More

    ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ಸರ್ಕಾರಿ ಅಧಿಕಾರಿ: ವೈರಲ್​ ಆಯ್ತು ವಿಡಿಯೋ!

    ಮನಿಲಾ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ವರ್ಕ್​ ಫ್ರಮ್​ ಹೋಮ್​ ಇರುವುದರಿಂದ ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತಗಳ ಸಭೆಗಳು ಬಹುತೇಕ ಆನ್​ಲೈನ್​ನಲ್ಲೇ ನಡೆಯುತ್ತಿವೆ. ಅದರಲ್ಲೂ ಜೂಮ್​ ಆ್ಯಪ್​ ಮೂಲಕವೇ ಹೆಚ್ಚು ಸಭೆಗಳು ನಡೆದಿವೆ. ಹೀಗಿರುವಾಗ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುವ ವೇಳೆ ಅಪ್ಪಿತಪ್ಪಿ ಕ್ಯಾಮೆರಾ ಆನ್​ ಆಗಿದ್ದರೆ ಏನೆಲ್ಲಾ ಅನಾಹುತ ಆಗಬಹುದು ಎಂಬುದಕ್ಕೆ ಮತ್ತೊಂದು ಘಟನೆ ಉದಾಹರಣೆಯಾಗಿದೆ.

    ಫಿಲಿಪೈನ್ಸ್​ ರಾಷ್ಟ್ರದ ಸರ್ಕಾರಿ ಅಧಿಕಾರಿಯೊಬ್ಬರು ನಿಯಮಿತ ಆನ್​ಲೈನ್​ ಸಭೆಯ ನಡುವೆಯೇ ತಮ್ಮ ಕಾರ್ಯದರ್ಶಿಯೊಂದಿಗೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದಿದ್ದು, ಮುಜುಗರಕ್ಕೀಡಾಗಿದ್ದಾರೆ.

    ಇದನ್ನೂ ಓದಿ: ಮಧ್ಯರಾತ್ರಿ ಎಚ್ಚರಗೊಂಡಾಗ ಪತಿ ನನ್ನ ಬಳಿಯಿರಲಿಲ್ಲ: ತನ್ನದೇ ರಹಸ್ಯ ಘಟನೆ ಬಿಚ್ಚಿಟ್ಟ ಮಹಿಳೆ!

    ದಿ ಸನ್​ ವೆಬ್​ಸೈಟ್​ ಈ ಬಗ್ಗೆ ಗುರುವಾರ ವರದಿ ಮಾಡಿದ್ದು, ಕ್ಯಾವಿಟೆ ಪ್ರಾಂತ್ಯದ ಫಾತಿಮಾ ದೊಸ್​ ಗ್ರಾಮ ಸಭೆಯ ಕ್ಯಾಪ್ಟನ್​ ಜೀಸಸ್​ ಎಸ್ಟಿಲ್​ ಎಂಬುವರು ಕ್ಯಾಮರಾ ಆನ್​ನಲ್ಲಿದೆ ಎಂಬುದನ್ನು ಅರಿಯದೇ ಕಾರ್ಯದರ್ಶಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಆನ್​ಲೈನ್​ನಲ್ಲಿ ಸಭೆ ನಡೆಯುತ್ತಿರುವಾಗಲೇ ಕೋಣೆಯೊಂದರ ಮೂಲೆಯಲ್ಲಿ ಇಬ್ಬರು ಲೈಂಗಿಕ ತೊಡಗಿರುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಸಹ ಪ್ರಸಾರ ಮಾಡಿದ್ದು, ವೈರಲ್​ ಆಗಿದೆ. ವೈಯಕ್ತಿಕ ಕೆಲಸದಲ್ಲಿ ತೊಡಗುವ ಮುನ್ನ ಎಸ್ಟಿಲ್​ ಒಮ್ಮೆ ಕ್ಯಾಮೆರಾ ಆಫ್​ ಮಾಡಲು ಯತ್ನಿಸಿದ್ದಾರೆ. ಆದರೆ, ಆಫ್​ ಆಗಿದೆ ಅಂದುಕೊಂಡು ತಮ್ಮ ಕೆಲಸದಲ್ಲಿ ನಿರತರಾಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

    ಅದೊಂದು ನಿಯಮಿತ ಕೌನ್ಸಿಲ್​ ಮೀಟಿಂಗ್​ ಆಗಿದ್ದು, ಆಗಸ್ಟ್​ 26ರಂದು ಸಭೆ ಕರೆಯಲಾಗಿತ್ತು. ಸುಮಾರು ಹೊತ್ತು ಕಾರ್ಯದರ್ಶಿ ಮತ್ತು ಸರ್ಕಾರಿ ಅಧಿಕಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಅದನ್ನು ನೋಡಿಯೂ ಇತರರು ತಮ್ಮ ಪಾಡಿಗೆ ಸಭೆಯನ್ನು ಮುಂದುವರಿಸಿದ್ದಾರೆ. ಎಸ್ಟಿಲ್​ ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿದ ಬಳಿಕ ಮತ್ತೆ ಸಭೆಯನ್ನು ಸೇರಿಕೊಂಡರು.

    ಇದನ್ನೂ ಓದಿ: ಇದು ವ್ಯಕ್ತಿಯೊಬ್ಬನ ಅತ್ಯಂತ ಕೆಟ್ಟ ಅನೈತಿಕ ಸಂಬಂಧದ ಅನುಭವವಂತೆ: ಮಗನಿಗೆ ತಂದೆಯೇ ವಿಲನ್!​

    ಸಭೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯೊಬ್ಬರು ಎಸ್ಟಿಲ್​ ಅವರ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡು ಬಳಿಕ ಸಾರ್ವಜನಿಕವಾಗಿ ಹರಿಬಿಟ್ಟಿದ್ದಾರೆ. ಇದಾದ ಬೆನ್ನಲ್ಲೇ ಕೆಲ ಗ್ರಾಮಸ್ಥರು ಸಭೆಯಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ಎಸ್ಟಿಲ್​ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ನ್ಯೂಸ್​ ಮಾಧ್ಯಮಗಳಲ್ಲೂ ಚರ್ಚೆಯ ವಿಷಯವಾಗಿದೆ. ಈ ವಿಚಾರ ಎಸ್ಟಿಲ್​ ಮತ್ತವರ ಕಾರ್ಯದರ್ಶಿಗೂ ತಿಳಿದು ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸರ್ಕಾರವೂ ಕ್ರಮಕ್ಕೆ ಸೂಚಿಸಿದೆ ಎಂದು ಹೇಳಲಾಗಿದೆ.

    ಇದೇ ತಿಂಗಳ ಮಧ್ಯೆದಲ್ಲಿ ಬ್ರೆಜಿಲ್​ನಲ್ಲಿ ಕೌನ್ಸಿಲ್​ ಸಭೆಯನ್ನು ಸೋಶಿಯಾಲಿಸಂ ಆ್ಯಂಡ್​ ಲಿಬರ್ಟಿ ಪಕ್ಷದ ಸದಸ್ಯ ಲಿಯೊನೆಲ್​ ಬ್ರಿಜೊಲಾ ಎಂಬುವರು ಆಯೋಜಿಸಿದ್ದರು. ಸಭೆಯ ನಡುವೆಯೇ ದಂಪತಿ ಸೆಕ್ಸ್​ನಲ್ಲಿ ತೊಡಗಿರುವುದನ್ನು ನೋಡಿಯೂ ಅಥವಾ ನೋಡದೆ ಚರ್ಚೆ ಮುಂದುವರಿಸಿರುವುದು ವಿಡಿಯೋದಲ್ಲಿದೆ. ರಿಯೋಡಿ ಜನೈರೋ ನಗರದ ಕೌನ್ಸಿಲ್​ ಸಭೆ ಅದಾಗಿತ್ತು. ಕರೊನಾ ವೈರಸ್​​ ಸಾಂಕ್ರಾಮಿಕ ಸಮಯದಲ್ಲಿ ಪುರಸಭೆಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರವನ್ನು ಹೇಗೆ ಖಾತರಿಪಡಿಸುವುದು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿತ್ತು. ಇದರ ನಡುವೆ ದಂಪತಿಯ ಅಶ್ಲೀಲ ವಿಡಿಯೋವೂ ನೇರಪ್ರಸಾರವಾಗಿತ್ತು. (ಏಜೆನ್ಸೀಸ್​)

    ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ವೈರಲ್​ ಆಯ್ತು ವಿಡಿಯೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts