More

    ಈ ಹಂದಿ ಮಾಡಿದ ಪೇಂಟಿಂಗ್​ ಬೆಲೆ ಎಷ್ಟು ಗೊತ್ತಾ? ₹50 ಲಕ್ಷಕ್ಕೂ ಹೆಚ್ಚು ದುಡಿಮೆ ಮಾಡಿದೆಯಂತೆ ಈ​ ಆರ್ಟಿಸ್ಟ್​ ಹಂದಿ!

    ಬ್ಲೂಮ್‌ಫಾಂಟೈನ್​: ಕಲಾಕೃತಿಗಳನ್ನು ರಚಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ತೀರಾ ತಾಳ್ಮೆ ಮತ್ತು ಏಕಾಗ್ರತೆಯಿಂದ ಮಾಡಬೇಕಾದ ಕೆಲಸವದು. ಮನುಷ್ಯರೇ ಚಿತ್ರ ಬಿಡಿಸಲು ಒದ್ದಾಡುವಾಗ ಈ ಒಂದು ಹಂದಿ ಸುಲಭವಾಗಿ ಚಿತ್ರಗಳನ್ನು ಬಿಡಿಸುತ್ತದೆಯಂತೆ. ಈ ಹಂದಿ ಬಿಡಿಸುವ ಚಿತ್ರಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವವರೂ ಇದ್ದಾರಂತೆ.

    ಹೌದು! ಇದು ಆಶ್ಚರ್ಯವಾದರೂ ಸತ್ಯದ ಸಂಗತಿ. ದಕ್ಷಿಣ ಆಫ್ರಿಕಾದ ಈ ಆರ್ಟಿಸ್ಟ್​ ಹಂದಿಯ ಹೆಸರು ಪಿಗ್ಕಾಸೊ. ಜೊವಾನ್ನೆ ಲೆಫ್ಸನ್ ಹೆಸರಿನ ವ್ಯಕ್ತಿ ಈ ಹಂದಿಯನ್ನು ನಾಲ್ಕು ವರ್ಷಗಳಿಂದ ಸಾಕುತ್ತಿದ್ದು ಅದಕ್ಕೆ ಪೇಂಟಿಂಗ್​ ಮಾಡೋದನ್ನು ಹೇಳಿಕೊಟ್ಟಿದ್ದಾರೆ. ಈವರೆಗೆ ಸುಮಾರು 100ಕ್ಕೂ ಹೆಚ್ಚು ಕಲಾಕೃತಿಗಳನ್ನು ಪಿಗ್ಕಾಸೊ ರಚಿಸಿದೆಯಂತೆ. ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಈ ಪೇಂಟಿಂಗ್​ಗಳಿಂದ ಸಿಕ್ಕಿದೆಯಂತೆ. ಆ ಎಲ್ಲ ಹಣವನ್ನು ಬೇರೆ ಪ್ರಾಣಿಗಳು ರಕ್ಷಣೆಗಾಗಿ ಬಳಸಲಾಗುತ್ತಿದೆಯಂತೆ.

    ಇತ್ತೀಚೆಗೆ ಪಿಗ್ಕಾಸೊ ಬ್ರಿಟನ್‌ನ ಪ್ರಿನ್ಸ್​ ಹ್ಯಾರಿ ಕಲಾಕೃತಿಯನ್ನು ರಚಿಸಿದೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ರಚಿಸಿದ ಈ ಕಲಾಕೃತಿಯನ್ನು ಪಿಗ್ಕಾಸೊ ಅಭಿಮಾನಿಯೊಬ್ಬರು 2.36 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. (ಏಜೆನ್ಸೀಸ್​)

    ವಾಟ್ಸಪ್ 50 ನಿಮಿಷ ಸ್ಥಗಿತಗೊಂಡಿತ್ತು, ಆದ್ರೆ ಬಂಗಾಳದಲ್ಲಿ 50 ವರ್ಷ ಅಭಿವೃದ್ದಿ ಸ್ಥಗಿತಗೊಂಡಿದೆ; ದೀದಿಗೆ ತಿವಿದ ಮೋದಿ

    ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts