More

    ಡಿಸಿಎಂ ಹುದ್ದೆ ಬೇಕು ಎಂದ ಸಚಿನ್​ ಪೈಲಟ್​; ಮುಖ್ಯಮಂತ್ರಿ ಕೈ ಸೇರಿದ ಐವರು ಶಾಸಕರ ಪಟ್ಟಿ

    ಜೈಪುರ: ಕಾಂಗ್ರೆಸ್​​ನಿಂದ ರೆಬಲ್​ ಆಗಿ ಹೋಗಿದ್ದ ಸಚಿನ್​ ಪೈಲಟ್ ಇದೀಗ ಮರಳಿದ್ದಾರೆ. ಸಿಎಂ ಅಶೋಕ್​ ಗೆಹ್ಲೋಟ್​ ಜತೆ ಮತ್ತೆ ಕೈ ಜೋಡಿಸಿದ್ದಾರೆ.

    ಆದರೆ ಹೀಗೆ ಪಕ್ಷಕ್ಕೆ ಮರಳಿರುವ ಸಚಿನ್​ ಪೈಲಟ್​ ಬೇಡಿಕೆಗಳ ಪಟ್ಟಿ ತುಸು ದೊಡ್ಡದಾಗಿದೆ. ಚಿನ್​ ಪೈಲಟ್​ ತಮ್ಮ ಐವರು ಆಪ್ತ ಎಂಎಲ್​ಎಗಳ ಲಿಸ್ಟ್​​ನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ಗೆ ನೀಡಿದ್ದು, ಅವರೆಲ್ಲರಿಗೂ ನಿರ್ಣಾಯಕ ಹುದ್ದೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ಹಾಗೇ ಉಪಮುಖ್ಯಮಂತ್ರಿ ಹುದ್ದೆಯನ್ನೂ ತಮ್ಮ ಬಣಕ್ಕೆ ನೀಡುವಂತೆ ಕೇಳಿದ್ದಾರೆ.

    ಸಚಿನ್​ ಪೈಲಟ್​ ಅವರು ಈ ಹಿಂದೆ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದವರು. ಅವರು ಬಂಡಾಯ ಎದ್ದ ನಂತರ ಆ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿತ್ತು. ಇದೀಗ ತಮ್ಮ ಬಣಕ್ಕೆ ಎರಡು ಸಚಿವ ಸ್ಥಾನ, ಡಿಸಿಎಂ ಹುದ್ದೆ ಹಾಗೂ ಇಬ್ಬರಿಗೆ ಕ್ಯಾಬಿನೆಟ್​ ಹುದ್ದೆಗಳನ್ನು ನೀಡಬೇಕು ಎಂದು ಸಚಿನ್​ ಪೈಲಟ್​ ಹೇಳಿದ್ದಾರೆ.

    ರಾಜಸ್ಥಾನದಲ್ಲಿ ನಡೆದಿದ್ದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಜಾಗೊಂಡಿದ್ದ ಶಾಸಕರಾದ ವಿಶ್ವೇಂದ್ರ ಸಿಂಗ್​ ಮತ್ತು ರಮೇಶ್​ ಮೀನಾ ಮತ್ತೆ ಪಕ್ಷಕ್ಕೆ ವಾಪಸ್​ ಆಗಲಿದ್ದಾರೆ ಹಾಗೂ ಅವರಿಗೂ ಪ್ರಮುಖ ಸ್ಥಾನ ಮಾನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆದಿಪುರುಷನಾಗಿ ಪ್ರಭಾಸ್​; ಕನ್ನಡದಲ್ಲೂ ಬರಲಿದೆ ಈ 3ಡಿ ಸಿನಿಮಾ!

    ಸಚಿನ್​ ಪೈಲಟ್​ ಅವರಿಗೆ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿಯವರ ಸಂಪೂರ್ಣ ಬೆಂಬಲ ಇದೆ ಹಾಗೂ ಗೆಹ್ಲೋಟ್​ ಜತೆಗಿನ ಮಾತುಕತೆಯಲ್ಲೂ ಪೈಲಟ್​ ಅವರೇ ಮೇಲುಗೈ ಸಾಧಿಸಿದ್ದಾರೆ. ಹಾಗಾಗಿ ಅವರೆಲ್ಲ ಬೇಡಿಕೆಗಳೂ ಈಡೇರಿಲಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಇದು ಕಥೆಯಲ್ಲ…. ಹದಿನಾರು ವರ್ಷ ಜೈಲು ವಾಸ ಅನುಭವಿಸಿದವ ಈಗ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರದ ಪ್ರಾಧ್ಯಾಪಕ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts