More

    ಕೌಶಲ ಜೀವನದ ಅವಿಭಾಜ್ಯ ಅಂಗ

    ಚಿಕ್ಕಪಡಸಲಗಿ: ಕಲೆ ಮತ್ತು ಕೌಶಲಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಮಗುವೂ ಯಾವುದಾದರೂ ಒಂದು ಕಲೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

    ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂಭ್ರಮ ಶನಿವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಅನೇಕ ರೀತಿಯ ಒತ್ತಡಗಳು ನಮ್ಮನ್ನು ಕಾಡುತ್ತವೆ. ಇವುಗಳನ್ನು ಎದುರಿಸಲು ಪ್ರತಿ ಮಗುವೂ ಯಾವುದಾದರೂ ಒಂದು ವಿಶೇಷ ಸಾಧನೆ ಮಾಡಬೇಕು.

    ತಮಗೆ ಇಷ್ಟವಾದ ಕಲೆ, ಕೌಶಲ, ಕ್ರೀಡೆಯಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಜಗಕ್ಕೆ ಪರಿಚಯಿಸಬೇಕು. ಅದಕ್ಕೆ ಸಂಭ್ರಮ ಶನಿವಾರ ಒಂದು ಉತ್ತಮ ಅವಕಾಶ ಎಂದು ಹೇಳಿದರು.

    ಇದನ್ನೂ ಓದಿ: ಅವಳಿ ತಾಲೂಕು ಬರ ಪೀಡಿತವೆಂದು ಘೋಷಿಸಿ

    ಮಕ್ಕಳಲ್ಲಿ ನಾಯಕತ್ವ ಗುಣ ಹೆಚ್ಚಿಸುವ ಸಲುವಾಗಿ ಶಾಲೆಯ ಪ್ರತಿ ಮಗುವೂ ಭಾಗಿಯಾಗುವ ರೀತಿಯಲ್ಲಿ ಮಕ್ಕಳನ್ನು ಸಂಸತ್ತಿನ ಮತ್ತು ವಿವಿಧ ಸಂಘಗಳ ಸದಸ್ಯರು, ಮಂತ್ರಿಗಳು, ಅಧ್ಯಕ್ಷ, ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಶಿಕ್ಷಕ ಸಂಗನಬಸವ ಉಟಗಿ ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು. ಶಿಕ್ಷಕ ಬಾಹುಬಲಿ ಮುತ್ತೂರ ಸಂಘದಲ್ಲಿ ಮಕ್ಕಳ ಪಾತ್ರದ ಕುರಿತು ತಿಳಿಸಿಕೊಟ್ಟರು.

    ವಿದ್ಯಾರ್ಥಿಗಳಾದ ಪೂರ್ಣಿಮಾ ಕುರಣಿ, ಸಾವಿತ್ರಿ ಪಕಾಲಿ, ಮಧುಮತಿ ಚಿಕ್ಕಲಕಿ, ಪುಷ್ಪಾ ಹುದಲಿ, ಲಕ್ಷ್ಮಣ ತೇರದಾಳ ತಮ್ಮ ಪ್ರತಿಭೆ ಪ್ರದರ್ಶಿಸಿ ಸಂಭ್ರಮಿಸಿದರು.

    ಶಿಕ್ಷಕರಾದ ಸಂಜೀವ ಝಂಬುರೆ, ಚಂದ್ರಕಾಂತ ಪೋಲಿಸ್, ಆಸಿಫಾಭಾನು ಮೋಮಿನ್, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.
    ಶಿಕ್ಷಕ ಸಂಗನಬಸವ ಉಟಗಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಾರದಾ ಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts