More

    ಚೀನಾದಲ್ಲಿ ಈಗ ಹಂದಿಗಳಿಗೆ ಭಾರಿ ಬೇಡಿಕೆ: ಬೋಯಿಂಗ್ ವಿಮಾನದಲ್ಲಿ ಸಾಗಾಟ!

    ಪ್ಯಾರಿಸ್: ಕರೊನಾ ವೈರಸ್ ಮಹಾಮಾರಿಯಿಂದಾಗಿ ವಾಣಿಜ್ಯ ವಿಮಾನಗಳ ಹಾರಾಟ ಅಸ್ತವ್ಯಸ್ತಗೊಂಡಿದೆ. ಆದರೆ ಅಲೆಕ್ಸಿ ಇಸಾಯ್‌ಕಿನ್ ಒಡೆತನದ ವೋಲ್ಗಾ-ಡೆಪ್ರ್ ಸಮೂಹದ ವಿಮಾನಗಳು ಪೂರ್ತಿ ಭರ್ತಿಯಾಗಿ ಹಾರಾಟ ನಡೆಸುತ್ತಿವೆ. ಈ ವಿಮಾನಗಳಲ್ಲಿ ಜನರು ಪ್ರಯಾಣ ನಡೆಸುತ್ತಿಲ್ಲ. ಬೃಹತ್ ಪ್ರಮಾಣದಲ್ಲಿ ಸಾಗಾಟ ಆಗುತ್ತಿರುವುದು ಹಂದಿಗಳು! ವೈರಸ್ ಹರಡುವುದನ್ನು ತಡೆಯಲು ವಿಧಿಸಿದ್ದ ನಿರ್ಬಂಧಗಳಿಂದಾಗಿ ಚೀನಾದಲ್ಲಿ ಹಂದಿಗಳ ಕೊರತೆ ಕಾಡುತ್ತಿತ್ತು. ಈಗ ಅಮೆರಿಕ, ಯುರೋಪ್ ಇನ್ನಿತರ ದೇಶಗಳಿಂದ ಹಂದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

    ರಷ್ಯಾ ಮೂಲದ ವೋಲ್ಗಾ-ಡೆಪ್ರ್ ಸಮೂಹ ಈ ವರ್ಷ ಫ್ರಾನ್ಸ್‌ನಿಂದ ಚೀನಾಕ್ಕೆ 3000ಕ್ಕೂ ಹೆಚ್ಚು ಹಂದಿಗಳನ್ನು ಸಾಗಿಸಿದೆ. ಬೋಯಿಂಗ್ 747 ಸರಕು ಸಾಗಣೆ ವಿಮಾನದಲ್ಲಿ ಮರದ ಕ್ರೇಟ್‌ಗಳಲ್ಲಿಟ್ಟು 10,400 ಕಿಮೀ ದೂರದ ಚೀನಾಕ್ಕೆ ಸಾಗಿಸಲಾಗುತ್ತದೆ. ಹಿಂದೆ ಬಾಧಿಸಿದ್ದ ಆಫ್ರಿಕನ್ ಹಂದಿ ಜ್ವರದಿಂದ ಚೀನಾದ ಹಂದಿ ಸಮೂಹವೇ ಬಹುತೇಕ ನಾಶವಾಗಿತ್ತು. ಹಂದಿ ಸಂಖ್ಯೆಯನ್ನು ಮತ್ತೆ ಹೆಚ್ಚಿಸಲು ಫ್ರಾನ್ಸ್‌ನಿಂದ ಈ ಪ್ರಾಣಿಗಳನ್ನು ಚೀನಾ ತರಿಸಿಕೊಳ್ಳುತ್ತಿದೆ.

    ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

    ಚೀನಾ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಮೆರಿಕದಿಂದ 2,54,533 ಟನ್ ಹಂದಿ ಮಾಂಸ ಆಮದು ಮಾಡಿಕೊಂಡಿತ್ತು. ಚೀನಾಕ್ಕೆ ಹಂದಿ ಮಾಂಸ ಸರಬರಾಜು ಮಾಡುವ ವಿಚಾರದಲ್ಲಿ ಯುರೋಪನ್ನು ಅಮೆರಿಕ ಈ ಮೂಲಕ ಹಿಂದಿಕ್ಕಿತ್ತು. 2019ರ ಇಡೀ ವರ್ಷ ಚೀನಾ ಯುರೋಪ್‌ನಿಂದ 2,45,000 ಟನ್ ಹಂದಿ ಮಾಂಸ ಆಮದು ಮಾಡಿಕೊಂಡಿತ್ತು. ವೋಲ್ಗಾ ಡೆಪ್ರ್ ಕಂಪನಿ ವೈರಸ್ ವಿರುದ್ಧ ಸೆಣಸುತ್ತಿರುವ ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿ ಮುಂತಾದ ದೇಶಗಳಿಗೆ ಮಾಸ್ಕ್, ಆರೋಗ್ಯ ಸೂಟ್‌ಗಳು, ವೈದ್ಯಕೀಯ ಉಪಕರಣಗಳು ಹಾಗೂ ರಸ್ತೆಗಳಲ್ಲಿ ಕ್ರಿಮಿನಾಶಕ ಸಿಂಪಡಿಸುವ ವಾಹನಗಳನ್ನು ಕೂಡ ಸಾಗಿಸುತ್ತಿದೆ.

    ಚೀನಾದಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ವ್ಯಾಪಿಸುತ್ತಿರುವುದರಿಂದ ಹಂದಿ ಮಾಂಸದ ಬೆಲೆ ತೀವ್ರ ಏರಿಕೆಯಾಗಿದೆ. ಇದು ದೇಶದ ಜನರ ಜೀವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಣದುಬ್ಬರ ಏರಿಕೆಗೂ ಕಾರಣವಾಗಿದೆ. ಅದಲ್ಲದೆ, ಚೀನಾದಲ್ಲಿ ಹಂದಿ ಮಾಂಸ ಮಾರಾಟ ಒಂದು ದೊಡ್ಡ ಉದ್ಯಮ. ಚೀನಿಯರ ವಾರ್ಷಿಕ ತಲಾ ಹಂದಿ ಮಾಂಸ ಸೇವನೆ ಪ್ರಮಾಣ 30 ಕೆ.ಜಿ. ಅಮೆರಿಕದವರ ವಾರ್ಷಿಕ ಸರಾಸರಿ ಬಳಕೆ 26 ಕೆ.ಜಿ. ಹಾಗೂ ಬ್ರಿಟನ್‌ನದ್ದು 18 ಕೆ.ಜಿ.; ಚೀನಾದ ಶೇ. 40 ಹಂದಿಗಳು ಎಎಸ್‌ಎಫ್‌ನಿಂದ ನಾಶವಾಗಿವೆ. ಹೀಗಾಗಿ ಬೆಲೆ ಗಗನಮುಖಿಯಾಗಿದೆ.

    ಇದನ್ನೂ ಓದಿ: ತಮಿಳುನಾಡಿಗೆ ನೀರು ಬೀಡಲು ಕಾವೇರಿ ಪ್ರಾಧಿಕಾರ ಆದೇಶ: ಮೇಕೆದಾಟು ಪ್ರಸ್ತಾವನೆಗೂ ತಡೆ

    ಸಾಯಿಸುವಂತೆ ಹೇಳಿದ್ದು ಪಾಲಕರೇ!: ವೃದ್ಧದಂಪತಿಯನ್ನು ಕೊಂದ ಮಗನ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts