಅನಿವಾಸಿ ಉದ್ಯಮಿ ಬಜ್ಪೆಯ ಹೈದರ್ ಅಲಿ ಮತ್ತು ಸುರತ್ಕಲ್ ಇಡ್ಯಾದ ವಕೀಲ ಜೀಶಾನ್ ಅಲಿ ದಾನ ಮಾಡಿದ್ದರು. ಪ್ರಸ್ತುತ ಇಬ್ಬರು ಪ್ಲಾಸ್ಮಾ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ.

    ನಗರದಲ್ಲಿ ಸಂಗ್ರಹ ಕೇಂದ್ರಕ್ಕೆ ಯತ್ನ
    ರಾಜ್ಯದ ಏಕೈಕ ಪ್ಲಾಸ್ಮಾ ಸಂಗ್ರಹ ಕೇಂದ್ರವಾಗಿರುವ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನಿಂದ ಈಗಾಗಲೇ ವಿವಿಧ ಜಿಲ್ಲೆಗಳಿಗೆ ಪ್ಲಾಸ್ಮಾ ರವಾನಿಸಲಾಗುತ್ತಿದೆ.
    ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಸಂಗ್ರಹಕ್ಕೆ ವ್ಯವಸ್ಥೆ ಇದೆಯಾದರೂ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇಲ್ಲಿ ‘ಪ್ಲಾಸ್ಮಾ’ ದಾನದ ಬಗ್ಗೆ ಹೆಚ್ಚು ಜಾಗೃತಿ ಇಲ್ಲ. ಮಾಹಿತಿ ಕೊರತೆಯೂ ಇದೆ. ಆದಾಗ್ಯೂ ಸಾಕಷ್ಟು ಸಂಖ್ಯೆಯ ‘ಪ್ಲಾಸ್ಮಾ’ ದಾನಿಗಳಿದ್ದಾರೆ. ಆದರೆ, ಪ್ಲಾಸ್ಮಾ ಸಂಗ್ರಹ ಕೇಂದ್ರವಿರದ ಕಾರಣ ದಾನ ಮಾಡುವವರು ಬೆಂಗಳೂರಿಗೆ ಹೋಗಬೇಕಿದೆ.

    ಇಲ್ಲಿಯೂ ಕೇಂದ್ರ ಆರಂಭವಾದರೆ, ಸಮಯ, ಹಣ ಎಲ್ಲವೂ ಉಳಿತಾಯವಾಗಬಹುದು. ಈಗಾಗಲೇ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ. ಪೂರಕವಾಗಿ ಸ್ಪಂದಿಸಿದ್ದು, ಈ ಸಂಬಂಧ ಪ್ರಯತ್ನ ನಡೆಸುವುದಾಗಿ ಭರವಸೆ ಸಿಕ್ಕಿದೆ ಎಂದು ಪ್ಲಾಸ್ಮಾ ದಾನ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ವೆಲ್‌ನೆಸ್ ಹೆಲ್ಪ್‌ಲೈನ್‌ನ ಮುಖ್ಯಸ್ಥ ಜಕಾರಿಯಾ ಪರ್ವೇಜ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts