More

    ಏತ ನೀರಾವರಿಗೆ ಶೀಘ್ರ ಟೆಂಡರ್

    ತರೀಕೆರೆ: ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.

    ಬುಧವಾರ ವಿಠ್ಠಲಾಪುರ ಗ್ರಾಮದಲ್ಲಿ ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಯಡಿ 2.70 ಕೋಟಿ ರೂ. ವೆಚ್ಚದ ಕಾಂಕ್ರಿಟ್ ಮತ್ತು ಡಾಂಬರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಏತ ನೀರಾವರಿ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಪೈಪ್​ಲೈನ್ ಕಾಮಗಾರಿಗೆ ಸರ್ವೆ ಮಾಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

    ವಿಠ್ಠಲಾಪುರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಹೊಸಳ್ಳಿ ತಾಂಡದಿಂದ ವಿಠ್ಠಲಾಪುರ ಗ್ರಾಮದವರೆಗೆ ಸಿಮೆಂಟ್ ರಸ್ತೆ, ವಿಠ್ಠಲಾಪುರ ಗ್ರಾಮದಿಂದ ಕುಂಟಿನಮಡು ಗ್ರಾಮದವರೆಗಿನ ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಅಮೃತಾಪುರ ಹೊಬಳಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ರಸ್ತೆ ಭಾಗಶಃ ಪೂರ್ಣಗೊಂಡಂತಾಗಿದ್ದು, ರಸ್ತೆ ಅಭಿವೃದ್ಧಿ ಜತೆ ಮೂಲ ಸೌಕರ್ಯಕ್ಕೆ ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

    ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಡಿ.ಹಾಲಾನಾಯ್ಕ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಬಿ.ಸುಧಾಕರ್, ನೇರಲಕೆರೆ ಗ್ರಾಪಂ ಆಡಳಿತಾಧಿಕಾರಿ ಪರಮಶಿವಮೂರ್ತಿ, ಗ್ರಾಪಂ ಸದಸ್ಯರು ಇತರರಿದ್ದರು.

    ಈ ಬಾರಿ ಸೋಂಪುರ ಜಾತ್ರೆ ಸರಳ: ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸೋಂಪುರ ಶ್ರೀ ಪ್ರಸನ್ನ ಸೋಮೇಶ್ವರಸ್ವಾಮಿ ಜಾತ್ರೆಯನ್ನು ಸರಳವಾಗಿ ನಡೆಸಲಾಗುವುದು ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.

    ಬುಧವಾರ ಸೋಂಪುರ ಗ್ರಾಮದ ಶ್ರೀ ಪ್ರಸನ್ನ ಸೋಮೇಶ್ವರಸ್ವಾಮಿ ಯಾತ್ರಿ ನಿವಾಸದಲ್ಲಿ ಜಾತ್ರೆ ಅಂಗವಾಗಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಕರೋನಾ ವಿಶ್ವವನ್ನು ಕಾಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಗುಲದಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡುವುದಿಲ್ಲ. ದೇಗುಲ ಆವರಣದಲ್ಲಿ ಅಂಗಡಿ ಮುಂಗಟ್ಟು ತೆರೆಯಲೂ ಅವಕಾಶವಿಲ್ಲ. ಜಾತ್ರೆಯನ್ನು 2 ಅಥವಾ 3 ದಿನಕ್ಕೆ ಸೀಮಿತಗೊಳಿಸಲಾಗುವುದು ಎಂದರು.

    ತಾಪಂ ಅಧ್ಯಕ್ಷೆ ಪದ್ಮಾವತಿ, ತಾಪಂ ಸದಸ್ಯ ಕೆಂಪೇಗೌಡ, ತಹಸೀಲ್ದಾರ್ ಸಿ.ಜಿ.ಗೀತಾ, ಆರ್​ಐಗಳಾದ ಸೋಮಶೇಖರ್, ವಿಎ ಶ್ರೀಧರ್, ಪದ್ಮರಾಜ್, ಲಕ್ಷ್ಮ್ಮ್ ನಾಯ್ಕ, ಕರಿಬಸಮ್ಮ, ಗ್ರಾಮಸ್ಥರಾದ ಶಿವಯೋಗಿ, ಎಲ್.ಎಸ್.ಸಂಜೀವ್​ಕುಮಾರ್, ಫಣಿರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts