More

    ಯೋಜನೆಗಳ ಸದುಪಯೋಗವಾಗಲಿ – ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದೊಡ್ಡಬಸಮ್ಮ ಆಶಯ

    ಕುಷ್ಟಗಿ: ಗರ್ಭಿಣಿಯರ ಆರೈಕೆಗಾಗಿ ಸರ್ಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಟ್ಟಣದ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದೊಡ್ಡಬಸಮ್ಮ ಹೇಳಿದರು. ಪಟ್ಟಣದ ಅಂಗನವಾಡಿ ಕೇಂದ್ರ 6ರಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಲಯ ಮಟ್ಟದ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

    ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಎಸ್.ವಿ.ಮಂಗಳೂರು ಮಾತನಾಡಿ, ಪೌಷ್ಟಿಕ ಆಹಾರ ಸೇವಿಸದ ಕಾರಣ ಗರ್ಭಿಣಿಯರು ಹೆರಿಗೆ ವೇಳೆ ತೊಂದರೆ ಅನುಭವಿಸುತ್ತಾರೆ. ಸರ್ಕಾರ ಜಾರಿ ಮಾಡಿರುವ ಮಾತೃ ಪೂರ್ಣ, ಮಾತೋಶ್ರೀ ಯೋಜನೆಗಳ ಲಾಭ ಪಡೆಯುವ ಮೂಲಕ ಆರೋಗ್ಯವಂತ ಮಗುವಿನ ಜನನಕ್ಕೆ ಕಾರಣರಾಗಿ ಎಂದು ಸಲಹೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಶೋಭಾ, ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಾದ ಶಿವಲಿಂಗಮ್ಮ ಹಿರೇಮಠ, ಶಿವಲೀಲಾ ಚೂರಿ, ಗಂಗಮಾಳಮ್ಮ ಚೂರಿ, ಖಾಜಾ ಬನ್ನಿ, ಆಯುಷಾ ಮೂಲಿಮನಿ, ಆಯುಷಾ ಚೌಡ್ಕಿ, ಸುನಿತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts