More

    ಪಿಕೆಪಿಎಸ್‌ಗಳ ಅಭಿವೃದ್ಧಿಗೆ ಪ್ರಯತ್ನ

    ಮುನವಳ್ಳಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 107ನೇ ವಾರ್ಷಿಕ ಸಭೆ, ಕರೊನಾ ಸೇನಾನಿಗಳು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಭಾನುವಾರ ಜರುಗಿತು.

    ವಿಧಾನಸಭೆ ಉಪಸಭಾಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆನಂದ ಮಾಮನಿ ಮಾತನಾಡಿ, ಸವದತ್ತಿ ತಾಲೂಕಿನ ಎಲ್ಲ ಪಿಕೆಪಿಎಸ್‌ಗಳಿಗೆ ರೈತರಿಗೆ ಅನುಕೂಲ ವಾಗುವಂತೆ ಈಗಾಗಲೇ 300 ಕೋಟಿ ರೂ. ಪತ್ತು ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ 500 ಕೋಟಿ ರೂ. ಪತ್ತು ತರುವುದಾಗಿ ಭರವಸೆ ನೀಡಿದರು.

    ಪಟ್ಟಣದ ಸೋಮಶೇಖರಮಠದ ಮುರುಘೇಂದ್ರ ಶ್ರೀ ಮಾತನಾಡಿ, ಕರೊನಾ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ಜನರು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿ ಅಂತರ ಕಾಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಂಸ್ಥೆಯ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ, 40 ವರ್ಷಗಳ ನಂತರ ಸಂಘ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸಂಘದ ಸದಸ್ಯರಿಗೆ ಲಾಭಾಂಶ ಹಂಚಿಕೆ ಮಾಡಲಾಗುತ್ತಿದೆ. ಷೇರುದಾರರು ಹಾಗೂ ಸಾಲಗಾರರು ಸಕಾಲಕ್ಕೆ ಸಾಲ ಮರುಪಾವತಿ, ಬಡ್ಡಿ ಪಾವತಿಸಿ ಪರಸ್ಪರ ಅರ್ಥಿಕ ಬೆಳವಣಿಗೆಗೆ ಸಹಕರಿಸಬೇಕು ಎಂದರು.

    ಸಂಘದ ಮುಖ್ಯ ಕಾರ್ಯನಿರ್ವಾಹಕ ಅಶೋಕ ಪಟ್ಟಣಶೆಟ್ಟಿ ಸಂಘದ ವರದಿ ಮಂಡಿಸಿದರು. ಕರೊನಾ ಸೇನಾನಿಗಳಾದ ಡಾ.ಮಹೇಶ ಚಿತ್ತರಗಿ, ಡಾ.ರವಿ ಹನಸಿ, ಡಾ.ಬಿ.ಎಚ್.ಬೈರಕದಾರ, ಡಾ.ಎಸ್.ಎಲ್.ದಂಡಗಿ, ಡಾ.ನಬಿಸಾಬ ತಾಸೇದ, ಡಾ.ಚಿದಾನಂದ ಕಮತೆ, ಡಾ.ಸಂತೋಷ ಹಂಜಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗುರುನಾಥ ಪತ್ತಾರ, ಸಿ.ಬಿ.ಕೋಣೆ, ಸುರೇಶ ಕಾಮಣ್ಣವರ ಸೇರಿ ಪತ್ರಕರ್ತರನ್ನು ಸನ್ಮಾನಿಸಿದರು.

    ಸವದತ್ತಿ ಟಿಎಪಿಸಿಎಂಎಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಸೋಮಶೇಖರ ಯಲಿಗಾರ, ಸಂಘದ ಉಪಾಧ್ಯಕ್ಷ ಕಲ್ಲಪ್ಪ ಕಿತ್ತೂರ, ಅರುಣಗೌಡ ಪಾಟೀಲ, ಅಂದಾನೆಪ್ಪ ಗೋಮಾಡಿ, ಸಿಂಗಯ್ಯ ಹಿರೇಮಠ, ಪ್ರಕಾಶ ಕಾಮಣ್ಣವರ, ವಿಠ್ಠಲ ದೊಡಮನಿ, ಮೌಲಾಸಾಬ ಬಂಡ್ರೋಳ್ಳಿ, ಎಂ.ಬಿ.ಬಾಳಿ, ಗಂಗಪ್ಪ ನಲವಡೆ, ಯಲ್ಲಪ್ಪ ಬೆರಗುಡ್ಡ ಇತರರಿದ್ದರು. ಶಿಕ್ಷಕ ಬಿ.ಬಿ.ಹುಲಿಗೊಪ್ಪ ಸ್ವಾಗತಿಸಿದರು. ಶಿಕ್ಷಕ ಎಂ.ಎ.ಕಮತಗಿ ನಿರೂಪಿಸಿದರು. ಬಾಳು ಹೊಸಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts