More

    ಪೆಗಾಸಸ್ ಸ್ಪೈವೇರ್​ ಬಳಸಿ ರಾಜಕಾರಣಿಗಳು, ಪತ್ರಕರ್ತರ ಫೋನ್​ ಹ್ಯಾಕ್​: ಕೇಂದ್ರ ಸರ್ಕಾರ ಹೇಳಿದ್ದು ಹೀಗೆ… ​​

    ನವದೆಹಲಿ: ದೇಶದ 17 ಮಾಧ್ಯಮ ಸಂಸ್ಥೆಗಳ 40ಕ್ಕೂ ಹೆಚ್ಚು ಪತ್ರಕರ್ತರು, ಮಾನವ ಹಕ್ಕು ಕಾರ್ಯರ್ತರು, ಕೆಲವು ಉದ್ಯಮಿಗಳು ಹಾಗೂ ರಾಜಕಾರಣಿಗಳ ಫೋನ್​ಗಳ ಮೇಲೆ ಪೆಗಾಸಸ್ ಬೇಹುಗಾರಿಕಾ ಸಾಫ್ಟ್​ವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂಬ ‘ದಿ ವೈರ್’ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

    17 ಮಾಧ್ಯಮ ಸಂಸ್ಥೆಗಳ ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಇಸ್ರೇಲಿ ಮೂಲದ ಎನ್​ಎಸ್​ಒ ಸಂಸ್ಥೆಯೊಂದರ ಮೂಲಕ ಮಿಲಿಟರಿ ಬೇಹುಗಾರಿಕಾ ಸಾಫ್ಟ್​ವೇರ್ ಪೆಗಾಸಸ್ ಬಳಸಿ ಈ ಹ್ಯಾಕಿಂಗ್ ಮಾಡಲಾಗಿತ್ತು ಎಂದು ‘ದಿ ವೈರ್’ ಹಾಗೂ ಇತರೆ ಅಂತಾರಾಷ್ಟ್ರೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ ಅಪರಿಚಿತ ಏಜೆನ್ಸಿಗಳ ಮೂಲಕ ಅನಧಿಕೃತವಾದ ಯಾವುದೇ ಹಸ್ತಕ್ಷೇಪ ಅಥವಾ ಬೇಹುಗಾರಿಕೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಸುಮಾರು 300 ಅಧಿಕೃತ ಭಾರತೀಯ ಮೊಬೈಲ್​ ನಂಬರ್​ಗಳಲ್ಲಿ ಕಾನೂನು ತಜ್ಞರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದ್ದಾರೆಂದು ವರದಿಯಾಗಿದೆ.

    40 ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು, ಓರ್ವ ಸಾಂವಿಧಾನಿಕ ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇಬ್ಬರು ಹಾಲಿ ಸಚಿವರು, ರಕ್ಷಣಾ ಪಡೆಗಳು ಹಾಲಿ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಕೆಲ ಉದ್ಯಮಿಗಳು ಸೇರಿದಂತೆ ಹಲವರ ಮೇಲೆ ಪೆಗಾಸಸ್​ ಸಾಫ್ಟ್​ವೇರ್​ ಮೂಲಕ ಹ್ಯಾಕ್​ ಮಾಡಲಾಗಿದೆ ಎಂದು ‘ದಿ ವೈರ್​’ ವರದಿಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಹೆಸರನ್ನು ಸಹ ಪ್ರಕಟಿಸುವುದಾಗಿ ತಿಳಿಸಿದೆ.

    2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಚಾಲನೆಯಲ್ಲಿ 2018 ಮತ್ತು 2019 ರ ನಡುವೆ ಹೆಚ್ಚಿನ ಹೆಸರುಗಳನ್ನು ಗುರಿಯಾಗಿಸಲಾಗಿತ್ತು ಎಂದು ವೈರ್‌ನ ದತ್ತಾಂಶ ವಿಶ್ಲೇಷಣೆ ತೋರಿಸುತ್ತದೆ ಆದರೆ, ಎಲ್ಲಾ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿಲ್ಲ.

    ಇನ್ನು ಪೆಗಾಸಸ್ ಅನ್ನು ಮಾರಾಟ ಮಾಡುವ ಇಸ್ರೇಲಿ ಕಂಪನಿ, ಎನ್ಎಸ್ಒ ಗ್ರೂಪ್, ಆರೋಪಗಳನ್ನು ನಿರಾಕರಿಸಿದೆ. ತನ್ನ ಸ್ಪೈವೇರ್ ಅನ್ನು “ಪರಿಶೀಲಿಸಿದ ಸರ್ಕಾರಗಳಿಗೆ” ಮಾತ್ರ ನೀಡಲಾಗುತ್ತದೆ ಎಂದು ಹೇಳಿರುವ ಎನ್​ಎಸ್​ಒ “ಮಾನಹಾನಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ. ಭಾರತ ಸರ್ಕಾರವು ಹ್ಯಾಕಿಂಗ್​ ಆಗಿರುವುದನ್ನು ನಿರಾಕರಿಸಿದೆ. ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರವಿಲ್ಲ. (ಏಜೆನ್ಸೀಸ್​)

    ದಕ್ಷಿಣ ಭಾರತಕ್ಕೆ ರಶ್ಮಿಕಾ ನಂ.1: ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ

    ವೈಶಿಷ್ಟ್ಯ-ಬೆರಗುಗಳ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್

    ಆಫ್ರಿಕಾದಲ್ಲಿ ಭಾರತೀಯರ ಲೂಟಿ, ನಮಗೇನು ಪಾಠ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts