More

    ಬಸ್ ನಿಲ್ದಾಣಕ್ಕೆ ಹೆಚ್ಚಿನ ಜಾಗ

    ಶಿರಸಿ: ಇಲ್ಲಿನ ಮೀನು ಮಾರುಕಟ್ಟೆ ಜಾಗವನ್ನು ಬಸ್ ನಿಲ್ದಾಣ ಕಟ್ಟಲು ಬಿಟ್ಟುಕೊಡುವ ವಿಚಾರಕ್ಕೆ ನಗರಸಭೆಯಲ್ಲಿ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಪ್ರತ್ಯೇಕ ಸಭೆ ನಡೆಸಿ ಈ ಕುರಿತು ನಿರ್ಣಯ ಕೈಗೊಳ್ಳಲು ನಿರ್ಣಯಿಸಲಾಗಿದೆ.

    ನಗರಸಭೆಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ವಿುಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ನಗರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ಜಾಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆಗೆ ಪತ್ರ ಬರೆದಿದ್ದಾರೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ ಶೆಟ್ಟಿ, ಹಳೆಯ ಬಸ್ ನಿಲ್ದಾಣ ಪಕ್ಕದ ಮೀನು ಮಾರುಕಟ್ಟೆಗೆ 100 ವರ್ಷಗಳ ಇತಿಹಾಸವಿದೆ. ಈ ಜಾಗವನ್ನು ಬಸ್ ನಿಲ್ದಾಣ ನಿರ್ವಿುಸಲು ನೀಡಿದರೆ ಪರ್ಯಾಯ ವ್ಯವಸ್ಥೆ ಏನು ಎಂಬುದು ನಗರಸಭೆಗೂ ತಿಳಿದಿಲ್ಲ. ನೂರಾರು ಜನರು ಈ ಮಾರುಕಟ್ಟೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಸಾಕಷ್ಟು ಚಿಂತಿಸಿ ಕ್ರಮವಹಿಸಬೇಕು ಎಂದರು.

    ಶ್ರೀಕಾಂತ ತಾರಿಬಾಗಿಲು ಮಾತನಾಡಿ, ಜೀವನಾವಶ್ಯಕ ವಸ್ತುಗಳಲ್ಲಿ ಮೀನು, ಮಾಂಸ ಕೂಡ ಒಂದಾಗಿದೆ. ಹಾಗಾಗಿ ಈ ವಿಚಾರದಲ್ಲಿ ರಾಜಕೀಯ ಬೇಡ. ವಿಶೇಷ ಯೋಜನೆಯಡಿ ನಿರ್ವಿುಸಿದ ಮಾರುಕಟ್ಟೆ ಮೇಲೆ ಕೋಟ್ಯಂತರ ರೂ. ಸಾಲ ಇನ್ನೂ ಬಾಕಿಯಿದೆ. ಮೀನು ಮಾರುಕಟ್ಟೆ ಎಂದರೆ ಕಿರಾಣಿ ಅಂಗಡಿಯಲ್ಲ. ಬೇಕಾದ ಜಾಗದಲ್ಲಿ ಮಾಡಲು ಕಷ್ಟಸಾಧ್ಯ. ಹಾಗಾಗಿ ಸಾಧಕ- ಬಾಧಕ ವಿಚಾರ ಮಾಡಬೇಕು ಎಂದರು. ರಮಾಕಾಂತ ಭಟ್ಟ ಮಾತನಾಡಿ, ಪ್ರಸ್ತುತ ನೀಲೇಕಣಿ ಭಾಗದಲ್ಲಿ ಮೀನು ಮಾರುಕಟ್ಟೆ ಇದೆ. ಅದೇ ರೀತಿ ನಾಲ್ಕು ಭಾಗದಲ್ಲಿ ಬಿಡಿಬಿಡಿಯಾಗಿ ಮಾರುಕಟ್ಟೆ ನಿರ್ವಿುಸಿದರೆ ಅನುಕೂಲ. ಮೀನು ಮಾರುಕಟ್ಟೆ ಜಾಗವನ್ನು ಬಸ್ ನಿಲ್ದಾಣ ನಿರ್ವಿುಸಲು ಕೊಡುವುದು ಸೂಕ್ತ ಎಂದರು.

    ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಮೀನು ಮಾರುಕಟ್ಟೆ ಅಂಗಡಿಕಾರರು ಸರಿಯಾಗಿ ಬಾಡಿಗೆ ತುಂಬುತ್ತಿಲ್ಲ. ಪ್ರಸ್ತುತ 4 ಲಕ್ಷ ರೂ.ಗಳಿಗೂ ಹೆಚ್ಚಿನ ಬಾಡಿಗೆ ಬರಬೇಕಿದೆ. ಹಾಗಾಗಿ ಅದರ ಕಡೆಯೂ ಗಮನ ನೀಡಬೇಕು ಎಂದರು. ಪೌರಾಯುಕ್ತ ರಮೇಶ ನಾಯಕ ಮಾತನಾಡಿ, ನಗರದ ವಿವಿಧ ಕಡೆ ಬೀದಿಬದಿ ಮೀನು ವ್ಯಾಪಾರ ಮಾಡುವವರ ಮೇಲೆ ಕ್ರಮವಹಿಸಲಾಗುತ್ತಿದೆ.

    ಕಾಲಕಾಲಕ್ಕೆ ದಾಳಿ ಮಾಡಲಾಗುತ್ತಿದೆ ಎಂದರು. ಸಭೆಯಲ್ಲಿ ಪರ- ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಪ್ರತ್ಯೇಕ ಸಭೆ ನಡೆಸಿ ಇನ್ನಷ್ಟು ರ್ಚಚಿಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.

    ರಥಬೀದಿಗೆ ಮನವಿ: 350 ವರ್ಷ ಇತಿಹಾಸವಿರುವ ದೇವಾಲಯಕ್ಕೆ ಜಾತ್ರೆ ವೇಳೆ ಜಾಗದ ತೀರಾ ಸಮಸ್ಯೆ ಆಗುತ್ತದೆ. ನಿತ್ಯ 2-3 ಸಾವಿರ ಜನ, ವಿಶೇಷ ದಿನಗಳಲ್ಲಿ 5 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸುತ್ತಾರೆ. ವಾಹನ ಸಾಕಷ್ಟು ಬರುತ್ತಿದೆ. ಹೀಗಾಗಿ ವಾಹನ ದಟ್ಟಣೆ ಹೆಚ್ಚಿದೆ. ಇದರಿಂದ ಈ ಭಾಗದಲ್ಲಿನ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ರಥ ಎಳೆಯುವ ಸಂದರ್ಭದಲ್ಲಿ ಅವಘಡಗಳಿಗೆ ಆಸ್ಪದವಿದೆ. ಹೀಗಾಗಿ ದೇವಾಲಯದ ಎದುರಿನ ರಸ್ತೆಯನ್ನು ಕಾಮತ್ ಹೋಟೆಲ್ ಎದುರಿನಿಂದ ಕೈಗಾರಿಕಾ ವಸಾಹತುವರೆಗಿನ ರಸ್ತೆ ಅಭಿವೃದ್ಧಿ ಮಾಡುವಂತೆ ದೇವಾಲಯವರು ನಗರಸಭೆಗೆ ಕೋರಿದ್ದಾರೆ ಎಂದು ಪೌರಾಯುಕ್ತರು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಕಿರಣ ಶೆಟ್ಟರ್, ಜನರ ಅಭಿಪ್ರಾಯ ಸಂಗ್ರಹಿಸಬೇಕು. ದೇವಾಲಯದ ಮಂಡಳಿ ಜತೆ ರ್ಚಚಿಸಬೇಕು ಎಂದರು. ಶ್ರೀಕಾಂತ ತಾರಿಬಾಗಿಲು

    ಸ್ಥಾಯಿ ಸಮಿತಿಗೆ ಆಯ್ಕೆ: ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಗರದ 7ನೇ ವಾರ್ಡ್ ಸದಸ್ಯ ರಾಘವೇಂದ್ರ ಶೆಟ್ಟಿ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರಾದ ರಮಾಕಾಂತ ಭಟ್ಟ ಅವರು ರಾಘವೇಂದ್ರ ಶೆಟ್ಟಿ ಹೆಸರು ಸೂಚಿಸಿದ್ದು, ಶಾರದಾ ಶೇಟ್ ಅನುಮೋದಿಸುತ್ತಿದ್ದಂತೆ ಎಲ್ಲ ಸದಸ್ಯರು ಸಮ್ಮತಿ ಸೂಚಿಸಿದರು. ಸ್ಥಾಯಿ ಸಮಿತಿ ಸದಸ್ಯರಾಗಿ ಬಿಜೆಪಿಯ ಶರ್ವಿುಳಾ ಮಾದನಗೇರಿ, ರಮಾಕಾಂತ ಭಟ್ಟ, ಶಾರದಾ ಶೇಟ್, ನಾಗರತ್ನಾ ಜೋಗಳೇಕರ, ಶ್ರೀಕಾಂತ ಬಳ್ಳಾರಿ, ಸುಮಿತ್ರಾ ಗಾಂವಕರ, ಕಾಂಗ್ರೆಸ್​ನ ಖಾದರ ಆನವಟ್ಟಿ, ದಯಾನಂದ ನಾಯಕ, ರುಬೇಕಾ ಫರ್ನಾಡೀಸ್ ಹಾಗೂ ಪಕ್ಷೇತರ ಸದಸ್ಯೆ ಶೀಲೂ ಬ್ಲೇಜ್ ವಾಜ್ ನೇಮಕವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts