More

    ಪಠ್ಯೇತರ ಚಟುವಟಿಕೆಯಿಂದ ಶಾರೀರಿಕ ಬೆಳವಣಿಗೆ ಸಾಧ್ಯ

    ಬಾಗಲಕೋಟೆ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೋಳ್ಳುವುದರಿಂದ ಮಾನಸಿಕ ಸದೃಢರಾಗುತ್ತಾರೆ ಎಂದು ಮುಧೋಳದ ಎಸ್.ಆರ್.ಕಂಠಿ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಆರ್ ಪಾಟೀಲ ಹೇಳಿದರು.

    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಂದೆ-ತಾಯಿ ಮತ್ತು ಶಿಕ್ಷಕ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತಾವೇನಾಗಬಹುದು ಮತ್ತು ಜೀವನದಲ್ಲಿ ನಡೆಯುವ ಪ್ರತಿ ಕ್ಷಣಗಳಿಗೂ ಸಿದ್ಧರಿರುವಂತೆ ಅವರನ್ನು ಪ್ರೇರೇಪಿಸುವ ಕೆಲಸ ಮಾಡಬೇಕು ಎಂದರು.

    ಇದನ್ನೂ ಓದಿ: ಕೌಶಲ ಜೀವನದ ಅವಿಭಾಜ್ಯ ಅಂಗ

    ಕಲಾ ವಿಭಾಗಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದವರೇ ಆಗಿರುವುದರಿಂದ ಅವರಲ್ಲಿರುವ ಕೀಳರಿಮೆಯನ್ನು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಕರಾದವರು ತರಗತಿಯ ಹೊರತಾಗಿಯೂ ವಿದ್ಯಾರ್ಥಿಗಳಲ್ಲಿರುವ ವಿಶೇಷ ಗುಣ ಮತ್ತು ಶಕ್ತಿ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

    ಪ್ರಾಚಾರ್ಯ ಎಸ್.ಆರ್.ಮೂಗನೂರಮಠ, ಎಂ.ಪಿ.ಬಡಿಗೇರ, ಪಿಯುಸಿ ವಿಭಾಗದ ಸಂಚಾಲಕ ಡಾ.ಆರ್.ಎಂ.ಬೆಣ್ಣೂರ, ಎಂ ಎಂ. ಹಿರೇಮಠ, ಡಾ.ಅಪ್ಪು ರಾಠೋಡ, ಡಾ.ಲಲಿತಾ ಚವಡಿ ಸೇರಿ ಇತರರು ಇದ್ದರು. ವಿ.ಎಸ್.ಚಿಗರಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts