More

    ತಾಯಿ ಸಿಂಹವು ತನ್ನ ಮರಿಗೆ ಏನು ಹೇಳ್ತಿದೆ ಗೆಸ್​ ಮಾಡಿ: ಇಲ್ಲಿದೆ ನೋಡಿ ಕುತೂಹಲಕಾರಿ ಉತ್ತರ!

    ನವದೆಹಲಿ: ಮಾನವರನ್ನು ಹೊರತುಪಡಿಸಿ ಪ್ರಾಣಿ-ಪಕ್ಷಿಗಳಲ್ಲಿನ ಮಕ್ಕಳ ಪ್ರೀತಿಯನ್ನು ವರ್ಣಿಸಲು ಪದಗಳೇ ಸಾಲದು. ಏಕೆಂದರೆ, ಮುಗ್ಧ ಜೀವಿಗಳಲ್ಲಿ ಸ್ವಾರ್ಥ ಎಂಬುದು ಇರುವುದೇ ಇಲ್ಲ. ಇಂತಹ ಎಷ್ಟೋ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರ ಮನಸ್ಪರ್ಶಿಸಿರುವುದನ್ನು ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​) ಪರ್ವೀನ್​ ಕಾಸ್ವಾನ್​ ಎಂದಿನಂತೆ ಶುಕ್ರವಾರವೂ ಸಹ ಫೋಟೋವೊಂದನ್ನು ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಸಿಂಹವೊಂದು ತನ್ನ ಮರಿಗಳ ಬಗ್ಗೆ ಪ್ರೀತಿ ತೋರುತ್ತಿದೆ. ತಾಯಿ ಸಿಂಹವೂ ತನ್ನ ಒಂದು ಮರಿಯ ಬೆನ್ನಿನ ಮೇಲೆ ಕಾಲನ್ನಿಟ್ಟು ಏನೋ ಹೇಳುತ್ತಿರುವಂತೆ ಭಾಸವಾಗುತ್ತದೆ.

    ಇದನ್ನೂ ಓದಿ: PHOTOS: ಸ್ಯಾಂಡಲ್​ವುಡ್​ಗೆ ಹ್ಯಾಟ್ರಿಕ್​ ಹೀರೋ ಸಾರಥ್ಯ; ಶಿವಣ್ಣನಿಗೆ ಶುಭ ಕೋರಿದ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​

    ಫೋಟೋ ಕುರಿತು ಬರೆದುಕೊಂಡಿರುವ ಕಾಸ್ವಾನ್​, ತಾಯಿ ಸಿಂಹವು ತನ್ನ ಮರಿಗೆ ಏನು ಹೇಳುತ್ತಿದೆ ಗೆಸ್​ ಮಾಡಿ ಎಂದು ತನ್ನ ಟ್ವಿಟರ್​ ಫಾಲೋವರ್ಸ್​ಗೆ ಕೇಳಿದ್ದಾರೆ. ಆಗಸ್ಟ್​ 10ರ ವಿಶ್ವ ಸಿಂಹ ದಿನಾಚರಣೆ ಹಿನ್ನೆಲೆಯಲ್ಲಿ ಕಾಸ್ವಾನ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

    ಸದ್ಯ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 8 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ 1000ಕ್ಕೂ ಹೆಚ್ಚು ರೀಟ್ವೀಟ್​ ಮಾಡಲಾಗಿದೆ. ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್​ ಬಾಕ್ಸ್​ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

    ನೀನು ಮಗುವಾಗಿಯೇ ಇದ್ದುಬಿಡು ಬೆಳೆಯಬೇಡ ಮುಂದೊಮ್ಮೆ ಬಲೆಗೆ ಬೀಳುತ್ತೀಯ ಎಂದು ಮಗನಿಗೆ ಹೇಳುತ್ತಿರಬಹುದೇನೋ ಎಂದು ನೆಟ್ಟಿಗರೊಬ್ಬರು ಗೆಸ್​ ಮಾಡಿದ್ದಾರೆ. ನಾನು ಮಗುವಾಗಿದ್ದಾಗ ಅವರು ಬ್ಲ್ಯಾಕ್​​ ಆ್ಯಂಡ್​ ವೈಟ್​ ಫೋಟೋ ತೆಗೆಯುತ್ತಿದ್ದರು ಎಂದು ಮಗುವಿಗೆ ಹೇಳಿದೆ ಎಂದು ಊಹಿಸಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ನೆಟ್ಟಿಗರು ಊಹಿಸಿದ್ದು, ನಿಮಗೇನು ತೋಚುತ್ತದೋ ಅದನ್ನು ಕಾಮೆಂಟ್​ ಮಾಡಿ. (ಏಜೆನ್ಸೀಸ್​)

    ಇದನ್ನೂ ಓದಿ: ಕೃಷ್ಣಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿದ ಕುರಿಗಾಹಿ, 200 ಕುರಿಗಳು

    ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts